ನಡ್ಡಾ ರೋಡ್ ಶೋನಲ್ಲಿ ಜ್ಯೂನಿಯರ್ ಮೋದಿ ಹವಾ; ಇಲ್ಲಿವೆ ನೋಡಿ ಫೋಟೋಸ್
ದಾವಣಗೆರೆಯ ಮಾಯಕೊಂಡ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ ಜೆ.ಪಿ.ನಡ್ಡಾ ಬಿಜೆಪಿ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ಮಾಡಿದರು. ಈ ವೇಳೆ ನಡ್ಡಾ ರೋಡ್ ಶೋಗೂ ಮುನ್ನ ಜ್ಯೂನಿಯರ್ ಮೋದಿ ಸದಾನಂದ ನಾಯ್ಕ್ ಎಂಬುವವರು ರೋಡ್ ಶೋ ನಡೆಸಿದರು.
Updated on: Apr 30, 2023 | 12:58 PM
Share

ದಾವಣಗೆರೆಯ ಮಾಯಕೊಂಡ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ ಜೆ.ಪಿ.ನಡ್ಡಾ ಬಿಜೆಪಿ ಅಭ್ಯರ್ಥಿ ಬಸವರಾಜ್ ನಾಯ್ಕ್ ಪರ ಅಬ್ಬರದ ಪ್ರಚಾರ ನಡೆಸಿದರು.

ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಸವಪಟ್ಟಣದ ಸಂತೆ ಮೈದಾನದಿಂದ ರೋಡ್ ಶೋ ಆರಂಭಿಸಿದ ನಡ್ಡಾ ಮತಯಾಚನೆ ನಡೆಸಿದ್ದು, ಇದೇ ವೇಳೆ ಜ್ಯೂನಿಯರ್ ಮೋದಿ ನೋಡಿ ಜನರು ಶಾಕ್ ಆದರು.

ಹೌದು ನಡ್ಡಾ ರೋಡ್ ಶೋಗೂ ಮುನ್ನ ಜ್ಯೂನಿಯರ್ ಮೋದಿ ಸದಾನಂದ ನಾಯ್ಕ್ ಎಂಬುವವರು ರೋಡ್ ಶೋ ನಡೆಸಿದರು.

ಥೇಟ್ ಮೋದಿಯಂತೆ ಕಾಣುವ ಸದಾನಂದ ನಾಯ್ಕ್, ಇವ್ರನ್ನ ನೋಡಿದ ಜನ ಮೋದಿ ಜಿ, ಮೋದಿ ಜಿ ಎಂದು ಕೈ ಕುಲುಕಲು ಶುರು ಮಾಡಿದರು.

ಥೇಟ್ ಮೋದಿಯಂತೆ ಕಾಣುವ ಇವರು ಉಡುಪಿ ಸಮೀಪದ ಹಿರಿಯಡ್ಕ ನಿವಾಸಿ, ಜ್ಯೂನಿಯರ್ ಮೋದಿಯಾಗಿ ಬಿಜೆಪಿಯಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ.

ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾಗೆ ಸಂಸದ ಜಿ.ಎಂ.ಸಿದ್ದೇಶ್ವರ್ ಸಾಥ್ ನೀಡಿದರೆ, ಇತ್ತ ಜ್ಯೂನಿಯರ್ ಮೋದಿ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾದರು.
Related Photo Gallery
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!




