ಹಾಸನಾಂಬೆ ದರ್ಶನೋತ್ಸವ ಶುರು: ಆರದ ದೀಪ ಕಂಡು ಪುನೀತರಾದ ಭಕ್ತರು; ಇಲ್ಲಿವೆ ಫೋಟೋಸ್​

Edited By:

Updated on: Oct 29, 2026 | 7:36 PM

ಹಾಸನಾಂಬೆ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು, ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಶಕ್ತಿ ದೇವತೆಯ ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. 14 ದಿನಗಳ ಈ ಉತ್ಸವದಲ್ಲಿ 30 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಹಲವು ಹೊಸ ಆಕರ್ಷಣೆಗಳೊಂದಿಗೆ ಹಾಸನಾಂಬೆ ಮಹೋತ್ಸವ ಕಳೆಗಟ್ಟಿದೆ. ಇಲ್ಲಿವೆ ನೋಡಿ ಫೋಟೋಸ್​​.

1 / 7
ವರ್ಷಕ್ಕೊಮ್ಮೆ ಮಾತ್ರ ದರ್ಶನ ಭಾಗ್ಯ ಕರುಣಿಸುವ ಹಾಸನಾಂಬೆ ದರ್ಶನೋತ್ಸವ ಇಂದಿನಿಂದ ಆರಂಭಗೊಂಡಿದೆ. 
ಮಧ್ಯಾಹ್ನ 12 ಗಂಟೆ 28 ನಿಮಿಷಕ್ಕೆ ಮಂತ್ರಘೋಷಗಳೊಂದಿಗೆ ಮಂಗಳ ವಾದ್ಯಗಳ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ ತೆನೆ ಇರುವ ಬಾಳೆ ಕಡಿಯುವ ಮೂಲಕ ಗರ್ಭಗುಡಿ ಬಾಗಿಲು ತೆರೆಯಲಾಯಿತು. ನೆರೆದಿದ್ದ ಗಣ್ಯರು, ಸಹಸ್ರ ಭಕ್ತರು ದೇವಿಯ ವಿಶ್ವರೂಪ ದರ್ಶನ ಪಡೆದು ಪುನೀತರಾದರು.

ವರ್ಷಕ್ಕೊಮ್ಮೆ ಮಾತ್ರ ದರ್ಶನ ಭಾಗ್ಯ ಕರುಣಿಸುವ ಹಾಸನಾಂಬೆ ದರ್ಶನೋತ್ಸವ ಇಂದಿನಿಂದ ಆರಂಭಗೊಂಡಿದೆ. ಮಧ್ಯಾಹ್ನ 12 ಗಂಟೆ 28 ನಿಮಿಷಕ್ಕೆ ಮಂತ್ರಘೋಷಗಳೊಂದಿಗೆ ಮಂಗಳ ವಾದ್ಯಗಳ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ ತೆನೆ ಇರುವ ಬಾಳೆ ಕಡಿಯುವ ಮೂಲಕ ಗರ್ಭಗುಡಿ ಬಾಗಿಲು ತೆರೆಯಲಾಯಿತು. ನೆರೆದಿದ್ದ ಗಣ್ಯರು, ಸಹಸ್ರ ಭಕ್ತರು ದೇವಿಯ ವಿಶ್ವರೂಪ ದರ್ಶನ ಪಡೆದು ಪುನೀತರಾದರು.

2 / 7

ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ತುಮಕೂರು ಸಿದ್ಧಗಂಗಾ ಮಠದ ಶಿವ ಸಿದ್ದೇಶ್ವರ ಶ್ರೀಗಳು ಸೇರಿ ಹಲವು ಸ್ವಾಮಿಜಿಗಳ ದಿವ್ಯಸಾನ್ನಿಧ್ಯದಲ್ಲಿ ಉಸ್ತುವಾರಿ ಸಚಿವ ಕೆಎಂ ಶಿವಲಿಂಗೇಗೌಡ, ಮುಜರಾಯಿ ಸಚಿವ ಬಸವಂತಪ್ಪ ಸೇರಿ ಶಾಸಕರು, ಸಂಸದರ ಸಮ್ಮುಖದಲ್ಲಿ ಶಕ್ತಿದೇವತೆ ಹಾಸನಾಂಬೆ ದರ್ಶನಕ್ಕೆ ಚಾಲನೆ ನೀಡಲಾಗಿದೆ.

3 / 7

ಮೊದಲ ದಿನ‌ ಸಾರ್ವಜನಿಕರಿಗೆ ದರ್ಶನ ಇಲ್ಲ ಎಂದು ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಹೇಳಿತ್ತಾದರೂ, ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ನೂಕು ನುಗ್ಗಲಿನ ನಡುವೆಯೇ ಜನರು ಮೊದಲ ದಿನವೇ ಆರದ ದೀಪ ನೋಡಿ ಪುನೀತರಾದರು. ಕಳೆದ ವರ್ಷ ಬರೊಬ್ಬರಿ 25 ಲಕ್ಷ ಭಕ್ತರು ದರ್ಶನ ಪಡೆದಿದ್ದರು. ಈ ವರ್ಷ ದರ್ಶನಕ್ಕೆ 12 ದಿನ ಅವಕಾಶವಿದ್ದು, 30 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆಯಿದೆ.

4 / 7

ಬಾಗಿಲು ತೆರೆಯುವ ವೇಳೆ ಹಾಜರಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಮಾತನಾಡಿ, ‘ಹಾಸನಾಂಬೆ ಜಾತ್ರಾ ಮಹೋತ್ಸವ ಆರಂಭವಾಗಿದೆ. ಕಳೆದ ವರ್ಷದಂತೆ ಈ ವರ್ಷವೂ ಎಲ್ಲಾ ರೀತಿಯ ಪಾಸ್​ಗಳನ್ನ ರದ್ದು ಮಾಡಲಾಗಿದ್ದು, ದೇವಿ ದರ್ಶನಕ್ಕಾಗಿ ದೂರದ ಊರುಗಳಿಂದ ಬರುವ ಸಾಮಾನ್ಯ ಭಕ್ತಗರಿಗೆ ಆದ್ಯತೆ ನೀಡಲಾಗಿದೆ. ಗಣ್ಯರಿಗೆ ನಿರ್ದಿಷ್ಟ ಸಮಯ ನಿಗದಿ ಮಾಡಲಾಗಿದ್ದು, ಆ ಸಮಯದಲ್ಲಿ ದರ್ಶನ ಮಾಡುವಂತೆ’ ಅವರು ಮನವಿ ಮಾಡಿದರು.

5 / 7

ಇಡೀ ದೇಗುಲದ ಆವರಣವನ್ನ ಬಣ್ಣಬಣ್ಣದ ಹೂಗಳಿಂದ ಅಲಂಕಾರ ಮಾಡಲಾಗಿದ್ದು, ಹಾಸನಾಂಬೆ ದೇಗುಲ ಕಂಗೊಳಿಸುತ್ತಿದೆ. ಸಪ್ತ ಮಾತೃಕೆಯರ ವಿಗ್ರಹಗಳು ಪ್ರಮುಖ ಆಕರ್ಷಣೆ. ಮಲೇಷ್ಯಾದಿಂದ ತೆಂಗಿನ ಗರಿಗಳಿಂದ ಮಾಡುವ ಜಾನೂರ್ ಆರ್ಟ್​ನಿಂದ ನಿರ್ಮಾಣ ಮಾಡಿರುವ ಕಲಾಕೃತಿಗಳು ಕಣ್ಮನ ಸೆಳೆಯುತ್ತಿವೆ. ಈ ವರ್ಷ ಅದ್ಧೂರಿ ಅತ್ಯಾಧುನಿಕ, ಹೈಟೆಕ್ ವ್ಯವಸ್ಥೆಗಳನ್ನ ಜಿಲ್ಲಾಡಳಿತ ಮಾಡಿಕೊಂಡಿದೆ. ಎಲ್ಲೆಡೆ ಬ್ಯಾರಿಕೇಡ್ ವ್ಯವಸ್ಥೆ ಮತ್ತು ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.

6 / 7

ಇನ್ನು ಮೈಸೂರು ದಸರಾ ಮಾದರಿಯಲ್ಲಿ ಲೈಟಿಂಗ್, ಲಾಲ್​ಬಾಗ್ ಮಾದರಿಯಲ್ಲಿ ಫಲಪುಷ್ಪ ಪ್ರದರ್ಶನ ಮತ್ತು ಹಾಸನದ ಐತಿಹಾಸಿಕ ತಾಣಗಳನ್ನ ನೋಡಲು ಪ್ಯಾಕೇಜ್ ಟೂರ್​ ಹೀಗೆ ಹಲವು ವಿಶೇಷತೆಗಳಿವೆ. ಇದೆ ಮೊದಲ ಬಾರಿಗೆ ರಾಜ್ಯ ಮತ್ತು ರಾಷ್ಟ್ರೀಯಮಟ್ಟದಲ್ಲಿ ವಾಲಿಬಾಲ್, ಕಬ್ಬಡ್ಡಿ, ಕುಸ್ತಿ ಪಂದ್ಯಾವಳಿ ಮತ್ತು ಶ್ವಾನ, ಎತ್ತು, ಮೇಕೆಗಳ ಪ್ರದರ್ಶನದ ಮೂಲಕ ಹಾಸನಾಂಬೆ ಉತ್ಸವವನ್ನು ಜನೋತ್ಸವವಾಗಿಸಲಾಗಿದೆ.

7 / 7

ಈ ವರ್ಷ ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ಒಟ್ಟು 14 ದಿನ ದೇಗುಲದ ಬಾಗಿಲು ತೆರೆಯಲಿದೆ. ಮೊದಲ ಹಾಗೂ ಕೊನೆಯ ದಿನ ಹೊರತುಪಡಿಸಿ ಒಟ್ಟು 12 ದಿನ ದೇವಿ ದರ್ಶನಕ್ಕೆ ಭಕ್ತರಿಗೆ ಅವಕಾಶ ಸಿಗಲಿದೆ.

ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More
Loading...
Unable to load recommendations.
Follow Us