ನೀವು ಇಷ್ಟಪಟ್ಟು ತಿನ್ನುವ ಈ ಆಹಾರಗಳೇ ಬಾಲಿವುಡ್ ಸ್ಟಾರ್ ಗಳಿಗೂ ಇಷ್ಟವಂತೆ
ಸೆಲೆಬ್ರಿಟಿಗಳು ತಿನ್ನುವ ಆಹಾರದ ಬಗ್ಗೆ ಎಲ್ಲರಿಗೂ ಕುತೂಹಲ ಸಹಜ. ದೇಹವನ್ನು ಫಿಟ್ ಆಗಿಟ್ಟುಕೊಂಡು ತಮ್ಮ ಮೈಮಾಟದಿಂದಲೇ ಗಮನ ಸೆಳೆಯುವ ನಟಿಯರನ್ನು ಕಂಡಾಗಲ್ಲಂತೂ ಇವರೇನು ಹೊಟ್ಟೆಗೆ ತಿನ್ನೋದೇ ಇಲ್ವಾ ಎಂದುಕೊಳ್ಳುತ್ತೇವೆ. ಆದರೆ ಈ ಸೆಲೆಬ್ರಿಟಿಗಳು ತಮ್ಮ ನೆಚ್ಚಿನ ಫುಡ್ ಗಳನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೇನೋ ನಿಜ. ಆಹಾರ ಸೇವನೆಯ ಜೊತೆಗೆ ವರ್ಕ್ ಔಟ್ ಕಡೆಗೂ ಗಮನ ಕೊಡುತ್ತಾರೆ. ಹಾಗಾದ್ರೆ ಬಾಲಿವುಡ್ ನಟ ನಟಿಯರ ಇಷ್ಟದ ಆಹಾರಗಳ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.
ಸಲ್ಮಾನ್ ಖಾನ್ - ಬಹುತೇಕರ ನೆಚ್ಚಿನ ಆಹಾರವಾದ ಬಿರಿಯಾನಿಯೂ ಬಾಲಿವುಡ್ ನಟ ಸಲ್ಲು ಬಾಯ್ ಅವರಿಗೆ ಬಲು ಇಷ್ಟವಂತೆ. ಖಾರ ಮಿಶ್ರಿತ ಸುವಾಸನೆ ಭರಿತ ಪದಾರ್ಥಗಳನ್ನೊಳಗೊಂಡ ಅಮ್ಮ ಮಾಡಿದ ಬಿರಿಯಾನಿಯೆಂದರೆ ಅಚ್ಚು ಮೆಚ್ಚು. ಬಿರಿಯಾನಿ ಜೊತೆಗೆ ಕಬಾಬ್ ಮತ್ತು ಮೋದಕ ಕೂಡ ಅವರ ಇಷ್ಟದ ಆಹಾರವಾಗಿದೆ.
1 / 5
ಕತ್ರಿನಾ ಕೈಫ್ - ಬಾಲಿವುಡ್ ನಟಿ ಕತ್ರಿನಾ ಕೈಫ್ ಗೆ ಐಸ್ ಕ್ರೀಂ ಎಂದರೆ ತುಂಬಾನೇ ಇಷ್ಟವಂತೆ. ಈ ಕೆಲವು ಆಹಾರಗಳನ್ನು ಮಿತವಾಗಿ ಸೇವಿಸುವುದರೊಂದಿಗೆ ಫಿಟ್ ನೆಸನ್ನು ಕಾಯ್ದುಕೊಳ್ಳುತ್ತಾರೆ. ಆದರೆ ಕತ್ರಿನಾ ಕೈಫ್ ಅವರ ಇಷ್ಟದ ಡೆಸರ್ಟ್ ಆದ ಐಸ್ ಕ್ರೀಂ ಮತ್ತು ಸಿನ್ನಮೋನ್ ರೋಲ್ಸ್ ಮಿಸ್ ಮಾಡದೇ ಸೇವಿಸುತ್ತಾರೆ
2 / 5
ಹೃತಿಕ್ ರೋಷನ್ - ಬಾಲಿವುಡ್ ನಟ ಹೃತಿಕ್ ರೋಷನ್ರವರ ನೆಚ್ಚಿನ ತಿನಿಸು ಸಮೋಸ. ಡಜನ್ ಗಟ್ಟಲೇ ಸಮೋಸವನ್ನು ಈ ನಟನ ಮುಂದೆ ಇಟ್ಟರೆ ಬಾಯಿ ಚಪ್ಪರಿಸಿಕೊಂಡು ಎಲ್ಲವನ್ನು ಖಾಲಿ ಮಾಡಿ ಬಿಡುತ್ತಾರೆ.
3 / 5
ದೀಪಿಕಾ ಪಡುಕೋಣೆ : ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆಗೆ ಇಷ್ಟವಾದ ಆಹಾರಗಳಲ್ಲಿ ಒಂದು ದಕ್ಷಿಣ ಭಾರತದ ತಿನಿಸಾದ ಇಡ್ಲಿ. ಈ ಸಮುದ್ರ ಆಹಾರಗಳನ್ನು ಚಪ್ಪರಿಕೊಂಡು ತಿನ್ನುತ್ತಾರೆ. ಅದಲ್ಲದೇ ಸೇವ್ ಪುರಿಯಿಂದ ಹಿಡಿದು ಮೆಡಿಟರೇನಿಯನ್ ಅಡುಗೆಯವರೆಗೂ ಎಲ್ಲವು ಇಷ್ಟವಂತೆ. ಹೀಗಾಗಿ ದೀಪಿಕಾ ಪಡುಕೋಣೆಯವರ ಅಚ್ಚು ಮೆಚ್ಚಿನ ಆಹಾರಗಳ ಪಟ್ಟಿ ಬಹಳ ದೊಡ್ಡದಿದೆ ಎನ್ನಬಹುದು.
4 / 5
ಅಮಿತಾಬ್ ಬಚ್ಚನ್ - ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅಲಹಾಬಾದಿನರಾಗಿದ್ದು ಅವರ ಇಷ್ಟದ ಆಹಾರ ಬೆಂಡಿ ಸಬ್ಜಿ. ಬೆಂಡೆಕಾಯಿ ಪಲ್ಯ ಹಾಗೂ ಹೆಸರುಬೇಳೆ ಸಾರು ಈ ನಟನಿಗೆ ಅಚ್ಚು ಮೆಚ್ಚಾಗಿದ್ದು ಈ ಆಹಾರಗಳನ್ನು ಇಷ್ಟ ಪಟ್ಟು ಸವಿಯುತ್ತಾರೆ.