Ganesha Chaturthi 2021: ಬೆಂಗಳೂರಿನ ಕೆಲವು ಪ್ರಸಿದ್ಧ ಗಣಪತಿ ದೇವಸ್ಥಾನಗಳು
ಪ್ರಥಮ ಪೂಜಿತ, ಏಕದಂತ, ವಿನಾಯಕ, ಗಣೇಶ ಚತುರ್ಥಿ ಸಮೀಪಿಸುತ್ತಿದೆ. ಇಂತಹ ಮಂಗಳಕರ ಸಂದರ್ಭದಲ್ಲಿ ವಿಘ್ನ ವಿನಾಶಕನ ದರ್ಶನ ಮಾಡುವುದು ಅತಿ ಮುಖ್ಯ. ಹಾಗಾದ್ರೆ ಬನ್ನಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಧ್ಯಾತ್ಮಿಕತೆಯ ಸ್ಪರ್ಶ ನೀಡಿ ಇಲ್ಲಿರುವ ಪ್ರಸಿದ್ಧ ಗಣಪತಿ ದೇವಸ್ಥಾನದ ಪರಿಚಯ ಮಾಡಿಕೊಡುತ್ತೀವಿ. ಗಣೇಶನ ದೇವಸ್ಥಾನಕ್ಕೆ ಭೇಟಿ ನೀಡಿ ಆತನ ಕೃಪೆಗೆ ಪಾತ್ರರಾಗಿ.
Updated on:Sep 07, 2021 | 5:14 PM

ganesha chaturthi 2021 special famous ganesha temples in bangalore

ganesha chaturthi 2021 special famous ganesha temples in bangalore

3. ಕಸ್ತೂರಬಾ ರಸ್ತೆಯ ವಾಹನ ಗಣಪ(Traffic Ganesha Temple) ಬೆಂಗಳೂರಿನ ಕಸ್ತೂರಬಾ ರಸ್ತೆಗೆ ಅಭಿಮುಖವಾಗಿ ವಾಹನ ಗಣಪತಿ ದೇವಸ್ಥಾನವಿದೆ. ಇಲ್ಲಿ ಹೊಸ ವಾಹನಗಳನ್ನು ಪೂಜೆ ಮಾಡಿಸಿದರೆ ಅಪಘಾತವಾಗುವುದಿಲ್ಲ ಎಂಬ ನಂಬಿಕೆ. ಈ ದೇವಸ್ಥಾನ ಸುಮಾರು 600 ವರ್ಷ ಹಳೆಯದು. ಇದು ಮೈಸೂರು ಅರಸ ವಂಶದ ಚಾಮರಾಜ ಒಡೆಯರ್ ಈ ಗಣಪತಿ ಭಕ್ತರಾಗಿದ್ದರು. ತಾವು ಖರೀದಿಸುವ ಹೊಸ ಕಾರುಗಲನ್ನು ಇಲ್ಲಿಯೇ ಪೂಜೆ ಮಾಡಿಸುತ್ತಿದ್ದರಂತೆ.

4. ಜಯನಗರದ ಪವರ್ಫುಲ್ ಗಣೇಶ(Jayanagar Powerful Ganesha) ಜಯನಗರದ 4ನೇ ಬ್ಲಾಕ್ನಲ್ಲಿರುವ ಪವರ್ಫುಲ್ ಗಣೇಶ ದೇವಸ್ಥಾನಕ್ಕೆ ಹೆಚ್ಚಾಗಿ ಪ್ರಭಾವಿ ರಾಜಕಾರಣಿಗಳು, ಉದ್ಯಮಿಗಳು ಭೇಟಿ ನೀಡಿ ದರ್ಶನ ಮಾಡುತ್ತಾರೆ. ಇನ್ನು ವಿಶೇಷವೆಂದರೆ ಬೆಂಗಳೂರಿನ ಇದೊಂದೇ ದೇವಸ್ಥಾನದಲ್ಲಿ ದೇವರಿಗೆ ವಜ್ರದ ಕಿರೀಟ ಮತ್ತು ಆಭರಣಗಳನ್ನು ಹಾಕುವುದನ್ನು ನಾವು ನೋಡ ಬಹುದು. ಅದೂ ಕೂಡ ಹಬ್ಬದ ದಿನಗಳಲ್ಲಿ.

5. ಮಹಾಲಕ್ಷ್ಮೀ ಲೇಜೌಟ್ನ ಪಂಚಮುಖಿ ಗಣಪ(Jayanagar Powerful Ganesha) ಮಹಾಲಕ್ಷ್ಮೀ ಲೇಜೌಟ್ನ ಕುಮಾರಸ್ವಾಮಿ ದೇಗುಲದಲ್ಲಿ ದಕ್ಷಿಣಾಭಿಮುಖವಾಗಿ ಬಲಮುರಿ ಸೊಂಡಿಲು ಹೊಂದಿರುವ ಪಂಚಮುಖಿ ಗಣಪತಿ ವಿಗ್ರಹವಿದೆ. ಗಣೇಶನ 32 ಅವತಾರಗಳ ಪೈಕಿ ಪಂಚಮುಖಿ ಅವತಾರವೂ ಒಂದಾಗಿದ್ದು ಇದು ಅತಿ ಪ್ರಭಾವಿ ಅವತಾರ ಎಂದು ಭಕ್ತರು ನಂಬುತ್ತಾರೆ.
Published On - 9:46 am, Fri, 3 September 21




