ಪ್ರಭಾಸ್ ಮದುವೆ ಆಗದೆ ಇರಲು ಕಾರಣವಾಯ್ತು ಆ ಒಂದು ವಿಚಾರ; ಮೌನ ಮುರಿದ ನಟ
ಎಲ್ಲರೂ ಒಂದು ಹಂತಕ್ಕೆ ಸೆಟಲ್ ಆದ ನಂತರ ಮದುವೆ ಆಗೋಕೆ ಇಷ್ಟಪಡುತ್ತಾರೆ. ಆದರೆ, ಪ್ರಭಾಸ್ ವಿಚಾರದಲ್ಲಿ ಹಾಗಿಲ್ಲ. ಅವರ ಬಳಿ ಎಲ್ಲವೂ ಇದೆ. ಆದರೆ, ಮದುವೆ ಮಾತ್ರ ಆಗುವ ಗೋಜಿಗೆ ಹೋಗಿಲ್ಲ.
Updated on:Mar 03, 2022 | 5:15 PM

ನಟ ಪ್ರಭಾಸ್ ಅವರ ವಯಸ್ಸು ಈಗ 42. ಅವರು ಪ್ರತಿ ಸಿನಿಮಾಗೆ ಕೋಟಿಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಮೂರು ದೊಡ್ಡ ಪ್ರಾಜೆಕ್ಟ್ಗಳು ಅವರ ಕೈಯಲ್ಲಿವೆ. ಅನೇಕ ಕಡೆಗಳಲ್ಲಿ ಆಸ್ತಿ ಹೊಂದಿದ್ದಾರೆ. ಸಾಕಷ್ಟು ಐಷಾರಾಮಿ ಕಾರುಗಳು ಅವರ ಬಳಿ ಇವೆ. ಆದರೆ, ಈ ವರೆಗೆ ಅವರು ಮದುವೆ ಮಾತ್ರ ಆಗಿಲ್ಲ.

ಎಲ್ಲರೂ ಒಂದು ಹಂತಕ್ಕೆ ಸೆಟಲ್ ಆದ ನಂತರ ಮದುವೆ ಆಗೋಕೆ ಇಷ್ಟಪಡುತ್ತಾರೆ. ಆದರೆ, ಪ್ರಭಾಸ್ ವಿಚಾರದಲ್ಲಿ ಹಾಗಿಲ್ಲ. ಅವರ ಬಳಿ ಎಲ್ಲವೂ ಇದೆ. ಆದರೆ, ಮದುವೆ ಮಾತ್ರ ಆಗುವ ಗೋಜಿಗೆ ಹೋಗಿಲ್ಲ. ಈ ವಿಚಾರದಲ್ಲಿ ಅವರ ಅಭಿಮಾನಿಗಳಲ್ಲಿ ಕುತೂಹಲ ಇದೆ. ಈಗ ಏಕೆ ಮದುವೆ ಆಗಿಲ್ಲ ಎನ್ನುವ ಪ್ರಶ್ನೆಗೆ ಪ್ರಭಾಸ್ ಉತ್ತರ ನೀಡಿದ್ದಾರೆ.

‘ರಾಧೆ ಶ್ಯಾಮ್’ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮ ಮುಂಬೈನಲ್ಲಿ ನಡೆದಿದೆ. ಈ ವೇಳೆ ಪ್ರಭಾಸ್ ಕೂಡ ಇದ್ದರು. ಮಾಧ್ಯಮಗಳ ಜತೆ ಮಾತನಾಡುವಾಗ, ಸಿನಿಮಾ ವಿಚಾರದ ಜತೆಗೆ ಮದುವೆ ಬಗ್ಗೆಯೂ ಕೇಳಲಾಗಿದೆ. ಇದಕ್ಕೆ ಅವರು ನೇರವಾಗಿಯೇ ಉತ್ತರಿಸಿದ್ದಾರೆ.

‘ರಾಧೆ ಶ್ಯಾಮ್’ ಸಿನಿಮಾದಲ್ಲಿ ಕೈ ನೋಡಿ ಭವಿಷ್ಯ ಹೇಳುವ ವ್ಯಕ್ತಿಯಾಗಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಇದೇ ಮಾದರಿಯಲ್ಲೇ ಅವರು ಈಗ ಉತ್ತರಿಸಿದ್ದಾರೆ. ‘ಪ್ರೀತಿ ವಿಚಾರದಲ್ಲಿ ನನ್ನ ಪ್ರಿಡಿಕ್ಷನ್ಗಳು ಯಾವಾಗಲೂ ವಿಫಲವಾಗಿದೆ. ಹೀಗಾಗಿ ಈವರೆಗೆ ಮದುವೆ ಆಗಿಲ್ಲ’ ಎಂದಿದ್ದಾರೆ ಪ್ರಭಾಸ್.

ಈ ಮೊದಲು ಅನುಷ್ಕಾ ಶೆಟ್ಟಿ ಜತೆ ಪ್ರಭಾಸ್ ಹೆಸರು ತಳುಕು ಹಾಕಿಕೊಂಡಿತ್ತು. ಅನುಷ್ಕಾ ಕೂಡ ಈವರೆಗೆ ಮದುವೆ ಆಗಿಲ್ಲ. ‘ಬಾಹುಬಲಿ’ ಸಿನಿಮಾದಲ್ಲಿ ಇಬ್ಬರೂ ಒಟ್ಟಾಗಿ ನಟಿಸಿದ್ದರು. ಆದರೆ, ಕೆಲ ಸಮಯದ ನಂತರ ಈ ವಿಚಾರದ ಬಗ್ಗೆ ಯಾವುದೇ ಅಪ್ಡೇಟ್ ಬರಲಿಲ್ಲ.
Published On - 3:59 pm, Thu, 3 March 22




