ಬಿಗ್ ಬಾಸ್ ಮನೆಯಲ್ಲಿ ಸಂತೂರ್ ಮಮ್ಮಿ ಮಯೂರಿ ಎಷ್ಟೊಂದು ಕ್ಯೂಟ್; ಇಲ್ಲಿವೆ ಫೋಟೋಗಳು
ನಟಿಯಾಗಿ ಮಯೂರಿ ಅವರು ಎಲ್ಲರಿಗೂ ಪರಿಚಯ ಇದ್ದಾರೆ. ಅವರನ್ನು ತೆರೆಮೇಲೆ ನೋಡಿ ಎಲ್ಲರೂ ಇಷ್ಟಪಟ್ಟಿದ್ದಾರೆ. ಅವರ ವ್ಯಕ್ತಿತ್ವ ಹೇಗೆ ಎಂಬುದು ಫ್ಯಾನ್ಸ್ಗೆ ತಿಳಿದಿರಲಿಲ್ಲ. ಬಿಗ್ ಬಾಸ್ ಮನೆಯಲ್ಲಿ ಅವರ ನಿಜವಾದ ವ್ಯಕ್ತಿತ್ವ ಅನಾವರಣಗೊಂಡಿದೆ.
Updated on: Sep 30, 2022 | 7:28 PM

ನಟಿ ಮಯೂರಿ ಅವರು ಬಿಗ್ ಬಾಸ್ ಮನೆ ಸೇರಿದ್ದಾರೆ. 9ನೇ ಸೀಸನ್ನಲ್ಲಿ ಅವರು ಪ್ರಮುಖ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ಅವರನ್ನು ಫ್ಯಾನ್ಸ್ ಸಂತೂರ್ ಮಮ್ಮಿ ಎಂದು ಕರೆಯುತ್ತಿದ್ದಾರೆ.

ನಟಿಯಾಗಿ ಮಯೂರಿ ಅವರು ಎಲ್ಲರಿಗೂ ಪರಿಚಯ ಇದ್ದಾರೆ. ಅವರನ್ನು ತೆರೆಮೇಲೆ ನೋಡಿ ಎಲ್ಲರೂ ಇಷ್ಟಪಟ್ಟಿದ್ದಾರೆ. ಅವರ ವ್ಯಕ್ತಿತ್ವ ಹೇಗೆ ಎಂಬುದು ಫ್ಯಾನ್ಸ್ಗೆ ತಿಳಿದಿರಲಿಲ್ಲ. ಬಿಗ್ ಬಾಸ್ ಮನೆಯಲ್ಲಿ ಅವರ ನಿಜವಾದ ವ್ಯಕ್ತಿತ್ವ ಅನಾವರಣಗೊಂಡಿದೆ.

ಮಯೂರಿ ಸಖತ್ ಎಮೋಷನಲ್. ಇದು ಬಿಗ್ ಬಾಸ್ ಮನೆಯಲ್ಲಿ ಸಾಬೀತಾಗಿದೆ. ಅವರಿಗೆ ಚಿಕ್ಕ ವಿಚಾರಕ್ಕೆ ಬೇಸರವಾದರೂ ಕಣ್ಣೀರು ಹಾಕುತ್ತಾರೆ.

ಇತ್ತೀಚೆಗೆ ನೇಹಾ ಗೌಡ ಜತೆ ಮಯೂರಿ ಅವರು ಜಗಳ ಆಡಿದ್ದರು. ಊಟದ ವಿಚಾರಕ್ಕೆ ಸಂಬಂಧಿಸಿ ಇಬ್ಬರ ಮಧ್ಯೆ ಮಿಸ್ಅಂಡರ್ಸ್ಟ್ಯಾಂಡಿಂಗ್ ಆಗಿತ್ತು. ಈ ವೇಳೆ ಮಯೂರಿ ಅವರು ಕಣ್ಣೀರು ಹಾಕಿದ್ದರು.

ಸದ್ಯ ಬಿಗ್ ಬಾಸ್ ಮನೆಯಲ್ಲಿ 18 ಸ್ಪರ್ಧಿಗಳು ಇದ್ದಾರೆ. ಈ ಬಾರಿ ಜೋಡಿ ಟಾಸ್ಕ್ ನೀಡಲಾಗಿದೆ. ಮಯೂರಿ ಹಾಗೂ ಸಾನ್ಯಾ ಜೋಡಿ ಆಗಿದ್ದಾರೆ.