ಹಾವೇರಿ: ನಾಗರಹಾವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ ಪಶುವೈದ್ಯ, ಫೋಟೋಸ್ ನೋಡಿ
ಹಾವೇರಿ ನಗರದ ಹಳೆಯ ಕಟ್ಟಡ ತೆರವು ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡು ನರಳಾಡುತ್ತಿದ್ದ ನಾಗರಹಾವಿಗೆ ಇಲ್ಲಿನ ಪಾಲಿಕ್ಲಿನಿಕ್ನ ಪಶುವೈದ್ಯ ಡಾ.ಸಣ್ಣಭೀರಪ್ಪ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಈ ಮೂಲಕ ನಾಗರಪಂಚಮಿ ಸಮಯದಲ್ಲಿ ಪಶುವೈದ್ಯ ನಾಗರಹಾವಿಗೆ ಪಂಚಮಿ ಉಡುಗೊರೆ ನೀಡಿದ್ದಾರೆ.
Updated on:Aug 11, 2024 | 1:56 PM

ಹಾವೇರಿ ನಗರದ ಹಳೆಯ ಕಟ್ಟಡ ತೆರವು ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡು ನರಳಾಡುತ್ತಿದ್ದ ನಾಗರಹಾವಿಗೆ ಇಲ್ಲಿನ ಪಾಲಿಕ್ಲಿನಿಕ್ನ ಪಶುವೈದ್ಯ ಡಾ.ಸಣ್ಣಭೀರಪ್ಪ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಹಾವೇರಿ ನಗರದ ಕನಕಾಪುರ ರಸ್ತೆಯ ರಾಜಸ್ಥಾನ ಡಾಬಾ ಹಳೆಯ ಕಟ್ಟಡವನ್ನು ತೆರವುಗೊಳಿಸುತ್ತದ್ದ ವೇಳೆ ಅವೇಶಷಗಳಡಿಯಲ್ಲಿ ಸಿಲುಕಿ ನಾಗರಹಾವು ಗಾಯಗೊಂಡು ಒದ್ದಾಡುತ್ತಿತ್ತು. ಕೂಡಲೆ ಡಾಬಾದವರು ಉರಗ ರಕ್ಷಕ ನಾಗರಾಜ ಭೈರಣ್ಣನವರಿಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಉರಗ ರಕ್ಷಕ ಭೈರಣ್ಣ ಹಾವನ್ನು ರಕ್ಷಿಸಿ, ಚೀಲದೊಳಗೆ ಹಾಕಿಕೊಂಡು ಪಾಲಿಕ್ಲಿಕ್ಗೆ ತೆಗೆದಯಕೊಂಡು ಹೋಗಿದ್ದಾರೆ. ಅಲ್ಲಿ ಪಶುವೈದ್ಯಾಧಿಕಾರಿ ಡಾ.ಸಣ್ಣಭೀರಪ್ಪ ಹಾವನ್ನು ತಪಾಸಣೆ ಮಾಡಿ ಶಸ್ತ್ರಚಿಕಿತ್ಸೆಗೆ ಸಿದ್ದತೆ ಮಾಡಿದ್ದಾರೆ. ಬಳಿಕ, ಹಾವಿಗೆ ಅನಸ್ತೇಶಿಯಾ ನೀಡಿ ಪ್ರಜ್ಞೆ ತಪ್ಪಿಸಿ, ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೀಡಿದ್ದಾರೆ.

ಬಳಿಕ ಸ್ನೇಕ್ ನಾಗರಾಜ ತಮ್ಮ ನಿವಾಸದಲ್ಲಿ ಐದು ದಿನ ಹಾವಿಗೆ ಆರೈಕೆ ಮಾಡಿದ್ದಾರೆ. ಹಾವು ಗುಣಮುಖವಾಗಿದೆ. ನಂತರ ಕರ್ಜಗಿ ಅರಣ್ಯ ಪ್ರದೇಶದಲ್ಲಿ ಹಾವು ಬಿಟ್ಟಿದ್ದಾರೆ.

ಈ ಮೂಲಕ ನಾಗರಪಂಚಮಿ ಸಮಯದಲ್ಲಿ ಪಶುವೈದ್ಯ ನಾಗರಹಾವಿಗೆ ಪಂಚಮಿ ಉಡುಗೊರೆ ನೀಡಿದ್ದಾರೆ.
Published On - 1:43 pm, Sun, 11 August 24



