Kartik Aaryan Birthday: ಈ ಸ್ಟಾರ್ ನಟನಿಗೆ ಪರ್ವತಗಳ ಮೇಲಿದೆ ಅತೀವ ಹುಚ್ಚು
ಕಾರ್ತಿಕ್ ಆರ್ಯನ್ ಅವರು ಯಾವುದೇ ಗಾಡ್ ಫಾದರ್ ಇಲ್ಲದೆ ಬಾಲಿವುಡ್ನಲ್ಲಿ ನೆಲೆ ಕಂಡುಕೊಂಡವರು. ಅವರಿಗೆ ಹಿಂದಿ ಚಿತ್ರರಂಗದಲ್ಲಿ ಯಾವುದೇ ಗಾಡ್ ಫಾದರ್ ಇಲ್ಲ. ಆದಾಗ್ಯೂ ದೊಡ್ಡ ಸ್ಟಾರ್ ಆಗಿ ಬೆಳೆದಿದ್ದಾರೆ.
Updated on: Nov 22, 2022 | 8:29 AM

ನಟ ಕಾರ್ತಿಕ್ ಆರ್ಯನ್ ಅವರು ಇಂದು (ನವೆಂಬರ್ 22) 32ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಸ್ಟಾರ್ ನಟನಿಗೆ ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್ ಬರ್ತ್ಡೇ ವಿಶ್ ಮಾಡುತ್ತಿದ್ದಾರೆ.

ಕಾರ್ತಿಕ್ ಆರ್ಯನ್ ಅವರು ಯಾವುದೇ ಗಾಡ್ ಫಾದರ್ ಇಲ್ಲದೆ ಬಾಲಿವುಡ್ನಲ್ಲಿ ನೆಲೆ ಕಂಡುಕೊಂಡವರು. ಅವರಿಗೆ ಹಿಂದಿ ಚಿತ್ರರಂಗದಲ್ಲಿ ಯಾವುದೇ ಗಾಡ್ ಫಾದರ್ ಇಲ್ಲ. ಆದಾಗ್ಯೂ ದೊಡ್ಡ ಸ್ಟಾರ್ ಆಗಿ ಬೆಳೆದಿದ್ದಾರೆ.

ಇತ್ತೀಚೆಗೆ ತೆರೆಗೆ ಬಂದ ‘ಭೂಲ್ ಭುಲಯ್ಯ 2’ ಚಿತ್ರ ಸೂಪರ್ ಹಿಟ್ ಆಯಿತು. ಈ ಕಾರಣಕ್ಕೆ ಅವರಿಗೆ ಈ ವರ್ಷ ಬರ್ತ್ಡೇ ಸಖತ್ ವಿಶೇಷ ಆಗಿದೆ.

ಕಾರ್ತಿಕ್ ಆರ್ಯನ್ ಅವರಿಗೆ ಪರ್ವತ ಎಂದರೆ ತುಂಬಾನೇ ಇಷ್ಟ. ಅವರು ಸಿನಿಮಾ ಕೆಲಸಗಳಿಂದ ಬ್ರೇಕ್ ಸಿಕ್ಕಾಗ ಪರ್ವತ ಏರಲು ಇಷ್ಪಡುತ್ತಾರೆ.

ಕಾರ್ತಿಕ್ ಆರ್ಯನ್ ಸಾಕಷ್ಟು ಟ್ರೆಕ್ಕಿಂಗ್ ಮಾಡುತ್ತಾರೆ. ಪರ್ವತಗಳನ್ನು ಏರಿ ಅವರು ಪೋಸ್ ನೀಡುತ್ತಾರೆ. ಪ್ರಕೃತಿಯನ್ನು ಅವರು ಸಾಕಷ್ಟು ಇಟ್ಟಪಡುತ್ತಾರೆ. ಇದಕ್ಕೆ ಸಾಕ್ಷ್ಯ ಎಂಬಂತೆ ಹಲವು ಫೋಟೋಗಳು ಇವೆ.

ಕಾರ್ತಿಕ್ ಆರ್ಯನ್ ಸದ್ಯ ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಸತ್ಯಪ್ರೇಮ್ ಕಿ ಕಥಾ’, ‘ಶೆಹ್ಜಾದಾ’ ಮೊದಲಾದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರು ಬಾಲಿವುಡ್ನ ಬ್ಯುಸಿ ಹೀರೋಗಳಲ್ಲಿ ಒಬ್ಬರಾಗಿದ್ದಾರೆ.



















