AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಕನ್ನಡ ಪ್ರವಾಸೋದ್ಯಮಕ್ಕೆ ಹೊಡೆತ ಕೊಟ್ಟ ಮಳೆ: ಪ್ರವಾಸಿಗರಿಲ್ಲದೆ ಕಡಲತೀರ ಬಿಕೋ, ಇಲ್ಲಿವೆ ಫೋಟೋಸ್​​

ಈ ವರ್ಷ ನಿರಂತರ ಮಳೆಯಿಂದ ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಗೋಕರ್ಣ, ಮುರುಡೇಶ್ವರ ಸೇರಿದಂತೆ ಕಡಲತೀರಗಳು ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿವೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ 4.61 ಲಕ್ಷ ಪ್ರವಾಸಿಗರಿದ್ದರೆ, ಈ ವರ್ಷ ಒಂದೂವರೆ ಲಕ್ಷಕ್ಕಿಂತ ಕಡಿಮೆ ಆಗಿದೆ.

ಸೂರಜ್​, ಮಹಾವೀರ್​ ಉತ್ತರೆ
| Updated By: ಗಂಗಾಧರ​ ಬ. ಸಾಬೋಜಿ|

Updated on:Oct 31, 2025 | 6:40 PM

Share
ಈ ವರ್ಷ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರಾಜ್ಯದೆಲ್ಲೆಡೆ ಬೆಳೆ ಹಾನಿ ಉಂಟಾಗಿದ್ದರೆ, ಇತ್ತ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ನವೆಂಬರ್​ ಆರಂಭವಾದರೂ ಪ್ರವಾಸಿತಾಣಗಳು ಬಿಕೋ ಎನ್ನುತ್ತಿವೆ.

1 / 6
ಗೋಕರ್ಣ, ಮುರುಡೇಶ್ವರ, ಹೊನ್ನಾವರ, ಕಾರವಾರ ಕಡಲ ತೀರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಸಂಪೂರ್ಣ ಇಳಿಕೆಯಾಗಿದ್ದು, ಪ್ರವಾಸಿಗರಿಲ್ಲದೆ ತಾಣಗಳು ಖಾಲಿ ಹೊಡೆಯುತ್ತಿವೆ.

2 / 6
ಪ್ರವಾಸೋದ್ಯಮ ಮತ್ತು ಮೀನುಗಾರಿಕೆಯೇ ಆರ್ಥಿಕ ಮೂಲವಾಗಿರುವ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಕಳೆದ ಒಂದು ತಿಂಗಳಿಂದ ಬದಲಾಗುತ್ತಿರುವ ಹವಮಾನ ದೊಡ್ಡ ಹೊಡೆತ ಕೊಟ್ಟಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ರೆಡ್ ಮತ್ತು ಆರೆಂಜ್ ಅಲರ್ಟ ನೀಡಲಾಗಿದ್ದು, ಮೀನುಗಾರಿಕೆ ಹಾಗೂ ಕಡಲ ಪ್ರವಾಸೋದ್ಯಮವನ್ನು ನಿಷೇಧಿಸಲಾಗಿತ್ತು.

3 / 6
ವೀಕೆಂಡ್ ಸೇರಿದಂತೆ ರಜೆಯ ಮಜಾ ಅನುಭವಿಸಲು ಬಂದ ಜನ ಕಡಲಿಗಿಳಿಯದೇ ಮರಳಿ ಹೋಗುವಂತಾಗಿದ್ದರೆ, ಮೀನುಗಾರರು ತಮ್ಮ ಬೋಟುಗಳನ್ನ ಬಂದರಿನಲ್ಲಿ ಲಂಗುರು ಹಾಕುವಂತಾಗಿದೆ. ಹೀಗಾಗಿ ಜಿಲ್ಲೆಯ ಕರಾವಳಿ ತೀರ ಸೇರಿದಂತೆ ಪ್ರವಾಸಿತಾಣಗಳು ಖಾಲಿ ಹೊಡೆಯುತ್ತಿವೆ.

4 / 6
ಮಳೆಗಾಲದಲ್ಲಿ ಸ್ಥಗಿತಗೊಳ್ಳುವ ಪ್ರವಾಸೋದ್ಯಮ, ಸೆಪ್ಟೆಂಬರ್ ತಿಂಗಳು ಮುಗಿಯುತ್ತಿದ್ದಂತೆ ಪ್ರವಾಸೋದ್ಯಮ ಆರಂಭ ಆಗುತ್ತದೆ. ಆದರೆ ಈ ವರ್ಷ ಪದೇ ಪದೇ ಸುರಿಯುತ್ತಿರುವ ಮಳೆಯಿಂದ, ನವೆಂಬರ್​ ಆರಂಭವಾದರೂ ಇದುವರೆಗೂ ಪ್ರವಾಸಿಗರು ಅಷ್ಟಾಗಿ ಬರುತ್ತಿಲ್ಲ. ಕಳೆದ ವರ್ಷ ಅಕ್ಟೋಬರ್ ನಲ್ಲಿ 4.61 ಲಕ್ಷ ಪ್ರವಾಸಿಗರು ಭೇಟಿ ನೀಡಿದರೇ, ಈ ವರ್ಷ ಒಂದೂವರೆ ಲಕ್ಷಕ್ಕಿಂತಲೂ ಕಡಿಮೆ ಇದ್ದು ಸಂಪೂರ್ಣ ಇಳಿಮುಖ ಆಗಿದೆ.

5 / 6
ಹವಾಮಾನ ಬದಲಾವಣೆ, ಮಳೆಯ ಹೊಡೆತ, ಪದೇ ಪದೇ ಕಡಲ ತೀರದ ನಿರ್ಬಂಧಗಳು ಪ್ರವಾಸಿಗರ ಸಂಖ್ಯೆಯಲ್ಲಿ ಇಳುಮುಖಕ್ಕೆ ಕಾರಣವಾಗಿದೆ. ಇನ್ನು ವಿದೇಶಿ ಪ್ರಜೆಗಳ ಸಂಖ್ಯೆ ಬೆರಳೆಣಿಕೆಯಷ್ಟಿದ್ದು, ದೊಡ್ಡ ಮಟ್ಟದ ಇಳಿಕೆ ಕಂಡಿದೆ. 

6 / 6

Published On - 6:39 pm, Fri, 31 October 25

ಸಂಚಾರ ಪೊಲೀಸರಿಂದ ವಿನೂತನ ಅಭಿಯಾನ: ಒಂದು ದಿನ ಸಂಚಾರ ಪೊಲೀಸ್ ಆಗುವ ಅವಕಾಶ​

ಮತ್ತೊಂದು ಟಾಸ್ಕ್ ಸೋಲಿಸಿದ ಗಿಲ್ಲಿ: ಇಲ್ಲಿ ಸಮಸ್ಯೆ ಯಾರದ್ದು?

ದೆಹಲಿ ಬ್ಲಾಸ್ಟ್​ನಲ್ಲಿ ರಾಜಕಾರಣದ ವಾಸನೆ ಬರ್ತಿದೆ: ಶಾಸಕ ಚನ್ನಬಸಪ್ಪ

ಜೀ ಕನ್ನಡ: ರಾಧಿಕಾ ಪಂಡಿತ್ ಸಿನಿಮಾ ಟೈಟಲ್​ನಲ್ಲೇ ಬರ್ತಿದೆ ಹೊಸ ಧಾರಾವಾಹಿ

ಸಿಎಂ ಸಿದ್ದರಾಮಯ್ಯ ದೆಹಲಿ ಪ್ರಯಾಣ ರಹಸ್ಯ ಬಿಚ್ಚಿಟ್ಟ ಬಸವರಾಜ ರಾಯರೆಡ್ಡಿ1

ವಿದ್ಯಾವಂತರೇ ಟೆರರಿಸ್ಟ್​: ಮಾಜಿ ಸಂಸದ ಪ್ರತಾಪ್​ ಸಿಂಹ ಏನಂದ್ರು?

ಟನ್​ ಕಬ್ಬಿಗೆ 3500ಗೆ ರೈತರ ಪಟ್ಟು: ವಿಜಯಪುರ - ಬೆಳಗಾವಿ ಹೆದ್ದಾರಿ ಬಂದ್

ದೆಹಲಿ ನಿಗೂಢ ಸ್ಫೋಟ, ಘಟನೆ ವೇಳೆಯ ವಿಡಿಯೋ ಇಲ್ಲಿದೆ

ಬೆಂಗಳೂರು ಏರ್ಪೋರ್ಟ್ - ದಾವಣಗರೆ ಮಧ್ಯೆ KSRTC ಫ್ಲೈಬಸ್​ ಸೇವೆ ಶುರು

ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಹೋಯ್ತು ವ್ಯಕ್ತಿಯ ಪ್ರಾಣ