AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಮಂತಿಕೆಯಲ್ಲಿ ಅಂಬಾನಿಯನ್ನು ಹಿಂದಿಕ್ಕಿದ ಅದಾನಿ; ಬಿಲಿಯನೇರ್ಸ್ ಪಟ್ಟಿಗೆ ಶಾರುಖ್ ಸೇರ್ಪಡೆ

ನವದೆಹಲಿ, ಆಗಸ್ಟ್ 29: ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿ 2024 ಬಿಡುಗಡೆ ಆಗಿದ್ದು ಕೆಲ ಸೋಜಿಗದ ಸಂಗತಿಗಳು ಅನಾವರಣಗೊಂಡಿವೆ. ಭಾರತದಲ್ಲಿ ಬಿಲಿಯನೇರ್​ಗಳು, ಮಿಲಿಯನೇರ್​ಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಅದಾನಿ ನಂಬರ್ ಒನ್ ಎನಿಸಿದ್ದಾರೆ. ಬಿಲಿಯನೇರ್ಸ್ ಸಂಖ್ಯೆ ಗರಿಷ್ಠಕ್ಕೆ ಹೋಗಿದೆ. ಶಾರುಖ್ ಖಾನ್ ಮೊದಲ ಬಾರಿಗೆ ಬಿಲಿಯನೇರ್ ಪಟ್ಟಿ ಸೇರ್ಪಡೆಯಾಗಿದ್ದಾರೆ. ಈ ಕುರಿತ ವರದಿ ಇಲ್ಲಿದೆ.

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 29, 2024 | 3:00 PM

Share
2024ರ ಹುರುನ್ ಇಂಡಿಯಾ ರಿಚ್ ಲಿಸ್ಟ್ ಪ್ರಕಟವಾಗಿದೆ. ಭಾರತದ ಅತಿ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿ ಗೌತಮ್ ಅದಾನಿ ಅಗ್ರಸ್ಥಾನಕ್ಕೇರಿದ್ದಾರೆ. ಹಿಂಡನ್ಬರ್ಗ್ ರಿಸರ್ಚ್ ವರದಿ ಪ್ರಕಟವಾದ ಬಳಿಕ ಇದೇ ಮೊದಲ ಬಾರಿಗೆ ಅದಾನಿ ಅಂಡ್ ಫ್ಯಾಮಿಲಿ ಭಾರತದ ನಂಬರ್ ಒನ್ ಶ್ರೀಮಂತರೆನಿಸಿದೆ. ಷೇರುಗಳ ಈಗಿನ ಮೌಲ್ಯದ ಪ್ರಕಾರ ಒಟ್ಟಾರೆ ಮಾರುಕಟ್ಟೆ ಸಂಪತ್ತು ಸೇರಿಸಿದ ಆಸ್ತಿಯನ್ನು ಪರಿಗಣಿಸಿ ಪಟ್ಟಿ ಮಾಡಲಾಗಿದೆ. ಭಾರತದ ಟಾಪ್-10 ಶ್ರೀಮಂತರ ಪಟ್ಟಿ ಮುಂದಿದೆ ನೋಡಿ...

1 / 7
ಅತೀ ಶ್ರೀಮಂತ ಭಾರತೀಯರ ಪಟ್ಟಿ: 1)ಗೌತಮ್ ಅದಾನಿ ಕುಟುಂಬ, 2)ಮುಕೇಶ್ ಅಂಬಾನಿ ಕುಟುಂಬ, 3)ಶಿವ್ ನಾದರ್ ಕುಟುಂಬ, 4)ಸೈರಸ್ ಪೂನಾವಾಲ ಕುಟುಂಬ, 5)ದಿಲೀಪ್ ಶಾಂಘವಿ, 6)ಕುಮಾರಮಂಗಲಂ ಬಿರ್ಲಾ ಕುಟುಂಬ, 7)ಗೋಪಿಚಂದ್ ಹಿಂದೂಜಾ ಕುಟುಂಬ, 8)ರಾಧಾಕಿಶನ್ ದಮಾನಿ ಕುಟುಂಬ, 9)ಅಜೀಮ್ ಪ್ರೇಮ್​ಜಿ ಕುಟುಂಬ, 10)ನೀರಜ್ ಬಜಾಜ್ ಕುಟುಂಬ.

2 / 7
ಗೌತಮ್ ಅದಾನಿ ಮತ್ತು ಕುಟುಂಬದ ಬಳಿ ಇರುವ ಒಟ್ಟಾರೆ ಸಂಪತ್ತು 11.61 ಲಕ್ಷ ಕೋಟಿ ರೂ. ಹಾಗೆಯೇ, ಮುಕೇಶ್ ಅಂಬಾನಿ ಬಳಿ ಇರುವ ಸಂಪತ್ತಿನ ಮೌಲ್ಯ 10.14 ಲಕ್ಷ ಕೋಟಿ ರೂ. ಹತ್ತನೇ ಸ್ಥಾನದಲ್ಲಿರುವ ನೀರಜ್ ಬಜಾಜ್ ಮತ್ತು ಕುಟುಂಬ ಹೊಂದಿರುವ ಆಸ್ತಿ ಮೌಲ್ಯ 1.62 ಲಕ್ಷ ಕೋಟಿ ರೂ.

3 / 7
2011ರಿಂದ ಹುರುನ್ ಇಂಡಿಯಾ ರಿಚ್ ಲಿಸ್ಟ್ ಪ್ರಕಟವಾಗುತ್ತಿದೆ. ಇದೇ ಮೊದಲ ಬಾರಿಗೆ ಈ ಪಟ್ಟಿಯಲ್ಲಿರುವ ಶ್ರೀಮಂತರ ಸಂಖ್ಯೆ 1,500 ಗಡಿ ದಾಟಿದೆ. ಕನಿಷ್ಠ 1,000 ಕೋಟಿ ರೂ ಆಸ್ತಿ ಹೊಂದಿರುವವರ ಪಟ್ಟಿ ಇದು. 2024ರ ಹುರುನ್ ಇಂಡಿಯಾ ಪಟ್ಟಿಯಲ್ಲಿ 1,539 ವ್ಯಕ್ತಿಗಳಿದ್ದಾರೆ. ಬಿಲಿಯನೇರ್​ಗಳ ಸಂಖ್ಯೆ 334ಕ್ಕೆ ಏರಿದೆ. ಬಿಲಿಯನೇರ್ ಎಂದರೆ ಒಂದು ಬಿಲಿಯನ್ ಡಾಲರ್​ಗಿಂತ ಹೆಚ್ಚು ಆಸ್ತಿ ಹೊಂದಿರುವವರು.

4 / 7
ಬಾಲಿವುಡ್ ಬಾದ್​ಶಾ ಶಾರುಖ್ ಖಾನ್ ಮೊದಲ ಬಾರಿಗೆ ಬಿಲಿಯನೇರ್ ಎನಿಸಿದ್ದಾರೆ. ಬಾಲಿವುಡ್​ನ ಕೆಲ ಪ್ರಮುಖ ಹೆಸರುಗಳು ಹುರುನ್ ಪಟ್ಟಿಯಲ್ಲಿ ಕಾಣಿಸಿವೆ. ಶಾರುಖ್ ಖಾನ್ ಮುಂಚೂಣಿಯಲ್ಲಿದ್ದಾರೆ. ಜೂಹಿ ಚಾವ್ಲಾ, ಹೃತಿಕ್ ರೋಷನ್, ಅಮಿತಾಭ್ ಬಚ್ಚನ್, ಕರಣ್ ಜೋಹರ್ ಅವರು ಪಟ್ಟಿಯಲ್ಲಿದ್ದಾರೆ.

5 / 7
ಹುರುನ್ ಇಂಡಿಯಾ ರಿಚ್ ಲಿಸ್ಟ್​ನಲ್ಲಿ ಅತಿಹೆಚ್ಚು ಮಂದಿ ಹೊಂದಿರುವ ನಗರಗಳ ಪಟ್ಟಿಯಲ್ಲಿ ಮುಂಬೈ ಮತ್ತು ದೆಹಲಿ ಅಗ್ರಸ್ಥಾನಗಳನ್ನು ಆಕ್ರಮಿಸಿವೆ. ಹೈದರಾಬಾದ್ ನಗರ ಬೆಂಗಳೂರನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದೆ. ಅಂದರೆ, ಹೈದರಾಬಾದ್​ನಲ್ಲಿ ಶ್ರೀಮಂತರ ಸಂಖ್ಯೆ ಬೆಂಗಳೂರಿನದಕ್ಕಿಂತ ಹೆಚ್ಚಿದೆ.

6 / 7
ಹುರುನ್ ಇಂಡಿಯಾ ರಿಚ್ ಲಿಸ್ಟ್​ನಲ್ಲಿ ಇರುವ 1,539 ವ್ಯಕ್ತಿಗಳ ಒಟ್ಟಾರೆ ಸಂಪತ್ತು 159 ಲಕ್ಷ ಕೋಟಿ ರೂ. ಇದು ಶ್ರೀಮಂತ ದೇಶಗಳಾದ ಸ್ವಿಟ್ಜರ್​ಲ್ಯಾಂಡ್ ಮತ್ತು ಸೌದಿ ಅರೇಬಿಯಾದ ಜಿಡಿಪಿಗಳನ್ನು ಒಟ್ಟಿಗೆ ಸೇರಿಸಿದರೆ ಆಗುವ ಮೊತ್ತಕ್ಕಿಂತ ಹೆಚ್ಚು.

7 / 7
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ

ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ

‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು

17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ

ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ

CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ

RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ

ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!

ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?

ಡಿಸಿಎಂಗಳ ಆಯ್ಕೆಯೇ ಈಗ ಕಾಂಗ್ರೆಸ್​​ ಹೈಕಮಾಂಡ್​​ಗೆ ದೊಡ್ಡ ಸವಾಲು!