AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರಿ ಮಳೆಯಿಂದ ಕೊಚ್ಚಿಹೋಗುತ್ತಿರುವ ಬೆಳೆ: ಹುಬ್ಬಳ್ಳಿ-ಧಾರವಾಡದಲ್ಲಿ ಕಂಗಾಲಾದ ರೈತರು

ಧಾರವಾಡ, ಜೂನ್ 14: ಧಾರವಾಡ ಜಿಲ್ಲೆಯಲ್ಲಿ ಮಳೆ ಅಬ್ಬರಿಸಿ ಬೊಬ್ಬಿರಿದಿದ್ದರಿಂದ ಜಿಲ್ಲೆಯ ಬಹುತೇಕ ಹಳ್ಳಗಳು ತುಂಬಿ ಹರಿಯುತ್ತಿದ್ದು ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಯಾವಾಗಲೂ ಹಳ್ಳಗಳು ತುಂಬಿದರೆ ಖುಷಿಪಡುವ ರೈತರು ಈ ಬಾರಿ ಮಾತ್ರ ಸಂಕಷ್ಟ ಪಡುವಂತಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಕೆಲವೇ ದಿನಗಳ ಹಿಂದೆ ಬಿತ್ತನೆ ಮಾಡಿದ್ದ ಹತ್ತಿ, ಹೆಸರು ಸೇರಿದಂತೆ ಅನೇಕ ಬೆಳೆಗಳು ಹಳ್ಳದ ನೀರು ನುಗ್ಗಿ ಹಾಳಾಗಿ ಹೋಗುತ್ತಿವೆ.

ಸಂಜಯ್ಯಾ ಚಿಕ್ಕಮಠ
| Updated By: Ganapathi Sharma|

Updated on: Jun 14, 2025 | 2:45 PM

Share
ತುಂಬಿ ಹರಿಯುತ್ತಿರುವ ಹಳ್ಳಗಳು. ಎಲ್ಲಿ ನೋಡಿದರೂ ನೀರು. ಇನ್ನೊಂದೆಡೆ ಹಳ್ಳದ ನೀರು ನುಗ್ಗಿದ್ದರಿಂದ ಹಾಳಾಗಿ ಹೋಗುತ್ತಿರುವ ಹೆಸರು, ಹತ್ತಿ ಬೆಳೆ. ಇದು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಂಚನಾಳ, ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ, ಶಿರಗುಪ್ಪಿ, ನವಲಗುಂದ ತಾಲೂಕಿನ ಅನೇಕ ಗ್ರಾಮಗಳಲ್ಲಿ ಕಂಡುಬಂದ ಸ್ಥಿತಿ. ಕಳೆದ ಮೂರ್ನಾಲ್ಕು ದಿನಗಳಿಂದ ಬೆಣ್ಣೆ ಹಳ್ಳದ ಅಚ್ಚುಕಟ್ಟು ಪ್ರದೇಶದಲ್ಲಿ ಭಾರಿ ಮಳೆಯಾಗಿದೆ. ಹೀಗಾಗಿ ಬೆಣ್ಣೆಹಳ್ಳಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಪ್ರವಾಹ ಸ್ಥಿತಿ ಉಂಟಾಗಿದೆ.

1 / 6
ಜೂನ್ ತಿಂಗಳಲ್ಲಿಯೇ ಹಳ್ಳ ತುಂಬಿ ಹರಿಯುತ್ತಿರುವುದು ಅನೇಕರ ಸಂತಸ ಹೆಚ್ಚಿಸಿದ್ದರೆ, ಅನೇಕ ರೈತರಿಗೆ ಸಂಕಷ್ಟ ತಂದಿದೆ. ಹಳ್ಳದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದರಿಂದ, ಹಳ್ಳದ ನೀರು ಹಳ್ಳದ ಸುತ್ತಮುತ್ತಲಿನ ಜಮೀನಿಗೆ ನುಗ್ಗಿದ್ದರಿಂದ  ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳದಿದ್ದ ಹತ್ತಿ, ಹೆಸರು ಸೇರಿದಂತೆ ಅನೇಕ ಬೆಳೆಗಳು ಹಾಳಾಗಿ ಹೋಗುತ್ತಿವೆ.

2 / 6
ಮೇ ಅಂತ್ಯದಲ್ಲಿ ರೈತರು ಬಿತ್ತನೆ ಬೀಜ, ಗೊಬ್ಬರ ಅಂತ ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ  ಮಾಡಿದ್ದರು. ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಬೆಳೆ ಕೂಡಾ ಚೆನ್ನಾಗಿ ಬಂದಿದ್ದವು. ಆದರೆ, ಹಳ್ಳದ ನೀರು ನುಗ್ಗಿದ್ದರಿಂದ ಹಳ್ಳದ ಸುತ್ತಮುತ್ತಲಿನ ಸಾವಿರಕ್ಕೂ ಅಧಿಕ ಎಕರೆಯಲ್ಲಿ ಬೆಳದಿದ್ದ ಬೆಳೆ ಹಾಳಾಗಿ ಹೋಗುತ್ತಿದೆ. ಇದು ರೈತರ ಆತಂಕಕ್ಕೆ ಕಾರಣವಾಗಿದೆ.

3 / 6
ಇನ್ನು ಬೆಣ್ಣೆಹಳ್ಳ ತುಂಬಿ ಹರಿದಾಗಲೆಲ್ಲಾ ಬೆಳೆ ಹಾಳಾಗಿ ಹೋಗುತ್ತಿದೆ ಎಂದಿದ್ದಾರೆ ರೈತರು. ಒಮ್ಮೊಮ್ಮೆ ವರ್ಷದಲ್ಲಿ ನಾಲ್ಕೈದು ಸಲ ಬೆಳೆ ಹಾಳಾಗಿ ಹೋಗಿರುವ  ಉದಾಹರಣೆ ಕೂಡಾ ಇದೆ. ಬೆಣ್ಣೆಹಳ್ಳದಲ್ಲಿ ಹೂಳು ತುಂಬಿಕೊಂಡಿದ್ದರಿಂದ, ಹಳ್ಳದಲ್ಲಿ ಆಳವಿಲ್ಲ. ಹೀಗಾಗಿ ಹೆಚ್ಚಿನ ನೀರು ಬಂದಾಗ ಅದು ಸುತ್ತಮುತ್ತಲಿನ ಜಮೀನಿಗೆ ನುಗ್ಗುತ್ತದೆ. ಅತ್ತ ಹಳ್ಳದ ಹೂಳು ತಗೆಯುವ ಕೆಲಸವು ಆಗುತ್ತಿಲ್ಲ. ಇತ್ತ ಬೆಳೆ ಕಳೆದುಕೊಂಡು ರೈತರಿಗೆ ಪರಿಹಾರವು ಸಿಗುತ್ತಿಲ್ಲ. ಒಮ್ಮೆ ಬೆಳೆ ಹಾಳಾದರೆ ಹೇಗೋ ಮತ್ತೆ ಬಿತ್ತನೆ ಮಾಡಬಹುದು. ಮೂರ್ನಾಲ್ಕು ಬಾರಿ ಬೆಳೆ ಹಾಳಾದರೆ ರೈತ ಬದಕುವುದಾದರೂ ಹೇಗೆ ಎಂದು ರೈತರು ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ಬೆಣ್ಣೆಹಳ್ಳದ ಹೂಳನ್ನು ಆದಷ್ಟು ಬೇಗನೆ ತಗೆಯಬೇಕು. ಜೊತೆಗೆ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

4 / 6
ಈ ಬಗ್ಗೆ ಪ್ರತಿಕ್ರಿಯೇ ನೀಡಿರುವ ಸಚಿವ ಸಂತೋಷ್ ಲಾಡ್, ಅಧಿಕಾರಿಗಳಿಂದ ಬೆಳೆಹಾನಿ ಸರ್ವೇ ನಡೆಸಿ, ಸರ್ಕಾರದಿಂದ ನೀಡಬಹುದಾದ ಪರಿಹಾರ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.

5 / 6
ಹೆಚ್ಚಿನ ಮಳೆಯಾದಗ ಬೆಣ್ಣೆಹಳ್ಳದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ಪ್ರತಿ ಬಾರಿ ಕೂಡಾ ಸಾವಿರಾರು ಎಕರೆಯಲ್ಲಿ ಬೆಳದಿದ್ದ ಬೆಳೆ ಹಾಳಾಗಿ ಹೋಗುತ್ತದೆ. ಹೀಗಾಗಿ ಬೆಣ್ಣೆಹಳ್ಳದಲ್ಲಿ ಉಂಟಾಗುತ್ತಿರುವ ಪ್ರವಾಹಕ್ಕೆ ಶಾಶ್ವತ ಪರಿಹಾರ ಕಲ್ಪಿಸುವುದರ ಜೊತೆಗೆ, ಬೆಳೆಹಾನಿಯಾದ ರೈತರಿಗೆ ಪರಿಹಾರ ಕೊಡಿಸುವ ಕೆಲಸ ಕೂಡಾ ಆಗಬೇಕಿದೆ.

6 / 6