- Kannada News Photo gallery Kayan Tribe : Why do Kayan long neck women wear their rings? Kannada News
ಈ ಬುಡಕಟ್ಟಿನ ಮಹಿಳೆಯರ ಸೌಂದರ್ಯವೇ ಈ ಕುತ್ತಿಗೆ, ವಯಸ್ಸು ಆದಂತೆ ಹೆಚ್ಚಾಗುತ್ತೆ ಈ ಉಂಗುರಗಳ ಸಂಖ್ಯೆ
Kayan Tribe : ಪ್ರಪ್ರಪಂಚದಲ್ಲಿರುವ ಕೆಲವು ಜನರ ಆಚಾರ ವಿಚಾರ, ಸಂಪ್ರದಾಯಗಳನ್ನು ಕಂಡಾಗ ಅಚ್ಚರಿಯು ಆಗುತ್ತದೆ. ಅಂತಹ ಜನರಲ್ಲಿ ಮಯಾನ್ಮಾರ್ ದೇಶದ ಈ ಬುಡಕಟ್ಟಿನ ಜನರು ತನ್ನ ವಿಭಿನ್ನ ಆಚರಣೆಯ ಮೂಲಕ ಗಮನ ಸೆಳೆಯುತ್ತಾರೆ. ಮ್ಯಾನ್ಮಾರ್‌ನಲ್ಲಿರುವ ಈ ಕಾಯನ್ ಜನಾಂಗದ ಮಹಿಳೆಯ ಕುತ್ತಿಗೆಯೇ ಆಕರ್ಷಣೆಯಾಗಿದೆ. ಕುತ್ತಿಗೆಗೆ ಹಿತ್ತಾಳೆಯ ರಿಂಗ್ನ್ನು ಧರಿಸುವ ಈ ಆಚರಣೆಯ ಹಿಂದೆ ಕುತೂಹಲಕಾರಿ ಅಂಶಗಳು ಸೇರಿವೆ.
Updated on: Aug 20, 2024 | 4:08 PM

ಕಾಯನ್ ಬುಡಕಟ್ಟು ಜನಾಂಗದ ಮಹಿಳೆಯರ ವೇಷಭೂಷಣಗಳು ವಿಭಿನ್ನವಾಗಿದ್ದು ಆಕರ್ಷಕವಾಗಿದೆ. ಅದಲ್ಲದೇ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಕುತ್ತಿಗೆಗೆ ರಿಂಗ್ಗಳನ್ನು ಧರಿಸಿರುವುದೇ ಇವರ ಸೌಂದರ್ಯ ಗುಟ್ಟಾಗಿದೆ.

ಈ ಜನಾಂಗದ ಮಹಿಳೆಯರ ಕುತ್ತಿಗೆಯು ಜಿರಾಫೆಯಂತೆ ಉದ್ದವಾಗಿ ಬೆಳೆಯುತ್ತದೆ. ಈ ಕುತ್ತಿಗೆಯ ಅಂದವನ್ನು ಹೆಚ್ಚಿಸಲು ತಮ್ಮ ಕುತ್ತಿಗೆಗೆ ಹಿತ್ತಾಳೆಯ ರಿಂಗ್ನ್ನು ಧರಿಸುತ್ತಾರೆ. ಮಹಿಳೆಯರ ಕುತ್ತಿಗೆ ತೆಳ್ಳಗೆ ಮತ್ತು ಉದ್ದವಾಗಿದ್ದರೆ, ಅವರು ಹೆಚ್ಚು ಸುಂದರವಾಗಿ ಕಾಣುತ್ತಾರೆ ಎನ್ನುವುದು ಈ ಬುಡಕಟ್ಟು ಜನಾಂಗದ ನಂಬಿಕೆ.

ವಯಸ್ಸು ಹೆಚ್ಚಾದಂತೆ ಕುತ್ತಿಗೆಗೆ ಧರಿಸುವ ರಿಂಗ್ಗಳ ಸಂಖ್ಯೆಯು ಹೆಚ್ಚಾಗುತ್ತದೆ. 25 ರಿಂಗ್ಗಳನ್ನು ಧರಿಸುವ ಮಹಿಳೆಯರನ್ನು ಸುಂದರವೆಂದು ಪರಿಗಣಿಸಲಾಗುತ್ತದೆ. ಇಲ್ಲಿ 28 -29 ರಿಂಗ್ಗಳನ್ನು ಧರಿಸಿರುವ ಮಹಿಳೆಯರು ಇದ್ದಾರೆ.

ಆರು ವರ್ಷವಿರುವಾಗಲೇ ಕುತ್ತಿಗೆಗೆ ರಿಂಗ್ನ್ನು ಧರಿಸಲು ಪ್ರಾರಂಭಿಸುತ್ತಾರೆ. ಈ ಹಿತ್ತಾಳೆ ರಿಂಗ್ಗಳು ಸರಿಸುಮಾರು 20 ಕೆ.ಜಿ.ವರೆಗೂ ತೂಕವನ್ನು ಹೊಂದಿದೆ. ಬುಡಕಟ್ಟಿನ ಮಹಿಳೆಯರು ಈ ರಿಂಗ್ಗಳನ್ನು ಒಂದರ ಮೇಲೊಂದರಂತೆ ಒಂದು ಅಡಿ ಉದ್ದಕ್ಕೂ ತಮ್ಮ ಕುತ್ತಿಗೆಗೆ ಹಾಕಿಕೊಳ್ಳುತ್ತಾರೆ.

ಉದ್ದನೆಯ ಕುತ್ತಿಗೆಯನ್ನು ಹೊಂದಿರುವ ಮಹಿಳೆ ಕುರೂಪವಾಗಿ ಕಾಣುತ್ತಾಳೆ. ಹೀಗಾಗಿ ಬುಡಕಟ್ಟು ಜನಾಂಗದ ಜನರು ಅಪಹರಿಸುವುದಿಲ್ಲ ಎನ್ನುವ ನಂಬಿಕೆಯಿತ್ತು. ಹೀಗಾಗಿ ಕಯಾನ್ ಜನಾಂಗದ ಮಹಿಳೆಯರು ರಿಂಗ್ ಧರಿಸುವ ಮೂಲಕ ಕುತ್ತಿಗೆಯನ್ನು ಉದ್ದವಾಗಿಸುತ್ತಿದ್ದರು. ಆದರೆ ಇದೀಗ ಈ ಉಂಗುರಗಳು ಅಂದವನ್ನು ಹೆಚ್ಚಿಸುತ್ತದೆ ಎನ್ನುವಂತಾಗಿದೆ.




