Updated on: Dec 12, 2022 | 12:26 PM
ಮಂಗಳೂರಿನಲ್ಲಿ ಕೆನೈನ್ ಕ್ಲಬ್ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಶ್ವಾನ ಪ್ರದರ್ಶನದಲ್ಲಿ ಹಲವು ತಳಿಯ ನೂರಾರು ಶ್ವಾನಗಳು ಇಲ್ಲಿ ಪ್ರದರ್ಶನಗೊಂಡಿತು. ಕೆನೈನ್ ಕ್ಲಬ್ ಕಳೆದ ಹದಿನೈದು ವರ್ಷಗಳಿಂದ ರಾಜ್ಯದಲ್ಲಿ ರಾಷ್ಟ್ರಿಯ ಶ್ವಾನ ಪ್ರದರ್ಶನ ನಡೆಸಿಕೊಂಡು ಬರುತ್ತಾ ಇದೆ.
ಪ್ರದರ್ಶನಕ್ಕೆ ಬಂದಿದ್ದ ಎಲ್ಲಾ ಶ್ವಾನಗಳೂ ಒಂದಕ್ಕಿಂತ ಒಂದು ಡಿಫರೆಂಟ್ ಆಗಿದ್ದು. ಸಖತ್ ಕ್ಯೂಟ್ ಆಗಿರುವ ದೇಶ ವಿದೇಶದ ಶ್ವಾನಗಳ ಕ್ಯಾಟ್ ವಾಕ್ ನೋಡುಗರ ಗಮನ ಸೆಳೆದವು.
ಶ್ವಾನಗಳ ಆರೋಗ್ಯ, ಅವುಗಳ ಪರ್ಫಾರ್ಮೆನ್ಸ್, ಕ್ಯಾಟ್ ವಾಕ್ ಹೀಗೆ 11 ವಿಭಾಗದಲ್ಲಿ ಈ ಡಾಗ್ ಶೋ ನಡೆದಿದ್ದು, ಕೊರಿಯಾದ ಇಬ್ಬರು ಹಾಗೂ ಭಾರತದ ಒಬ್ಬರು ಈ ಡಾಗ್ ಶೋ ನ ತೀರ್ಪುಗಾರರಾಗಿದ್ದಾರೆ.
ಒಟ್ಟು 30 ತಳಿಗಳು ಈ ಡಾಗ್ ಶೋದಲ್ಲಿ ಪ್ರದರ್ಶನಗೊಂಡಿದ್ದು, ಇಲ್ಲಿ ಬಂದಿರುವ ಬೆಸ್ಟ್ ಶ್ವಾನಕ್ಕೆ ಯಾವುದೇ ಪ್ರೈಸ್ ಅಮೌಂಟ್ ಇರಲಿಲ್ಲ, ಕೇವಲ ಸರ್ಟಿಫಿಕೇಟ್ ಮಾತ್ರ ನೀಡಲಾಗಿತ್ತು.
ನ್ಯೂ ಫೌಂಡ್ಲೆಡ್ ಹಾಗೂ ಚೌಚೌ ಡಾಗ್ ಎನ್ನುವ ಅಪರೂಪದ ತಳಿಗಳು ಈ ಬಾರಿ ಡಾಗ್ ಶೋನ ಅಟ್ರಾಕ್ಷನ್ ಆಗಿತ್ತು. ಒಂದೇ ಕಡೆಯಲ್ಲಿ ಇಷ್ಟೊಂದು ವೆರೈಟಿ ಶ್ವಾನಗಳನ್ನು ನೋಡಿ ಶ್ವಾನ ಪ್ರೀಯರಂತು ಸಕತ್ ಖಷಿ ಪಟ್ಟರು.
ಮಂಗಳೂರಿನಲ್ಲಿ ನಡೆದಿರೋ ಈ ಶ್ವಾನ ಪ್ರದರ್ಶನ ಶ್ವಾನ ಪ್ರಿಯರಿಗೆ ಹಲವು ದೇಶಿ ವಿದೇಶಿ ತಳಿಗಳ ಶ್ವಾನವನ್ನು ಪರಿಚಯಿಸಿದೆ.
ಒಂದಕ್ಕಿಂತ ಮತ್ತೊಂದು ಸೂಪರ್, ಸಕತ್ ಲುಕ್ ಮೂಲಕ ಕ್ಯೂಟ್ ಆಗಿ ಕಾಣ್ತಾ ಇದ್ದ ಶ್ವಾನಗಳು ಎಲ್ಲರ ಗಮನ ಸೆಳೆದಿತ್ತು.
ಒಂದಕ್ಕಿಂತ ಒಂದು ಕ್ಯೂಟ್ ಆಗಿ ಡಿಫೆರಂಟ್ ಆಗಿದ್ದ ಶ್ವಾನಗಳ ಜೊತೆ ಹಲವರು ಸೆಲ್ಫಿ ತೆಗೆದುಕೊಂಡರೆ, ಇನ್ನೂ ಕೆಲವರು ಶ್ವಾನಗಳನ್ನು ಎತ್ತಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡರು, ಒಟ್ಟಾರೆ ಇಲ್ಲಿನ ಶ್ವಾನಗಳಿಗೆ ಜನರು ಫುಲ್ ಫಿದಾ ಆಗಿದ್ದಂತು ಸುಳ್ಳಲ್ಲ.