Updated on: Aug 29, 2023 | 11:51 PM
ಮಾಡರ್ನ್ ಉಡುಗೆಗಳಿಂದ ಸಾಧ್ಯವಾದಷ್ಟು ದೂರ ಇರುವ ಕೀರ್ತಿ, ಸರಳ ಉಡುಗೆಗಳನ್ನೂ ಸುಂದರವಾಗಿಯೇ ಕಾಣುತ್ತಾರೆ.
ಮಲಯಾಳಂ ಚೆಲುವೆ ಕೀರ್ತಿ ಸುರೇಶ್ ಈಗ ಪ್ಯಾನ್ ಇಂಡಿಯಾ ನಟಿ. ಬಾಲಿವುಡ್ಗೂ ಶೀಘ್ರವೇ ಕಾಲಿಡಲಿದ್ದಾರೆ.
ಬಾಲನಟಿಯಾಗಿ ಅಭಿನಯಕ್ಕೆ ಪರಿಚಯವಾದ ಕೀರ್ತಿ ಸುರೇಶ್, ಈಗ ನ್ಯಾಷನಲ್ ಅವಾರ್ಡ್ ಗೆದ್ದಿರುವ ನಟಿ.
'ಮಹಾನಟಿ' ಸಿನಿಮಾದಲ್ಲಿನ ಅದ್ಭುತ ನಟನೆಗೆ ಕೀರ್ತಿ ಸುರೇಶ್ಗೆ ನ್ಯಾಷನಲ್ ಅವಾರ್ಡ್ ಧಕ್ಕಿದೆ.
ಮರ ಸುತ್ತುವ ಪಾತ್ರಗಳಿಂದ ದೂರವೇ ಇರುವ ಕೀರ್ತಿ, ಅಭಿನಯಕ್ಕೆ ಸವಾಲೆಸೆವ ಪಾತ್ರಗಳ ಆಯ್ಕೆಗೆ ಒತ್ತು ನೀಡುತ್ತಾರೆ.
ಆದರೆ ಕೀರ್ತಿ ಇತ್ತೀಚೆಗೆ ನಟಿಸಿರುವ ತೆಲುಗಿನ 'ಭೋಲಾ ಶಂಕರ್' ಸಿನಿಮಾ ಧಾರುಣವಾಗಿ ಫ್ಲಾಪ್ ಆಗಿದೆ.
ಕೀರ್ತಿ ಸುರೇಶ್ ಕೈಯಲ್ಲಿ ಪ್ರಸ್ತುತ ಆರು ಸಿನಿಮಾಗಳಿವೆ, ಶೀಘ್ರವೇ ಬಾಲಿವುಡ್ ಸಿನಿಮಾದಲ್ಲಿಯೂ ಕೀರ್ತಿ ನಟಿಸಲಿದ್ದಾರೆ.