- Kannada News Photo gallery Keerthy Suresh New Photoshoot in Saree after Sarkaru Vaari Pata Movie Hit
‘ಸರ್ಕಾರು ವಾರಿ ಪಾಟ’ ಗೆಲುವಿನ ಖುಷಿಯಲ್ಲಿ ಸೀರೆ ಉಟ್ಟು ಫೋಟೋ ಹಂಚಿಕೊಂಡ ಕೀರ್ತಿ ಸುರೇಶ್
‘ಮಹಾನಟಿ’ ಸಿನಿಮಾದಲ್ಲಿ ಕೀರ್ತಿ ಸುರೇಶ್ ಅದ್ಭುತ ನಟನೆ ತೋರಿದರು. ಅವರಿಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಯಿತು. ಆಫರ್ಗಳು ಕೂಡ ಅವರಿಗೆ ಸಾಕಷ್ಟು ಬಂದವು.
Updated on:May 30, 2022 | 3:57 PM

ನಟಿ ಕೀರ್ತಿ ಸುರೇಶ್ ಅವರಿಗೆ ಅನೇಕ ವರ್ಷಗಳ ನಂತರ ಗೆಲುವು ಸಿಕ್ಕಿದೆ. ಈ ಗೆಲುವನ್ನು ಅವರು ಸಂಭ್ರಮಿಸುತ್ತಿದ್ದಾರೆ. ಈ ಚಿತ್ರ 200 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ ಅನ್ನೋದು ವಿಶೇಷ.

‘ಮಹಾನಟಿ’ ಸಿನಿಮಾದಲ್ಲಿ ಕೀರ್ತಿ ಸುರೇಶ್ ಅದ್ಭುತ ನಟನೆ ತೋರಿದರು. ಅವರಿಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಯಿತು. ಆಫರ್ಗಳು ಕೂಡ ಅವರಿಗೆ ಸಾಕಷ್ಟು ಬಂದವು.

ಕೀರ್ತಿ ಸುರೇಶ್ ಅವರು ಸಿನಿಮಾ ಆಯ್ಕೆಯಲ್ಲಿ ಸಾಕಷ್ಟು ಎಡವಿದ್ದಾರೆ. ಅವರ ಸಿನಿಮಾಗಳು ನಿರಂತರವಾಗಿ ಸೋಲೋಕೆ ಆರಂಭವಾದವು. ಅವರ ‘ಪೆಂಗ್ವಿನ್’ ಸಿನಿಮಾ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಯಿತು. ಆ ಚಿತ್ರಕ್ಕೆ ಸೋಲಾಯಿತು.

ಕೀರ್ತಿ ಸುರೇಶ್ ಈಗ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಅಭಿಮಾನಿಗಳು ಈ ಫೋಟೋಗೆ ಲೈಕ್ಸ್ ಒತ್ತುತ್ತಿದ್ದಾರೆ.

ಕೀರ್ತಿ ಸುರೇಶ್ಗೆ ಈಗ ಆಫರ್ಗಳ ಸಂಖ್ಯೆ ಹೆಚ್ಚಿದೆ. ಇನ್ನು ಮುಂದೆಯಾದರೂ ಅವರು ಒಳ್ಳೆಯ ಸಿನಿಮಾ ಒಪ್ಪಿಕೊಳ್ಳುತ್ತಾರಾ ಎನ್ನುವುದನ್ನು ನೋಡಬೇಕಿದೆ.
Published On - 3:51 pm, Mon, 30 May 22



















