ಚಿನ್ನದ ಬೆಲೆ ಸದ್ಯದಲ್ಲೇ ಆಗಲಿದೆ 7,500 ರೂ; ಚಿನ್ನಕ್ಕೆ ಬೇಡಿಕೆ ಹೆಚ್ಚಿಸುತ್ತಿವೆ ಹಲವು ಅಂಶಗಳು

24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ ಸದ್ಯ 7,277 ರೂ ಇದೆ. ಬಹಳ ಶೀಘ್ರದಲ್ಲೇ ಇದರ ಬೆಲೆ 7,500 ರೂ ಗಡಿ ದಾಟುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ. ವಿವಿಧ ಸೆಂಟ್ರಲ್ ಬ್ಯಾಂಕುಗಳಿಂದ ಚಿನ್ನದ ಖರೀದಿ ಆಗುತ್ತಿರುವುದು ಸೇರಿದಂತೆ ಬೇರೆ ಬೇರೆ ಕಾರಣಗಳಿಗೆ ಚಿನ್ನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಈ ಬಗ್ಗೆ ಒಂದು ವರದಿ:

|

Updated on:Aug 18, 2024 | 2:13 PM

ಚಿನ್ನ ಜಾಗತಿಕವಾಗಿ ಒಂದು ರೀತಿಯಲ್ಲಿ ಎವರ್​ಗ್ರೀನ್ ಎನಿಸುವ ಲೋಹ. ಇದಕ್ಕಿರುವ ಬೇಡಿಕೆ ಯಾವತ್ತಿದ್ದರೂ ಕುಂದುವುದಿಲ್ಲ. ವರ್ಷಕ್ಕೆ ಶೇ. 8ರಿಂದ ಶೇ. 20ರವರೆಗೆ ಇದರ ಬೆಲೆ ಬೆಳೆಯುತ್ತಿರುತ್ತದೆ. ಹೀಗಾಗಿ, ಇದು ಆಭರಣದ ಜೊತೆಗೆ ಹೂಡಿಕೆಯಾಗಿಯೂ ಬಹಳ ಉಪಯುಕ್ತವಾದ ವಸ್ತು.

1 / 6
ಭಾರತದಲ್ಲಿ ಚಿನ್ನ, ಬೆಳ್ಳಿ ಮೇಲಿನ ಆಮದು ಸುಂಕ ಕಡಿಮೆ ಮಾಡಿದ ಬಳಿಕ ಬೆಲೆಯಲ್ಲಿ ಬಹಳಷ್ಟು ಇಳಿಕೆ ಆಗಿದೆ. ಆದರೂ ಚಿನ್ನದ ಬೆಲೆ ಏರಿಕೆ ಹಾದಿಯಲ್ಲಿ ಮುಂದುವರಿದಿದೆ. ಇವತ್ತು 24 ಕ್ಯಾರಟ್​ನ ಅಪರಂಜಿ ಚಿನ್ನ ಗ್ರಾಮ್​ಗೆ 7,277 ರೂ ಇದೆ. ಗೋಲ್ಡ್ ಫ್ಯೂಚರ್ಸ್​ನಲ್ಲಿ ಇದರ ಬೆಲೆ ಹೆಚ್ಚುತ್ತಲೇ ಇದೆ.

2 / 6
ಮೂರು ದಿನಗಳ ಹಿಂದೆ ಎಂಸಿಎಕ್ಸ್​ನ ಗೋಲ್ಡ್ ಫ್ಯೂಚರ್ಸ್​ನಲ್ಲಿ 10 ಗ್ರಾಮ್ ಚಿನ್ನದ ಬೆಲೆ 70,775 ರೂ ಇತ್ತು. ಇದೀಗ ಅದು 71,395 ರೂ ಆಗಿದೆ. ಇದು ಅಕ್ಟೋಬರ್ 4ಕ್ಕೆ ಡೆಲಿವರಿ ಕೊಡುವ ಚಿನ್ನದ ಬೆಲೆ. 680 ಕೋಟಿ ರೂ ಮೊತ್ತದ ಚಿನ್ನದ ಬುಕಿಂಗ್ ನಡೆದಿದೆ.

3 / 6
ಚಿನ್ನದ ಬೆಲೆ ಇನ್ನು ಕೆಲ ತಿಂಗಳಲ್ಲಿ ಗ್ರಾಮ್​ಗೆ 7,500 ರೂ ದಾಟಬಹುದು ಎನ್ನುವ ಅನಿಸಿಕೆ ತಜ್ಞರದ್ದು. ಬಹಳಷ್ಟು ಬೆಳವಣಿಗೆಗಳು ಮತ್ತು ವಿದ್ಯಮಾನಗಳು ಚಿನ್ನಕ್ಕೆ ಬೇಡಿಕೆ ಹೆಚ್ಚುವ ಸುಳಿವನ್ನು ನೀಡುತ್ತಿವೆ. ಒಂದು ವೇಳೆ ಅಮೆರಿಕದ ಫೆಡ್ ರಿಸರ್ವ್ ಸಂಸ್ಥೆ ಬಡ್ಡಿದರವನ್ನು 50 ಮೂಲಾಂಕಗಳಷ್ಟು ಇಳಿಕೆ ಮಾಡಿದಲ್ಲಿ ಚಿನ್ನದ ಬೆಲೆ ಇನ್ನೂ ಎತ್ತರಕ್ಕೆ ಜಿಗಿಯಬಹುದು ಎನ್ನಲಾಗಿದೆ.

4 / 6
ಫೆಡ್ ರಿಸರ್ವ್ ದರ ಮಾತ್ರವಲ್ಲ, ಚಿನ್ನದ ಬೆಲೆ ಮೇಲೆ ಪ್ರಭಾವ ಬೀರುತ್ತಿರುವ ಹಲವು ಅಂಶಗಳಿವೆ. ಜಾಗತಿಕ ಆರ್ಥಿಕತೆಯ ಅನಿಶ್ಚಿತತೆಗಳು, ರಾಜಕೀಯ ಬಿಕ್ಕಟ್ಟು, ಅಮೆರಿಕನ್ ಡಾಲರ್ ಮೌಲ್ಯ ಕಡಿಮೆ ಆಗಿರುವುದು, ಅದರ 10 ವರ್ಷದ ಬಾಂಡ್ ಯೀಲ್ಡ್ ಕಡಿಮೆ ಆಗಿರುವುದು, ಜಾಗತಿಕವಾಗಿ ಸೆಂಟ್ರಲ್ ಬ್ಯಾಂಕುಗಳು ಚಿನ್ನ ಖರೀದಿಯ ಭರಾಟೆ ಹೆಚ್ಚಿಸಿರುವುದು ಹೀಗೆ ಹಲವು ಅಂಶಗಳು ಚಿನ್ನದ ಮೇಲೆ ಪ್ರಭಾವ ಬೀರುತ್ತಿವೆ.

5 / 6
ಭಾರತದಲ್ಲಿ ಈ ಅಂತಾರಾಷ್ಟ್ರೀಯ ಅಂಶಗಳ ಜೊತೆಗೆ ಸ್ಥಳೀಯ ಅಂಶಗಳೂ ಚಿನ್ನದ ಬೆಲೆಯನ್ನು ಪ್ರಭಾವಿಸುತ್ತವೆ. ಭಾರತದಲ್ಲಿ ಜನರು ಒಡವೆ ಖರೀದಿ ಹೆಚ್ಚಿಸುತ್ತಿದ್ದಾರೆ. ಇದರ ಜೊತೆಗೆ ರುಪಾಯಿ ಮೌಲ್ಯ ಕಡಿಮೆಗೊಂಡಲ್ಲಿ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಾಗಬಹುದು. ಇಲ್ಲಿ ಸದ್ಯದಲ್ಲೇ ಗ್ರಾಮ್​ಗೆ 7,600 ರೂ ಮುಟ್ಟಿದರೂ ಅಚ್ಚರಿ ಇಲ್ಲ.

6 / 6

Published On - 2:12 pm, Sun, 18 August 24

Follow us