Bhavana Rao: ಬೋಲ್ಡ್ ಫೋಟೋ ಮೂಲಕ ಗಮನ ಸೆಳೆಯುತ್ತಿರುವ ‘ಗಾಳಿಪಟ’ ಸುಂದರಿ; ಇಲ್ಲಿದೆ ಫೋಟೋ ಆಲ್ಬಂ
ಯೋಗರಾಜ್ ಭಟ್ ಪರಿಚಯಿಸಿದ ಭಾವನಾ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರು. ಈಗ ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ.
Updated on: Jun 24, 2023 | 12:18 PM

ನಟಿ ಭಾವನಾ ರಾವ್ ಅವರು ‘ಗಾಳಿಪಟ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ಅವರು ಮಾಡಿದ್ದ ಪಾವ್ನಿ ಪಾತ್ರ ಸಾಕಷ್ಟು ಜನಪ್ರಿಯತೆ ಪಡೆಯಿತು.

ಯೋಗರಾಜ್ ಭಟ್ ಪರಿಚಯಿಸಿದ ಈ ಪ್ರತಿಭೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರು. ಈಗ ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ.

‘ಗಾಳಿಪಟ’ ಚಿತ್ರ ತೆರೆಕಂಡ ಬಳಿಕ ಹಲವು ಸಿನಿಮಾಗಳಲ್ಲಿ ಭಾವನಾ ಬ್ಯುಸಿ ಆಗಿದ್ದಾರೆ. ತಮಿಳು ಚಿತ್ರರಂಗಕ್ಕೂ ಅವರು ಪರಿಚಯಗೊಂಡರು.

ಈ ಮಧ್ಯೆ ‘ರ್ಯಾಂಬೋ 2’ ಮೊದಲಾದ ಸಿನಿಮಾಗಳಲ್ಲಿ ವಿಶೇಷ ಹಾಡುಗಳಿಗೂ ಭಾವನಾ ಹೆಜ್ಜೆ ಹಾಕಿದ್ದಾರೆ. ಈ ಮೂಲಕವೂ ಅವರು ಗಮನ ಸೆಳೆದಿದ್ದಾರೆ.

ಇತ್ತೀಚೆಗೆ ತೆರೆಗೆ ಬಂದು ಮೆಚ್ಚುಗೆ ಪಡೆದ ‘ಹೊಂದಿಸಿ ಬರೆಯಿರಿ’ ಸಿನಿಮಾದಲ್ಲಿ ಭೂಮಿಕಾ ಪಾತ್ರ ಮಾಡಿ ಗಮನ ಸೆಳೆದರು. ಇದಾದ ಬಳಿಕ ಅವರ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ.

ಭಾವನಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ಲಕ್ಷಾಂತರ ಹಿಂಬಾಲಕರು ಇದ್ದಾರೆ. ಆಗಾಗ ಬೋಲ್ಡ್ ಫೋಟೋ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.

ಈಗ ಭಾವನಾ ಹಂಚಿಕೊಂಡ ಹೊಸ ಫೋಟೋಗಳು ವೈರಲ್ ಆಗಿವೆ. ಇದಕ್ಕೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ.



















