ಮಾಡೆಲ್ ಕೂಡ ಆಗಿರುವ ನಟಿ ಸಾರಾ ಅಣ್ಣಯ್ಯ ಅವರು ಕನ್ನಡ ಕಿರುತೆರೆ ಜಗತ್ತಿನಲ್ಲಿ ಸಖತ್ ಫೇಮಸ್. ‘ಕನ್ನಡತಿ’ ಧಾರಾವಾಹಿಯಲ್ಲಿ ಅವರು ನಿರ್ವಹಿಸುತ್ತಿರುವ ವರುಧಿನಿ ಹೆಸರಿನ ಪಾತ್ರ ಪ್ರಮುಖ ಎನಿಸಿಕೊಂಡಿದೆ. ಅವರ ಪಾತ್ರ ಅರ್ಧ ನೆಗೆಟಿವ್ ಹಾಗೂ ಅರ್ಧ ಪಾಸಿಟಿವ್ನಿಂದ ಕೂಡಿದೆ.
1 / 5
ವರುಧಿನಿ ಇವಳು ಕಥಾ ನಾಯಕಿ ಭುವಿಯ ಗೆಳತಿ. ತಾನು ಇಷ್ಟಪಡುತ್ತಿರುವ ಹರ್ಷನನ್ನೇ ಭುವಿ ಮದುವೆ ಆಗುತ್ತಿರುವ ಬಗ್ಗೆ ವರುಗೆ ಬೇಸರ ಇದೆ. ಮದುವೆಯನ್ನು ನಿಲ್ಲಿಸಲು ಆಕೆ ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾಳೆ.
2 / 5
ಸಾರಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್. ಸಾಕಷ್ಟು ಹಾಟ್ ಫೋಟೋಗಳ ಮೂಲಕ ಅವರು ಗಮನ ಸೆಳೆಯುತ್ತಾರೆ. ಇದರ ಮಧ್ಯೆ ಸಾಂಪ್ರದಾಯಿಕ ಉಡುಗೆ ಮೂಲಕವೂ ಅವರು ಮಿಂಚುತ್ತಾರೆ.
3 / 5
ಈಗ ಸಾರಾ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಲಕ್ಷಣವಾಗಿ ಸೀರೆ ಉಟ್ಟು ಅವರು ಎಲ್ಲರ ಗಮನ ಸೆಳೆದಿದ್ದಾರೆ.
4 / 5
ಅವರು ಹಂಚಿಕೊಂಡಿರುವ ಫೋಟೋಗಳು ಫ್ಯಾನ್ಸ್ಗೆ ಇಷ್ಟವಾಗಿದೆ. ಈ ಫೋಟೋಗೆ ಅವರು ಲೈಕ್ಸ್ ಒತ್ತುತ್ತಿದ್ದಾರೆ.