- Kannada News Photo gallery Jaggesh's Prophecy Fulfilled: Gilli Actor Felicitated After Bigg Boss Win and Success
ಜಗ್ಗೇಶ್ ಹೇಳಿದ್ದನ್ನು ಸಾಬೀತು ಮಾಡಿ, ಅವರಿಂದಲೇ ಸನ್ಮಾನ ಮಾಡಿಸಿಕೊಂಡ ಗಿಲ್ಲಿ ನಟ
ಗಿಲ್ಲಿ ನಟನಿಗೆ ಎಲ್ಲರೂ ಕರೆದು ಸನ್ಮಾನ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಅವರ ಬಿಗ್ ಬಾಸ್ ಗೆಲುವು. ಈಗ ನಟ ಜಗ್ಗೇಶ್ ಅವರು ಗಿಲ್ಲಿ ನಟನ ಕರೆದು ಸನ್ಮಾನಿಸಿದ್ದಾರೆ. ಜಗ್ಗೇಶ್ ಹೇಳಿದ ಮಾತನ್ನು ಸಾಬೀತು ಮಾಡಿದ ಬಳಿಕವೇ ಗಿಲ್ಲಿ, ಅವರ ಎದುರು ಹೋಗಿ ನಿಂತಿದ್ದಾರೆ ಎಂಬುದು ಮತ್ತೊಂದು ವಿಶೇಷ. ಆ ಬಗ್ಗೆ ಇಲ್ಲಿದೆ ವಿವರ.
Updated on: Jan 28, 2026 | 12:00 PM

ಗಿಲ್ಲಿ ನಟ ಅವರು ಬಿಗ್ ಬಾಸ್ ವಿನ್ ಆಗಿದ್ದಾರೆ. ಸೀಸನ್ 12ರಲ್ಲಿ ಅವರು ಅತ್ಯಧಿಕ ವೋಟ್ಗಳ ಅಂತರದಿಂದ ಗೆಲುವು ಕಂಡರು. ಅವರನ್ನು ಅನೇಕ ರಾಜಕಾರಣಿಗಳು ಕರೆದು ಸನ್ಮಾನ ಮಾಡುತ್ತಿದ್ದಾರೆ. ಜಗ್ಗೇಶ್ ಕೂಡ ಇದಕ್ಕೆ ಹೊರತಾಗಿಲ್ಲ.

ಜಗ್ಗೇಶ್ ಅವರು ಗಿಲ್ಲಿ ನಟನ ಮನೆಗೆ ಕರೆದು ಸನ್ಮಾನ ಮಾಡಿದ್ದಾರೆ. ಶಾಲು ಹೊದಿಸಿ, ಹೂಗುಚ್ಛ ನೀಡಿದ್ದಾರೆ. ಮೇರು ಕಲಾವಿದ ಜಗ್ಗೇಶ್ ಅವರಿಂದ ಈ ಗೌರವ ಸಿಕ್ಕಿದ್ದು ಗಿಲ್ಲಿಗೆ ಖುಷಿ ಇದೆ. ಈ ಗೌರವ ಸ್ವೀಕರಿಸುವಾಗ ಜಗ್ಗೇಶ್ ಹೇಳಿದ ಮಾತನ್ನು ಸಾಬೀತು ಮಾಡಿದ್ದರು ಎಂಬುದು ವಿಶೇಷ.

ರಿಯಾಲಿಟಿ ಶೋ ಒಂದರಲ್ಲಿ ಗಿಲ್ಲಿ ಸ್ಪರ್ಧಿಸಿದ್ದರು. ಆ ಕಾರ್ಯಕ್ರಮಕ್ಕೆ ಜಡ್ಜ್ ಆಗಿದ್ದು ಜಗ್ಗೇಶ್. ‘ಈ ವ್ಯಕ್ತಿ ಇನ್ನೊಂದು ವರ್ಷದಲ್ಲಿ ನಾಲ್ಕು ಬಾಡಿಗಾರ್ಡ್ಗಳನ್ನು ಇಟ್ಟುಕೊಂಡು, ಚತ್ರಿ ಹಿಡಿಯೋಕೆ ಒಬ್ಬನ ಇಟ್ಟುಕೊಂಡು ಓಡಾಡ್ತಾನೆ’ ಎಂದು ಭವಿಷ್ಯ ನುಡಿದಿದ್ದರು.

ಆ ಭವಿಷ್ಯ ನಿಜವಾಗಿದೆ. ಗಿಲ್ಲಿ ಹೋದಲ್ಲಿ ಬಂದಲ್ಲಿ, ಬೌನ್ಸರ್ಗಳು, ಪೊಲೀಸರು ಸುತ್ತುವರಿಯುತ್ತಿದ್ದಾರೆ. ಗಿಲ್ಲಿಗೆ ಇಷ್ಟು ಜನಪ್ರಿಯತೆ ಸಿಗುತ್ತದೆ ಎಂದು ಅಂದೇ ಜಗ್ಗೇಶ್ ಊಹಿಸಿದ್ದರು. ಆ ಮಾತು ನಿಜವಾಗಿದೆ. ಈ ವಿಷಯದಲ್ಲಿ ಜಗ್ಗೇಶ್ಗೂ ಖುಷಿಯಾಗಿದೆ. ಜಗ್ಗೇಶ್ ಒಬ್ಬರನ್ನು ಎಷ್ಟು ಆಳವಾಗಿ ಅಧ್ಯಯನ ಮಾಡುತ್ತಾರೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ.

ಜಗ್ಗೇಶ್ ಅಂದು ಹೇಳಿದ ಮಾತಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಗಿಲ್ಲಿ, ‘ಜಗ್ಗೇಶ್ ಅವರ ಅನುಭವ ಎಷ್ಟು ಎಂಬುದು ಇದರಿಂದ ಗೊತ್ತಾಗುತ್ತದೆ’ ಎಂದಿದ್ದರು. ಯಾರು ಯಶಸ್ಸು ಕಾಣುತ್ತಾರೆ, ಕಾಣುವುದಿಲ್ಲ ಎಂಬುದನ್ನು ಕಣ್ಣಿನಿಂದ ಅಳೆದೇ ಹೇಳಿದ್ದಾರೆ.




