AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತಿವೆ ವಿಜಯಪುರದ ಸರ್ಕಾರಿ ಶಾಲೆಗಳು

ಸರ್ಕಾರಿ ಶಾಲೆಗಳಲ್ಲಿ ಕಲಿಸುವವರು ಇರಲ್ಲ, ಸೌಲಭ್ಯಗಳಂತೂ ಇಲ್ಲವೇ ಇಲ್ಲ ಅನ್ನೋ ಮಾತಿಗೆ ವಿಜಯಪುರದ ಇಬ್ರಾಹಿಂಪುರದಲ್ಲಿ ಬಳಿಯ ಸರ್ಕಾರಿ ಪ್ರಾಥಮಿಕ ಶಾಲೆ ನಂಬರ್ 6 ಶಾಲೆ ತದ್ವಿರುದ್ಧವಾಗಿದೆ. ಖಾಸಗಿ ಶಾಲೆಗೆ ಪೈಪೋಟಿ ನೀಡುತ್ತಿದೆ.

ಅಶೋಕ ಯಡಳ್ಳಿ, ವಿಜಯಪುರ
| Updated By: ವಿವೇಕ ಬಿರಾದಾರ|

Updated on: Aug 18, 2024 | 12:20 PM

Share
Vijayapura Ibrahimpur High tech Government School photos

ಸರ್ಕಾರಿ ಶಾಲೆಗಳು ಬದಲಾಗುತ್ತಿವೆ‌. ಖಾಸಗಿ ಶಾಲೆಗಳ ಜೊತೆ ಸರ್ಕಾರಿ ಶಾಲೆಗಳು ಸ್ಪರ್ಧೆ ಮಾಡುತ್ತಿವೆ. ನೀಡುತ್ತಿವೆ. ಇದಕ್ಕೆ ಸೂಕ್ತ ಉದಾಹರಣೆ ವಿಜಯಪುರದ ಸರ್ಕಾರಿ ಶಾಲೆಗಳು. ಸರ್ಕಾರಿ ಶಾಲೆಗಳಲ್ಲಿ ಕಲಿಸುವವರು ಇರಲ್ಲ, ಸೌಲಭ್ಯಗಳಂತೂ ಇಲ್ಲವೇ ಇಲ್ಲ ಅನ್ನೋ ಮಾತಿಗೆ ವಿಜಯಪುರ ಜಿಲ್ಲೆಯ ಇಬ್ರಾಹಿಂಪುರದ ಸರ್ಕಾರಿ ಪ್ರಾಥಮಿಕ ಶಾಲೆ ನಂಬರ್ 6 ಶಾಲೆ ತದ್ವಿರುದ್ಧವಾಗಿದೆ.

1 / 5
Vijayapura Ibrahimpur High tech Government School photos

ಖಾಸಗಿ ಶಾಲೆಯಲ್ಲಿರುವಂತೆ ಸೌಲಭ್ಯಗಳು, ಹೈಟೆಕ್ ಕ್ಲಾಸ್, ಆಟವಾಡಲು ಮೈದಾನ ಎಲ್ಲವೂ ಇದೆ. ಇದೊಂದು ಶಾಲೆ ಕೇವಲ ಉದಾಹರಣೆ ಮಾತ್ರ. ಜಿಲ್ಲೆಯ ಬಹುತೇಕ ಸರ್ಕಾರಿ ಶಾಲೆಗಳು ಬದಲಾಗುತ್ತಿವೆ.

2 / 5
Vijayapura Ibrahimpur High tech Government School photos

ಇದೀಗ ಮತ್ತೊಂದು ಹೆಚ್ಚೆ ಮುಂದೆ ಹೋಗಿರುವ ಶಿಕ್ಷಣ ಇಲಾಖೆ ಅಧಿಕಾರಿಗಳು, ಮಕ್ಕಳು ಹಾಗೂ ಪೋಷಕರ ಸಭೆ ನಡೆಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ತಿಂಗಳ ಮೂರನೇ ‌ಶನಿವಾರ ಕಡ್ಡಾಯವಾಗಿ ಪೋಷಕರ ಸಭೆ ನಡೆಸುತ್ತಿದ್ದು, ಮಕ್ಕಳ ಶಿಕ್ಷಣದ ಬಗ್ಗೆ ಪೋಷಕರಿಗೆ ಮಾಹಿತಿ ನೀಡುತ್ತಿದ್ದಾರೆ. ಜೊತೆಗೆ ಮಕ್ಕಳ ಬೆಳೆವಣಿಗೆಗೆ ಬೇಕಾದ ಸಲಹೆ ಸೂಚನೆ ವಿನಿಮಯ ಮಾಡಿಕೊಳುತ್ತಿದ್ದಾರೆ.

3 / 5
Vijayapura Ibrahimpur High tech Government School photos

ಶಿಕ್ಷಣ ಇಲಾಖೆಯ ಅಧಿಕಾರಿಗಳ ಈ ವಿಶಿಷ್ಟವಾದ ಪ್ರಯತ್ನ ಸರ್ಕಾರಿ ಶಾಲೆ ಮಕ್ಕಳ ಪೋಷಕರ ಸಂತಸಕ್ಕೆ ಕಾರಣವಾಗಿದೆ. ಖಾಸಗಿ ಶಾಲೆಯ ಮಕ್ಕಳಿಗೆ ಶಿಕ್ಷಕರು ಹಾಗೂ ಪೋಷಕರು ಸಭೆ ಕರೆಯುತ್ತಿದ್ದರು. ಆದರೆ ಬಡವರ ಮಕ್ಕಳು ಕಲಿಯುವ ಸರ್ಕಾರಿ‌ ಶಾಲೆಯಲ್ಲಿ ಸಭೆ ಇರಲಿಲ್ಲ. ಇದರಿಂದ ನಮ್ಮ ಮಕ್ಕಳು ಓದುತ್ತಾರೋ, ಇಲ್ಲವೋ ಗೊತ್ತಾಗುತ್ತಿರಲಿಲ್ಲ. ಇದೀಗ ಸಭೆ ನಡೆಸುತ್ತಿರುವುದರಿಂದ ನಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಮಾಹಿತಿ ಸಿಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

4 / 5
Vijayapura Ibrahimpur High tech Government School photos

ಜಿಲ್ಲೆಯ ಸುಮಾರು 1500 ಶಾಲೆಗಳಲ್ಲಿ ಈ ರೀತಿಯ ಕಾರ್ಯಕ್ರಮ ನಡೆಯುತ್ತಿದ್ದು, ಶಿಕ್ಷಣ ವ್ಯವಸ್ಥೆಯಲ್ಲಿ ಉತ್ತಮ ಬದಲಾವಣೆ ಕಾಣುತ್ತಿದೆ. ವಿಜಯಪುರ ಜಿಲ್ಲೆ ಅಧಿಕಾರಿಗಳು ನಡೆಸುತ್ತಿರುವ ಈ ವಿಶಿಷ್ಟ ಕಾರ್ಯ ಮಕ್ಕಳಿಗೆ ಹಾಗೂ ಅವರ ಪೋಷಕರಿಗೆ ಸಂತಸ ತಂದಿದ್ದು, ಸರ್ಕಾರಿ‌ ಶಾಲೆಗಳ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲಿ ಅನ್ನೋದು ಎಲ್ಲರ ಆಶಯವಾಗಿದೆ.

5 / 5