Updated on: Apr 25, 2023 | 8:45 AM
ನಟಿ ಪೂಜಾ ಹೆಗ್ಡೆ ಅವರು ಮಂಗಳೂರು ಮೂಲದವರು. ಈಗ ಟಾಲಿವುಡ್ ಹಾಗೂ ಬಾಲಿವುಡ್ನಲ್ಲಿ ಬ್ಯುಸಿ ಇದ್ದಾರೆ. ಹೈದಾರಾಬಾದ್ ಮೊದಲಾದ ಕಡೆ ಮನೆ ಹೊಂದಿದ್ದಾರೆ. ಅವರು ಮಂಗಳೂರನ್ನು ಮರೆತಿಲ್ಲ.
ಸಮಯ ಸಿಕ್ಕಾಗ ಪೂಜಾ ಹೆಗ್ಡೆ ಅವರು ಮಂಗಳೂರಿಗೆ ಬರುತ್ತಾರೆ. ಅಲ್ಲಿ ಸಮಯ ಕಳೆದು ಹೋಗುತ್ತಾರೆ. ಇತ್ತೀಚೆಗೆ ಅವರು ಮಂಗಳೂರಿಗೆ ಭೇಟಿ ನೀಡಿದ್ದಾರೆ.
ಪೂಜಾ ಹೆಗ್ಡೆ ನಟನೆಯ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ರಿಲೀಸ್ ಆಗಿದೆ. ಈಗ ಪೂಜಾ ಹೆಗ್ಡೆ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ಹೀಗಾಗಿ, ಅವರು ಮಂಗಳೂರಿಗೆ ಬಂದಿದ್ದಾರೆ.
ಮಂಗಳೂರಿನಲ್ಲಿ ಕಾಡು ಬೆಟ್ಟ ತಿರುಗಿದ್ದಾರೆ. ಹೆಬ್ಬಲಸು (ಹಲಸಿನ ರೀತಿಯಲ್ಲೇ ಇರುವ ಹಣ್ಣು) ಕಿತ್ತು ತಂದು ತಿಂದಿದ್ದಾರೆ. ನಾಯಿ ಜೊತೆ ಆಟ ಆಡಿದ್ದಾರೆ.
ಪೂಜಾ ಹೆಗ್ಡೆ ಸಾಲು ಸಾಲು ಫ್ಲಾಪ್ ನೀಡಿದ್ದಾರೆ. ಈಗ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಮೂಲಕ ಸಾಧಾರಣ ಗೆಲುವು ಕಂಡಿದ್ದಾರೆ. ಮಹೇಶ್ ಬಾಬು ಮುಂದಿನ ಚಿತ್ರಕ್ಕೆ ಅವರು ನಾಯಕಿ.