AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಇತಿಹಾಸ… ಒಂದೇ ದಿನ 4 ಪಂದ್ಯಗಳು ಡ್ರಾ..!

Fifa World Cup 2026: ಫಿಫಾ ವಿಶ್ವಕಪ್​ನ ಮೊದಲ ಸುತ್ತಿನಲ್ಲೇ ಭರ್ಜರಿ ಪೈಪೋಟಿ ಕಂಡು ಬರುತ್ತಿದೆ. ಅದರಲ್ಲೂ ಗ್ರೂಪ್-ಜಿ ಮತ್ತು ಗ್ರೂಪ್-ಹೆಚ್​ಗಳಲ್ಲಿ ಕಣಕ್ಕಿಳಿದಿರುವ ಎಲ್ಲಾ ತಂಡಗಳು ತಲಾ 1 ಅಂಕ ಹಾಗೂ ಸಮಾನ ಗೋಲುಗಳ ವ್ಯತ್ಯಾಸದೊಂದಿಗೆ ಸಂಪೂರ್ಣ ಸಮಬಲ ಸಾಧಿಸಿವೆ. ಇದರಿಂದಾಗಿ ಮುಂದಿನ ನಾಕೌಟ್ ಹಂತಕ್ಕೆ ಯಾರು ಪ್ರವೇಶಿಸಲಿದ್ದಾರೆ ಎಂಬ ಕುತೂಹಲ ದುಪ್ಪಟ್ಟಾಗಿದೆ.

ಝಾಹಿರ್ ಯೂಸುಫ್
|

Updated on: Jun 16, 2026 | 12:46 PM

Share
FIFA World Cup 2026: ಫಿಫಾ ವಿಶ್ವಕಪ್​ನ ಐದನೇ ದಿನವು ಐತಿಹಾಸಿಕ ಹಾಗೂ ಅಪರೂಪದ ದಾಖಲೆಗೆ ಸಾಕ್ಷಿಯಾಗಿದೆ. ಈ ದಾಖಲೆ ನಿರ್ಮಾಣವಾಗಿರುವುದು ಬರೋಬ್ಬರಿ 68 ವರ್ಷಗಳ ಬಳಿಕ. ಅಂದರೆ ಅರವತ್ತೆಂಟು ವರ್ಷಗಳ ಬಳಿಕ ಫಿಫಾ ವಿಶ್ವಕಪ್​ನಲ್ಲಿ ಒಂದೇ ದಿನ ಎಲ್ಲಾ ಪಂದ್ಯಗಳು ಡ್ರಾ ಆಗಿದೆ. (PC: Fifa)

1 / 6
ಇದಕ್ಕೂ ಮುನ್ನ, 1958ರ ಜೂನ್ 15 ರಂದು ವಿಶ್ವಕಪ್‌ನಲ್ಲಿ ಒಂದೇ ದಿನ 4 ಪಂದ್ಯಗಳು ಡ್ರಾ ಆಗಿದ್ದವು. ಆದರೆ, ಅಂದು ಒಟ್ಟು 8 ಪಂದ್ಯಗಳು ನಡೆದಿದ್ದವು (ಅಂದರೆ ಶೇ. 100 ರಷ್ಟು ಪಂದ್ಯಗಳು ಡ್ರಾ ಆಗಿರಲಿಲ್ಲ). ಆದರೆ ಈ ಬಾರಿ ಜೂನ್ 15, 2026 ರಂದು ನಿಗದಿಯಾಗಿದ್ದ ಎಲ್ಲಾ 4 ಪಂದ್ಯಗಳೂ ಡ್ರಾ ಆಗುವ ಮೂಲಕ ಶೇ. 100 ರಷ್ಟು ಪಂದ್ಯಗಳು ಸಮಬಲಗೊಂಡ ವಿಶಿಷ್ಟ ದಾಖಲೆ ಸೃಷ್ಟಿಯಾಗಿದೆ. ಡ್ರಾಗೊಂಡ ಪಂದ್ಯಗಳ ವಿವರ ಈ ಕೆಳಗಿನಂತಿವೆ... ((PC: Wiki)

2 / 6
ಸ್ಪೇನ್ vs ಕೇಪ್ ವರ್ಡೆ (0–0): ವಿಶ್ವಕಪ್‌ಗೆ ಹೊಸದಾಗಿ ಪದಾರ್ಪಣೆ ಮಾಡಿರುವ ಕೇಪ್ ವರ್ಡೆ ತಂಡವು, ಬಲಿಷ್ಠ ಸ್ಪೇನ್ ತಂಡಕ್ಕೆ ಒಂದೂ ಗೋಲು ಹೊಡೆಯಲು ಬಿಡದೆ ಪಂದ್ಯವನ್ನು 0-0 ಅಂತರದಿಂದ ಸಮಬಲಗೊಳಿಸಿತು. (PC: Fifa)

3 / 6
ಬೆಲ್ಜಿಯಂ vs ಈಜಿಪ್ಟ್ (1–1) : ಈ ಪಂದ್ಯದ ಆರಂಭದಲ್ಲಿ ಈಜಿಪ್ಟ್ ತಂಡ ಮುನ್ನಡೆ ಸಾಧಿಸಿತ್ತಾದರೂ, ಬೆಲ್ಜಿಯಂನ ರೊಮೇಲು ಲುಕಾಕು ಮೈದಾನಕ್ಕೆ ಬಂದ ತಕ್ಷಣ ಎದುರಾಳಿ ತಂಡದ ಓನ್-ಗೋಲ್ (Own-Goal) ನೆರವಿನಿಂದ ಈ ಪಂದ್ಯವನ್ನು 1-1 ಅಂತರದಲ್ಲಿ ಡ್ರಾಗೊಳಿಸಿದೆ. (PC: Fifa)

4 / 6
ಸೌದಿ ಅರೇಬಿಯಾ vs ಉರುಗ್ವೆ (1–1): ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಪಂದ್ಯದಲ್ಲಿ, ಉರುಗ್ವೆ ತಂಡದ ಮ್ಯಾಕ್ಸಿಮಿಲಿಯಾನೊ ಅರಾಜೊ 80ನೇ ನಿಮಿಷದಲ್ಲಿ ಗೋಲು ಬಾರಿಸಿ ಪಂದ್ಯವನ್ನು 1-1 ಅಂತರದಿಂದ ಸಮಬಲದಲ್ಲಿ ಕೊನೆಗೊಳಿಸಿದ್ದಾರೆ. (PC: Fifa)

5 / 6
ಇರಾನ್ vs ನ್ಯೂಝಿಲೆಂಡ್: ರಣರೋಚಕ ಪೈಪೋಟಿಗೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಉಭಯ ತಂಡಗಳು ತಲಾ 2 ಗೋಲುಗಳನ್ನು ಹೊಡೆಯುವ ಮೂಲಕ ಪಂದ್ಯ ಹೈ-ಸ್ಕೋರಿಂಗ್ ಪಂದ್ಯವನ್ನು ಡ್ರಾದಲ್ಲಿ ಕೊನೆಗೊಳಿಸಿದ್ದಾರೆ. (PC: Fifa)

6 / 6
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us
ಆರ್‌ಎಸ್‌ಎಸ್​ನವರು ಹಿಂದುಗಳಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ

66 ರೌಡಿಶೀಟರ್​ಗಳಿಗೆ ಮುಕ್ತಿ ಸದ್ಯಕ್ಕಿಲ್ಲ: ಕ್ರಮ ತಡೆಹಿಡಿದ ಸಚಿವ ಖರ್ಗೆ

ತಾಯಿ ಪಾರ್ಥೀವ ಶರೀರದ ಎದುರು ಕಣ್ಣೀರು ಹಾಕಿದ ಶ್ರೀಮುರಳಿ

ಸಿಎಂ ಡಿಕೆಶಿಗೆ ಮೋಹನ್ ದಾಸ್ ಪೈ ಸಲಹೆ: ಉದ್ಯಮಿ ಹೇಳಿದ್ದೇನು?

ಕೊನೆಗೂ ಖಾತೆ ವಹಿಸಿಕೊಂಡ ಸಚಿವ ಕೃಷ್ಣ ಭೈರೇಗೌಡ: ಜಿಬಿಎ ಕಚೇರಿಯಲ್ಲಿ ಸಭೆ

ಹುಬ್ಬಳ್ಳಿ ಭಂಡಿವಾಡದಲ್ಲಿ ಹತ್ತೇ ನಿಮಿಷದಲ್ಲಿ ಉಳೀತು ಇನ್ನೂರು ಮಕ್ಕಳ ಜೀವ

ಒಬ್ಬೊಬ್ರಿಗೆ ಕೊಡ್ತೀನಿ ನೋಡಿ; ಸಮಂತಾ ಎಚ್ಚರಿಕೆ ನೀಡಿದ್ದು ಯಾರಿಗೆ?

ಎಸಿಎಫ್​​ ಮನೆಯಲ್ಲಿ ಖಜಾನೆ ಕಂಡು ಲೋಕಾಯಕ್ತ ಅಧಿಕಾರಿಗಳೇ ಶಾಕ್​​

ಮೈಸೂರು ಪಬ್​​ ದುರಂತ ಕೇಸ್​​ಗೆ ಟ್ವಿಸ್ಟ್​​: ಕೇಳಿಬಂತು ಸ್ಫೋಟಕ ಆರೋಪ

ಮೇಲ್ಛಾವಣಿ ಕುಸಿತದಿಂದ ಜೀವ ಭಯದಲ್ಲೇ ಸರ್ಕಾರಿ ಶಾಲೆಗೆ ಬರುತ್ತಿರುವ ಮಕ್ಕಳು