Kalyani Priyadarshan: ‘ಹೃದಯಂ’ ಮೂಲಕ ಎಲ್ಲರ ಮನಗೆದ್ದ ಕಲ್ಯಾಣಿ ಪ್ರಿಯದರ್ಶನ್; ಇಲ್ಲಿವೆ ನಟಿಯ ಕ್ಯೂಟ್ ಫೋಟೋಗಳು
Kalyani Priyadarshan Photos: ಮಲಯಾಳಂನ ‘ಹೃದಯಂ’ ಚಿತ್ರ ಈಗ ಎಲ್ಲೆಡೆ ದೊಡ್ಡ ಮಟ್ಟದಲ್ಲಿ ಸೆನ್ಸೇಶನ್ ಸೃಷ್ಟಿಸುತ್ತಿದೆ. ಆ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವವರು ಕಲ್ಯಾಣಿ ಪ್ರಿಯದರ್ಶನ್. ನಟಿಯ ಕ್ಯೂಟ್ ಫೋಟೋ ಗ್ಯಾಲರಿ ಇಲ್ಲಿದೆ.
Updated on:Mar 23, 2022 | 8:54 PM

ಮಲಯಾಳಂ ಚಿತ್ರರಂಗದಲ್ಲಿ ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಹಿಟ್ ಆದ ಚಿತ್ರ ‘ಹೃದಯಂ’. ಆ ಚಿತ್ರದ ನಾಯಕಿ ಕಲ್ಯಾಣಿ ಪ್ರಿಯದರ್ಶನ್ ಎಲ್ಲರ ಮನಗೆದ್ದಿದ್ದಾರೆ.

ಚಿತ್ರಮಂದಿರದಲ್ಲಿ ಗೆದ್ದ ‘ಹೃದಯಂ’, ಪ್ರಸ್ತುತ ‘ಡಿಸ್ನೆ+ಹಾಟ್ಸ್ಟಾರ್’ನಲ್ಲೂ ಭರ್ಜರಿ ಪ್ರದರ್ಶನ ಆಗುತ್ತಿದೆ. ಈ ಚಿತ್ರದಲ್ಲಿ ಕಲ್ಯಾಣಿ ಪ್ರಿಯದರ್ಶನ್ ಪಾತ್ರಪೋಷಣೆಗೆ ಯುವಜನರು ಫಿದಾ ಆಗಿದ್ದಾರೆ.

29 ವರ್ಷದ ಕಲ್ಯಾಣಿ ಪ್ರಿಯದರ್ಶನ್ ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ನಟಿ ಪದಾರ್ಪಣೆ ಮಾಡಿದ್ದು ತೆಲುಗು ಚಿತ್ರರಂಗದ ಮೂಲಕ.

ಕಲ್ಯಾಣಿ ಪ್ರಿದರ್ಶನ್ ಸಿನಿ ಹಿನ್ನೆಲೆಯಿಂದ ಬಂದವರು. ಅದು ಅವರ ಹೆಸರಿನಲ್ಲಿಯೇ ಇದೆ. ಹೌದು. ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಪುತ್ರಿ ಕಲ್ಯಾಣಿ ಪ್ರಿಯದರ್ಶನ್.

ಆದರೆ ನಟಿ ಸ್ವತಂತ್ರವಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದು, ತಮ್ಮದೇ ಅಭಿಮಾನಿ ಬಳಗ ಸಂಪಾದಿಸಿದ್ದಾರೆ.

ಸಾಲುಸಾಲು ಹಿಟ್ ಚಿತ್ರ ಕೊಟ್ಟ ನಟಿ ಈಗ ದಕ್ಷಿಣದಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ತಮ್ಮ ಪಾತ್ರಪೋಷಣೆಗೆ ಫಿಲ್ಮ್ಫೇರ್, SIIMA ಮೊದಲಾದ ಪ್ರಶಸ್ತಿಗಳಿಗೆ ಕಲ್ಯಾಣಿ ಪ್ರಿದರ್ಶನ್ ಪಾತ್ರರಾಗಿದ್ದಾರೆ.

ಪ್ರಸ್ತುತ ಕಲ್ಯಾಣಿ ‘ತಲ್ಲುಮಾಲಾ’ ಚಿತ್ರದಲ್ಲಿ ಟೊವಿನೋ ಥಾಮಸ್ಗೆ ಜತೆಯಾಗಿ ನಟಿಸುತ್ತಿದ್ದಾರೆ.

ಕಲ್ಯಾಣಿ ಪ್ರಿಯದರ್ಶನ್
Published On - 8:54 pm, Wed, 23 March 22



