ಇದೀಗ ಮತ್ತೊಂದು ಹೆಚ್ಚೆ ಮುಂದೆ ಹೋಗಿರುವ ಶಿಕ್ಷಣ ಇಲಾಖೆ ಅಧಿಕಾರಿಗಳು, ಮಕ್ಕಳು ಹಾಗೂ ಪೋಷಕರ ಸಭೆ ನಡೆಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ತಿಂಗಳ ಮೂರನೇ ಶನಿವಾರ ಕಡ್ಡಾಯವಾಗಿ ಪೋಷಕರ ಸಭೆ ನಡೆಸುತ್ತಿದ್ದು, ಮಕ್ಕಳ ಶಿಕ್ಷಣದ ಬಗ್ಗೆ ಪೋಷಕರಿಗೆ ಮಾಹಿತಿ ನೀಡುತ್ತಿದ್ದಾರೆ. ಜೊತೆಗೆ ಮಕ್ಕಳ ಬೆಳೆವಣಿಗೆಗೆ ಬೇಕಾದ ಸಲಹೆ ಸೂಚನೆ ವಿನಿಮಯ ಮಾಡಿಕೊಳುತ್ತಿದ್ದಾರೆ.