Updated on: Feb 18, 2023 | 5:14 PM
ಸಿಸಿಎಲ್ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಬೆಂಗಾಲ ಟೈಗರ್ಸ್ ಪಂದ್ಯ ಇಂದು ನಡೆದಿದೆ. ಇದರಲ್ಲಿ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಮಿಂಚಿದ್ದಾರೆ.
ಮಿಲನಾ ನಾಗರಾಜ್ ಅವರು ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ. ಡಾರ್ಲಿಂಗ್ ಕೃಷ್ಣ ಕೂಡ ಈ ಪಂದ್ಯದಲ್ಲಿ ಆಡುತ್ತಿದ್ದಾರೆ. ಅವರನ್ನು ಬೆಂಬಲಿಸಲು ಮಿಲನಾ ಬಂದಿದ್ದಾರೆ.
ಪ್ರದೀಪ್ ಬೋಗಾಡಿ ಅವರು ಕರ್ನಾಟಕದ ಪರ ಅರ್ಧ ಶತಕ ಬಾರಿಸಿದ್ದಾರೆ.
ನಿರೂಪ್ ಭಂಡಾರಿ ಅವರು ನಟನೆಯಿಂದ ಬ್ರೇಕ್ ತೆಗೆದುಕೊಂಡು ಗ್ರೌಂಡ್ನಲ್ಲಿ ಕಾಣಿಸಿಕೊಂಡರು. ಅವರು ಕರ್ನಾಟಕ ಪರ ಬೌಲಿಂಗ್ ಮಾಡಿದರು.
ಕಿಚ್ಚ ಸುದೀಪ್ ಅವರು ಕರ್ನಾಟಕ ಬುಲ್ಡೋಜರ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅವರು ಮೈದಾನದಲ್ಲಿ ಗಮನ ಸೆಳೆದರು.
ಜಿಶ್ಶು ಸೇನ್ಗುಪ್ತಾ ಅವರು ಬೆಂಗಾಲ್ ಟೈಗರ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಕರ್ನಾಟಕ ಬುಲ್ಡೋಜರ್ಸ್ ಪರ ಆಡುತ್ತಿದ್ದಾರೆ. ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಕರ್ನಾಟಕ ಬುಲ್ಡೋಜರ್ಸ್ ಪರ ಸಪ್ತಮಿ ಗೌಡ, ಶಾನ್ವಿ ಶ್ರೀವಾಸ್ತವ ಮೊದಲಾದವರು ಹಾಜರಿದ್ದರು. ಅವರು ತಂಡವನ್ನು ಚಿಯರ್ ಮಾಡಿದರು.
ವಿಕೆಟ್ ತೆಗೆದ ಖುಷಿಯಲ್ಲಿ ಚಂದನ್ ಕುಮಾರ್. ಕಿರುತೆರೆಯಲ್ಲಿ ಚಂದನ್ ಬ್ಯುಸಿ ಆಗಿದ್ದಾರೆ.