- Kannada News Photo gallery Here is a trendy saree collection that enhances the beauty of women Kannada news
Latest Saree Trends: ಹೆಣ್ಣಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಈ ಟ್ರೇಂಡಿ ಸೀರೆಗಳು
ಹಬ್ಬ ಹರಿದಿನ, ಮದುವೆ ಸಮಾರಂಭಗಳು ಹತ್ತಿರ ಬರುತ್ತಿದ್ದೇಯಾ? ನಿಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವ ಟ್ರೇಂಡಿ ಸೀರೆ ಕಲೆಕ್ಷನ್ ಇಲ್ಲಿದೆ
Updated on: Dec 10, 2022 | 6:34 PM

ಕಲರ್ ಬ್ಲಾಕ್ ಸೀರೆಗಳು(Colour Block sarees): ಇದು ಅತ್ಯಂತ ಸಿಂಪಲ್ ಸೀರೆಯಾಗಿದ್ದು, ಇದು ಸಾಕಷ್ಟು ಆರಾಮದಾಯಕವು ಆಗಿದೆ. ಜೊತೆಗೆ ಇಂತಹ ಬಣ್ಣ ಬಣ್ಣದ ಸೀರೆಗಳು ನಿಮ್ಮನ್ನು ಅತ್ಯಂತ ಸುಂದರವಾಗಿ ಕಾಣುವಂತೆ ಮಾಡುತ್ತದೆ.

ನೆಟ್ ಸೀರೆಗಳು(Net sarees): ನೆಟ್ ಸೀರೆಗಳು ಮತ್ತೇ ಟ್ರೆಂಡ್ ಆಗುತ್ತಿದೆ. ಈ ನೆಟ್ ಸೀರೆಗಳ ಝರಿ, ಭಾರವಾದ ಬಾರ್ಡರ್‌ಗಳು ಮತ್ತು ಡೀಪ್ ನೆಕ್ ಬ್ಲೌಸ್ ನಿಮಗೆ ಗ್ರಾಂಡ್ ಲುಕ್ ನೀಡುತ್ತದೆ.

ರಫಲ್ ಸೀರೆಗಳು(Ruffle sarees): ಇದು ಸಂಪೂರ್ಣವಾಗಿ ಫ್ಯಾನ್ಸಿ ಸೀರೆಯಾಗಿದ್ದು ಇದಕ್ಕೆ ಯಾವುದೇ ಗ್ರ್ಯಾಂಡ್ ಆಭರಣಗಳ ಅಗತ್ಯವಿಲ್ಲ. ಇಂತಹ ಸೀರೆಗಳಲ್ಲಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸಲು ಮಿನುಗುವ ಬ್ಲೌಸ್ ಧರಿಸಿ.

ಮಲ್ಟಿ ಕಲರ್ ಸೀರೆಗಳು(Multi-colour sarees): ಒಂದೇ ಸೀರೆಯಲ್ಲಿ ಸಾಕಷ್ಟು ಬಣ್ಣಗಳ ಹೊಂದಿರುವ ಈ ಸೀರೆಯೂ ಯಾವುದೇ ಸಮಾರಂಭಗಳಿಗೆ ಉತ್ತಮ ಆಯ್ಕೆಯಾಗಿದೆ. ಈ ಸೀರೆ ಉಟ್ಟುಕೊಳ್ಳುವುದರ ಜೊತೆಗೆ ಗ್ರ್ಯಾಂಡ್ ಕಿವಿಯೋಲೆಯನ್ನು ಹಾಕಿ ಇದು ನಿಮ್ಮ ಲುಕ್ ಬದಲಾಯಿಸುತ್ತದೆ.

ರೇಷ್ಮೆ ಸೀರೆಗಳು(Pastel sarees in silk): ಈಗೀಗಾ ನೀಲಿಬಣ್ಣದ ರೇಷ್ಮೆ ಸೀರೆಗಳು ಮದುವೆ ಮನೆಗಳಲ್ಲಿ ಹೆಚ್ಚಾಗಿ ಸದ್ದು ಮಾಡ್ತಾ ಇದೆ. ಹೌದು ಮದುವೆ ಸಮಾರಂಭಗಳಲ್ಲಿ ರೇಷ್ಮೆ ಸೀರೆಗಳು ನಿಮಗೆ ಸಂಪ್ರದಾಯಿಕ ಲುಕ್ ನೀಡುತ್ತದೆ.

ಆರ್ಗನ್ಜಾ ಸೀರೆಗಳು(Organza sarees): ನಿಮಗೆ ರೇಷ್ಮೆ ಸೀರೆಗಳು ಇಷ್ಟವಿಲ್ಲದಿದ್ದರೆ ನಿಮಗಾಗಿ ಆರ್ಗನ್ಜಾ ಸೀರೆಗಳು ಲಭ್ಯವಿದೆ. ಈ ಸೀರೆಗಳು ನೋಡಲು ರೇಷ್ಮೆಯಂತೆ ಕಾಣುತ್ತದೆ. ಜೊತೆಗೆ ಸಾಕಷ್ಟು ಹಗುರವಾಗಿದೆ. ಇದನ್ನು ನೀವು ಮದುವೆ ಸಮಾರಂಭಗಳಿಗೂ ಉಟ್ಟುಕೊಳ್ಳಬಹುದು.

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.
Read More




