- Kannada News Photo gallery Haveri Hothanahalli Village's Unique 5 Tuesday Ritual: Leaving Village Before Goddess Festival
ಗ್ರಾಮ ದೇವಿಯ ಜಾತ್ರೆಗೂ ಮುನ್ನ ಊರಿಗೆ ಊರೇ ಖಾಲಿ, ಹಾವೇರಿಯಲ್ಲಿ ವಿಶಿಷ್ಟ ಆಚರಣೆ
ಹಾವೇರಿ ಜಿಲ್ಲೆಯ ಹೋತನಹಳ್ಳಿ ಗ್ರಾಮದಲ್ಲಿ, ಗ್ರಾಮದೇವತೆ ಜಾತ್ರೆಗೆ ಮುನ್ನ ಐದು ಮಂಗಳವಾರಗಳ ಕಾಲ ಗ್ರಾಮಸ್ಥರು ಊರನ್ನು ಖಾಲಿ ಮಾಡಿ ಹೊಲಗಳಲ್ಲಿ ವಾಸಿಸುತ್ತಾರೆ. ಸೂರ್ಯೋದಯಕ್ಕೂ ಮುನ್ನ ಊರನ್ನು ಬಿಟ್ಟು ಸೂರ್ಯಾಸ್ತದ ನಂತರ ಮರಳುವ ಈ ವಿಶಿಷ್ಟ ಆಚರಣೆ ಕಳೆದ 15 ವರ್ಷಗಳಿಂದ ನಡೆಯುತ್ತಿದೆ. ಇದರಿಂದ ಗ್ರಾಮಕ್ಕೆ ಒಳಿತಾಗುತ್ತದೆ ಎಂಬ ನಂಬಿಕೆ ಗ್ರಾಮಸ್ಥರದ್ದು. ಮುಸ್ಲಿಮರು ಸೇರಿದಂತೆ ಎಲ್ಲರೂ ಈ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ.
Updated on: Jan 15, 2025 | 3:04 PM

ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕಿನ ಹೋತನಹಳ್ಳಿ ಗ್ರಾಮದಲ್ಲಿ, ಗ್ರಾಮದೇವತೆ ಜಾತ್ರೆಗೂ ಮುನ್ನ ಗ್ರಾಮಸ್ಥರು ಐದು ಮಂಗಳವಾರ ಊರು ಬಿಟ್ಟು, ಹೊಲದಲ್ಲಿ ವಾಸಿಸುತ್ತಾರೆ. ಮನೆಗೆ ಬೀಗ ಹಾಕಿ, ಮನೆಯ ಮುಂದೆ ದೀಪ ಹಚ್ಚಿ, ಗ್ರಾಮದ ಜನರು ಸೂರ್ಯೋದಯಕ್ಕೂ ಮುನ್ನವೇ ಊರನ್ನು ಖಾಲಿ ಮಾಡುತ್ತಾರೆ. ಗ್ರಾಮಸ್ಥರೆಲ್ಲ ಹೊಲದಲ್ಲಿ ಇದ್ದು ಸೂರ್ಯಾಸ್ತದ ಬಳಿಕ ಊರಿಗೆ ತೆರಳುತ್ತಾರೆ. ಈ ರೀತಿಯಾಗಿ ಐದು ವರ್ಷಕ್ಕೆ ಒಂದು ಸಲ ಮಾಡುತ್ತಾರೆ.

ಈ ಗ್ರಾಮದಲ್ಲಿ ಐದು ವರ್ಷಕ್ಕೆ ಒಂದು ಭಾರಿ ಗ್ರಾಮ ದೇವಿಯ ಜಾತ್ರೆ ನಡೆಯುತ್ತದೆ. ಅದರೆ, ಜಾತ್ರೆಯ ಆರಂಭಕ್ಕೂ ಮುನ್ನವೇ ಐದು ಮಂಗಳವಾರ ಜನರು ಊರಬಿಡುತ್ತಾರೆ. ಸೂರ್ಯೋದಯ ಮುನ್ನವೇ ಗ್ರಾಮದ ಜನರು ದೇವರಿಗೆ ಪೂಜೆ ಸಲ್ಲಿಸಿ ಮನೆಯ ಮುಂದೆ ದೀಪ ಹಚ್ಚಿ, ಕುರಿ ಕೋಳಿ, ವಯೋವೃದ್ಧ ಎಲ್ಲರೂ ಕೂಡಿಕೊಂಡು ಬಂಡಿ ಏರಿ ಹೊಲಕ್ಕೆ ತೆರಳುತ್ತಾರೆ.

ಅಲ್ಲದೇ, ಈ ಗ್ರಾಮದಲ್ಲಿನ ಮುಸ್ಲಿಮರು ಕೂಡ ಗ್ರಾಮ ಬಿಟ್ಟು ಹೊಲದಲ್ಲಿ ರಾತ್ರವಿಡಿ ಇರುತ್ತಾರೆ. ಕಳೆದ 15 ವರ್ಷಗಳಿಂದ ಈ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಹೀಗಾಗಿ ನಮ್ಮ ಗ್ರಾಮಕ್ಕೆ ಒಳಿತು ಆಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಸೂರ್ಯೋದಯಕ್ಕೂ ಮುನ್ನವೇ ಗ್ರಾಮವನ್ನ ತೊರೆದ ಗ್ರಾಮಸ್ಥರು ಸೂರ್ಯಾಸ್ತದ ಅವರಿಗೂ ಹೊಲದಲ್ಲಿ ಇರುತ್ತಾರೆ. ಜೊತೆಗೆ ಗ್ರಾಮಕ್ಕೆ ಹೋಗುವ ಎಲ್ಲ ರಸ್ತೆಯನ್ನ ಬಂದ್ ಮಾಡುತ್ತಾರೆ. ಬೇರೆ ಗ್ರಾಮದ ಜನರು ಊರಿನ ಒಳಗೆ ಹೋಗದಂತೆ ಬ್ಯಾನರ್ ಹಾಕಿದ್ದು, ಗ್ರಾಮದ ಒಳಗಡೆ ಹೋದರೆ ಕೆಡಕು ಉಂಟಾಗುತ್ತದೆ.

ಒಂದು ಸಾರಿ ಗ್ರಾಮದಲ್ಲಿ ಸಣ್ಣ ಎಮ್ಮೆಕರವನ್ನ ಬಿಟ್ಟು ಜನರು ಅಷ್ಟೇ ಊರು ತೊರೆದಿದ್ದರಂತೆ. ಮರುದಿನ ಬೆಳಗ್ಗೆ ಹೋಗಿ ನೋಡುವಟ್ಟರಲ್ಲಿ ಎಮ್ಮೆ ಕರೆ ತೀರಿಕೊಂಡಿದ್ವಂತೆ. ಇನ್ನು, ಊರು ಬಿಡುವ ವಿಚಾರ ತಳಿಯದೇ ರಾತ್ರಿ ಗ್ರಾಮಕ್ಕೆ ಬಸ್ ಹೋಗಿತ್ತಂತೆ. ಬಸ್ ಅಲ್ಲಿಯೇ ಕೆಟ್ಟು ನಿಂತಿತ್ತಂತೆ. ಗ್ರಾಮದ ದೇವಿಗೆ ವಿಶೇಷ ಪೂಜೆ ಮಾಡಿಸಿ ಬಸ್ ತೆಗೆದುಕೊಂಡು ಹೋಗಿದ್ದಾರೆ.

ನಾವು ಗ್ರಾಮವನ್ನು ತೊರೆದ ದಿನ ದೇವಿ ಊರಿನಲ್ಲಿ ನೆಲಸಿರುತ್ತಾಳೆ. ಆ ರಾತ್ರಿ ದುಷ್ಟ ಶಕ್ತಿಗಳನ್ನು ಸಂಹಾರ ಮಾಡಿ ಗ್ರಾಮದ ಜನರಿಗೆ ಉಳಿತು ಆಗುತ್ತೆ ಅನ್ನೋ ಗ್ರಾಮಸ್ಥರ ನಂಬಿಕೆ.

ಒಟ್ಟಿನಲ್ಲಿ ಹೋತನಹಳ್ಳಿ ಗ್ರಾಮದ ಜನರು ದೇವರಿಗೆ ಪೂಜೆ ಸಲ್ಲಿಸಿ, ಈಡೀ ಊರಿಗೆ ಊರೇ ಖಾಲಿ ಮಾಡಿ ಜಮೀನಿನಲ್ಲಿ ಸಂಜೆಯವರೆಗೆ ವಾಸ ಮಾಡುತ್ತಾರೆ. ಸೂರ್ಯಾಸ್ತದ ನಂತರ ಮನೆಗೆ ತೆರಳಿ ಗ್ರಾಮದೇವಿಗೆ ಪೂಜೆ ಸಲ್ಲಿಸುತ್ತಾರೆ. ಹೀಗೆ, ಐದು ವಾರ ಗ್ರಾಮ ತೊರೆದ ಗ್ರಾಮಸ್ಥರು ಕೊನೆಯಲ್ಲಿ ಅದ್ದೂರಿಯಾಗಿ ಜಾತ್ರೆಯನ್ನು ಮಾಡುವ ಮೂಲಕ ವಿಶಿಷ್ಟ ಆಚರಣೆ ಮಾಡುತ್ತಿದ್ದಾರೆ.



















