- Kannada News Photo gallery Karnataka CM Basavaraj Bommai in RRR pre release event in Chikkaballapura photos
ತೆಲುಗಿನ ‘RRR’ ಸಿನಿಮಾ ಪ್ರಚಾರದ ವೇದಿಕೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ; ಇಲ್ಲಿವೆ ಫೋಟೋಗಳು
ಚಿಕ್ಕಬಳ್ಳಾಪುರದ ಅಗಲಗುರ್ಕಿ ಗ್ರಾಮದಲ್ಲಿ ಅದ್ದೂರಿಯಾಗಿ ‘ಆರ್ಆರ್ಆರ್’ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಭಾಗಿ ಆಗಿದ್ದರು.
Updated on: Mar 20, 2022 | 8:02 AM

Karnataka CM Basavaraj Bommai in RRR pre-release event in Chikkaballapura photos

Karnataka CM Basavaraj Bommai in RRR pre-release event in Chikkaballapura photos

ಕಾರ್ಯಕ್ರಮದಲ್ಲಿ ತೆಲುಗು ನಟರಾದ ರಾಮ್ ಚರಣ್, ಜ್ಯೂ. ಎನ್ಟಿಆರ್ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಕುಶಲೋಪರಿ ವಿಚಾರಿಸಿದರು. ಅವರ ಆಗಮನದಿಂದಾಗಿ ‘ಆರ್ಆರ್ಆರ್’ ಪ್ರೀ-ರಿಲೀಸ್ ಇವೆಂಟ್ನ ಮೆರುಗು ಹೆಚ್ಚಿತು. ಲಕ್ಷಾಂತರ ಅಭಿಮಾನಿಗಳು ಇದರಲ್ಲಿ ಭಾಗಿಯಾಗಿದ್ದರು.

‘ಆರ್ಆರ್ಆರ್’ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ನಲ್ಲಿ ನಟ ಪುನೀತ್ ರಾಜ್ಕುಮಾರ್ ಅವರಿಗೆ ನಮನ ಸಲ್ಲಿಸಲಾಯಿತು. ‘ಅಪ್ಪುನನ್ನು ಹೇಗೆ ನಾನು ಮರೆಯಲು ಸಾಧ್ಯ? ಎಲ್ಲಿ ನೋಡಿದರೂ ನನಗೆ ಅಪ್ಪು ಕಾಣಿಸುತ್ತಾರೆ. ಪ್ರತಿಯೊಬ್ಬ ಕನ್ನಡಿಗರಲ್ಲಿ ಶಾಶ್ವತವಾದ ಸ್ಥಾನವನ್ನು ಪುನೀತ್ ಪಡೆದುಕೊಂಡಿದ್ದಾರೆ’ ಎಂದು ಬೊಮ್ಮಾಯಿ ಹೇಳಿದರು.

ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಲೇಸರ್ ಶೋ ಸಹ ಗಮನ ಸೆಳೆಯಿತು.




