- Kannada News Photo gallery Hundreds of bodybuilders showed off their giant bodies in front of the crowd, showed off their strength, and won awards, where?, in Davanagere bodybuilders showed off giant bodies, their strength, and won awards
ಜನ್ರ ಮುಂದೆ ತಮ್ಮ ದೈತ್ಯಾಕಾರ ದೇಹಗಳ ಪ್ರದರ್ಶಿಸಿ, ಶಕ್ತಿ ಪ್ರದರ್ಶನ ಮಾಡಿ, ಪ್ರಶಸ್ತಿ ಹಣ ಬಾಚಿಕೊಂಡ ನೂರಾರು ದೇಹದಾರ್ಢ್ಯ ಪಟುಗಳು , ಯಾವೂರಲ್ಲಿ?
ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ್ದ ದೈತ್ಯಾಕಾರ ದೇಹ ಹೊಂದಿರುವ ಬಾಡಿ ಬಿಲ್ಡಿರ್ಸ್ ಗಳು ಸೌತ್ ಇಂಡಿಯಾ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅಂತರಾಷ್ಟ್ರೀಯ ಕ್ರೀಡಾಪಟು ಬಾಡಿ ಬಿಲ್ಡರ್ ಮಂಜು ಮೊಗವೀರ್ ರವರ ನೇತೃತ್ವದಲ್ಲಿ ಆಯೋಜನೆ ಮಾಡಿದ್ದ ಸೌತ್ ಇಂಡಿಯಾ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ನೂರಾರು ಬಾಡಿಬಿಲ್ಡರ್ಗಳು ಭಾಗಿಯಾಗಿ ವೇದಿಕೆಯಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು.
Updated on:Mar 12, 2024 | 11:05 AM

ಬಾಡಿ ಬಿಲ್ಡಿಂಗ್ ಸ್ಪರ್ಧೆಗೆ ದೇಹವನ್ನು ದಂಡಿಸಿ ಬಿಲ್ಡರ್ಸ್, ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗಿ ದೈತ್ಯಾಕಾರದ ದೇಹವನ್ನು ಪ್ರದರ್ಶನ ಮಾಡಿದ್ರು. ಬೆಣ್ಣೆ ನಗರಿಯಲ್ಲಿ ದಕ್ಷಿಣ ಭಾರತದ ಇಂತಹದೊಂದು ಸ್ಪರ್ಧೆ ಗಮನ ಸೆಳೆದಿದ್ದು ಮಾತ್ರ ಹತ್ತಾರು ಕಾರಣಕ್ಕೆ. ಈ ಸ್ಟೋರಿ ನೋಡಿ. ಆ ಬಾಡಿ ಬಿಲ್ಡರ್ಗಳು ಸ್ಪರ್ಧೆಗಿಳಿಯಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ದೇಹವನ್ನು ದಂಡಿಸಿ ಸ್ಪರ್ಧೆಗೆ ಭರ್ಜರಿ ತಯಾರಿ ನಡೆಸಿದ್ದರು.

ವೇದಿಕೆ ಎಂಬ ಅವಕಾಶ ಸಿಕ್ಕ ತಕ್ಷಣ ತಮ್ಮ ಶಕ್ತಿ ಪ್ರದರ್ಶನ ಮಾಡಿ ಬಹುಮಾನಗಳನ್ನು ಬಾಚಿಕೊಳ್ಳುವುದು, ಮತ್ತೆ ಮತ್ತೇ ದೇಹ ದಂಡಿಸುವುದೇ ಇವರ ಕಾಯಕ. ದಾವಣಗೆರೆ ನಗರದಲ್ಲಿ ನಡೆದ ಸ್ಪರ್ಧೆಯಲ್ಲಿ ನೂರಾರು ದೇಹದಾರ್ಢ್ಯ ಪಟುಗಳು ಭಾಗವಹಿಸಿ ಜನ್ರ ಮುಂದೆ ದೈತ್ಯಾಕಾರದ ದೇಹಗಳನ್ನು ಪ್ರದರ್ಶಿಸಿ, ಶಕ್ತಿ ಪ್ರದರ್ಶನ ಮಾಡಿ ಪ್ರಶಸ್ತಿ ಹಾಗು ಹಣವನ್ನು ಬಾಚಿಕೊಂಡ್ರು. ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ನಿನ್ನೆ ಸೋಮವಾರ ಈ ಸೌಥ್ ಇಂಡಿಯಾ ಬಾಡಿ ಬಿಲ್ಡಿಂಗ್ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.

ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ್ದ ದೈತ್ಯಾಕಾರ ದೇಹ ಹೊಂದಿರುವ ಬಾಡಿ ಬಿಲ್ಡಿರ್ಸ್ ಗಳು ಸೌತ್ ಇಂಡಿಯಾ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅಂತರಾಷ್ಟ್ರೀಯ ಕ್ರೀಡಾಪಟು ಬಾಡಿ ಬಿಲ್ಡರ್ ಮಂಜು ಮೊಗವೀರ್ ರವರ ನೇತೃತ್ವದಲ್ಲಿ ಆಯೋಜನೆ ಮಾಡಿದ್ದ ಸೌತ್ ಇಂಡಿಯಾ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ನೂರಾರು ಬಾಡಿಬಿಲ್ಡರ್ಗಳು ಭಾಗಿಯಾಗಿ ವೇದಿಕೆಯಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು.

ಮಂಜು ಮೊಗವೀರ್ ಸ್ನೇಹಿತರ ಬಳಗದಿಂದ ಎರಡನೇ ಬಾರಿಗೆ ಆಯೋಜಿಸಲಾಗಿದ್ದ ದಕ್ಷಿಣ ಭಾರತ ದೇಹದಾರ್ಢ್ಯ ಸ್ಪರ್ಧೆಗೆ ಉತ್ತಮ್ಮ ಪ್ರತಿಕ್ರಿಯೆ ದೊರೆತಿದೆ. ಈ ದಕ್ಷಿಣ ಭಾರತ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಸುಮಾರು 150 ಕ್ಕುಹೆಚ್ಚು ದೇಹದಾರ್ಢ್ಯಪಟುಗಳು ಭಾಗವಹಿಸಿದ್ದರು.

ದೂರದ ಊರುಗಳಿಂದ ಆಗಮಿಸಿ ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ದೇಹದಾರ್ಢ್ಯ ಪಟುಗಳಿಗೆ ಊಟದ ವ್ಯವಸ್ಥೆಯೊಂದಿಗೆ ಬೇಕಾದ ಆಹಾರವನ್ನು, ವಸತಿಯ ವ್ಯವಸ್ಥೆ ಕಲ್ಪಿಸಲಾಗಿತ್ತು.


ಇನ್ನು ಸ್ಪರ್ಧೆಯಲ್ಲಿ ಭಾಗವಹಿಸುವವರು ಜಿಲ್ಲಾಮಟ್ಟದಲ್ಲಿ 200 , ರಾಜ್ಯಮಟ್ಟದಲ್ಲಿ 500 ಹಾಗೂ ಸೌಥ್ ಇಂಡಿಯಾ ಮಟ್ಟದಲ್ಲಿ 1000 ರೂಪಾಯಿ ಶುಲ್ಕವನ್ನು ಅಸೋಸಿಯೇಷನ್ ನಲ್ಲಿ ಪಾವತಿ ಮಾಡುವ ವ್ಯವಸ್ಥೆ ಕಲ್ಪಿಸಲಾಗಿತ್ತು.

ದೇಹದಾರ್ಢ್ಯ ಸ್ಪರ್ಧೆಯಲ್ಲಿ ವಿಜೇತರಿಗಾಗಿ ಆಕರ್ಷಕ ಪ್ರಶಸ್ತಿಗಳು ಇದ್ದವು. ದಕ್ಷಿಣ ಭಾರತ ಮಟ್ಟದಲ್ಲಿ ಗೆದ್ದವರಿಗೆ 1 ಲಕ್ಷ ರೂಪಾಯಿ ಬಹುಮಾನ, ಮೊದಲನೇ ರನ್ನರ್ ಗೆ 25 ಸಾವಿರ, ಎರಡನೇ ರನ್ನರ್ ಗೆ 25 ಸಾವಿರ ಹಾಗೂ ಬೆಸ್ಟ್ ಪೋಸರ್ ಗೆ 10 ಸಾವಿರ ರೂಪಾಯಿ ಬಹುಮಾನ ನೀಡಲಾಯಿತು.


ಇನ್ನು ಸ್ಪರ್ಧೆಯಲ್ಲಿ ನುರಿತ ತೀರ್ಪುಗಾರರನ್ನು ಕರೆತರಲಾಗಿತ್ತು. ತೀರ್ಪುಗಾರರು ಹೇಳಿದಂತೆ ದೇಹದಾರ್ಢ್ಯ ಪಟುಗಳು ವೇದಿಕೆಯಲ್ಲಿ ಪೋಸಿಂಗ್ ಮಾಡ್ತಿದ್ದರು. ಡಬಲ್ ಬೈಸೆಪ್ಸ್, ಸೈಡ್ ಚೆಸ್ಟ್, ಲ್ಯಾಟಿಸ್, ಟ್ರೈಸೆಪ್ಸ್, ಸಿಂಗಲ್ ಬೈಸೆಪ್, ನೆಕ್, ಅಬ್ಡಾಮಿನಲ್ಸ್, ಸೈಡ್ ಅಬ್ಡಾಮಿನಲ್ಸ್ ಹೀಗೆ ನಾನಾ ಪೋಸ್ ಗಳನ್ನು ಪ್ರದರ್ಶಿಸುವ ಮೂಲಕ ತಮ್ಮ ದೈತ್ಯ ದೇಹವನ್ನು ವೇದಿಕೆಯಲ್ಲಿ ಪ್ರದರ್ಶಿಸಿ ನೆರೆದಿದ್ದ ಜನ್ರನ್ನು ರಂಜಿಸಿದರು.

ನಿಜಕ್ಕೂ ಇದೊಂದು ವಿಶೇಷ ಸ್ಪರ್ಧೆ ದಕ್ಷಿಣ ಭಾರತದ ರಾಜ್ಯಗಳಾದ ಮಹಾರಾಷ್ಟ್ರ, ಕೇರಳ, ತಮಿಳುನಾಡು ಸೇರಿದಂತೆ ಬಹುತೇಕ ಕಡೆಗಳಿಂದ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು.
Published On - 10:30 am, Tue, 12 March 24



















