- Kannada News Photo gallery KL Rahul and Athiya Shetty make red carpet debut here is other Bollywood cricket couple images
ರೆಡ್ ಕಾರ್ಪೆಟ್ನಲ್ಲಿ ಒಟ್ಟಾಗಿ ಹೆಜ್ಜೆಹಾಕಿದ ರಾಹುಲ್- ಆಥಿಯಾ; ಈ ಹಿಂದಿನ ಬಾಲಿವುಡ್- ಕ್ರಿಕೆಟ್ ತಾರಾ ಜೋಡಿಗಳ ಚಿತ್ರಗಳು ಇಲ್ಲಿವೆ
KL Rahul | Athiya Shetty: ಭಾರತ ತಂಡದ ಕ್ರಿಕೆಟ್ ತಾರೆ ಕೆ.ಎಲ್ ರಾಹುಲ್ ಹಾಗೂ ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಜೊತೆಯಾಗಿ ರೆಡ್ ಕಾರ್ಪೆಟ್ನಲ್ಲಿ ಹೆಜ್ಜೆಹಾಕಿದ್ದಾರೆ. ಬಾಲಿವುಡ್ ಹಾಗೂ ಕ್ರಿಕೆಟ್ ತಾರೆಯರ ಸಂಬಂಧ ಇದೇ ಮೊದಲೇನಲ್ಲ. ಈ ಹಿನ್ನೆಲೆಯಲ್ಲಿ ಖ್ಯಾತ ಬಾಲಿವುಡ್-ಕ್ರಿಕೆಟ್ ಜೋಡಿಗಳ ಚಿತ್ರಗಳು ಇಲ್ಲಿವೆ.
Updated on:Dec 02, 2021 | 1:11 PM

ಇತ್ತೀಚೆಗೆ ಕೆ.ಎಲ್ ರಾಹುಲ್ ಹಾಗೂ ಆಥಿಯಾ ಶೆಟ್ಟಿ ರೆಡ್ ಕಾರ್ಪೆಟ್ ಮೇಲೆ ಜೊತೆಯಾಗಿ ಹೆಜ್ಜೆ ಹಾಕಿದರು. ಈ ಹಿನ್ನೆಲೆಯಲ್ಲಿ ಎಲ್ಲರ ಗಮನ ಕ್ರಿಕೆಟ್- ಬಾಲಿವುಡ್ ತಾರಾ ಜೋಡಿಗಳ ಮೇಲೆ ಬಿದ್ದಿದೆ. ಅಂತಹ ಜೋಡಿಗಳ ಚಿತ್ರಗಳು ಇಲ್ಲಿವೆ.

ಆಥಿಯಾ ಶೆಟ್ಟಿ ಹಾಗೂ ಕೆ.ಎಲ್ ರಾಹುಲ್ ನಿನ್ನೆ (ಡಿ.01) ಮೊದಲ ಬಾರಿಗೆ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆಥಿಯಾ ಕುಟುಂಬದೊಂದಿಗೆ ರಾಹುಲ್ ಭರ್ಜರಿ ಪೋಸ್ ನೀಡಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗೆ ಓರ್ವ ಪುತ್ರಿಯಿದ್ದಾಳೆ.

ಹರ್ಭಜನ್ ಸಿಂಗ್ ಹಾಗೂ ಗೀತಾ ಬಾಸ್ರಾ ಪ್ರೀತಿಸಿ ಮದುವೆಯಾದವರು. ಈ ತಾರಾ ಜೋಡಿಗೆ ಓರ್ವ ಪುತ್ರ ಹಾಗೂ ಪುತ್ರಿ ಇದ್ದಾರೆ.

ಭಾರತ ತಂಡದ ಮಾಜಿ ವೇಗಿ ಜಹೀರ್ ಖಾನ್ ತಮ್ಮ ಗೆಳತಿ ಸಾಗರಿಕಾ ಘಾಟ್ಕೆ ಅವರನ್ನು 2017ರಲ್ಲಿ ವಿವಾಹವಾಗಿದ್ದಾರೆ.

ಮನ್ಸೂರ್ ಅಲಿ ಖಾನ್ ಪಟೌಡಿ ಶರ್ಮಿಲಾ ಟಾಗೋರ್ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಓರ್ವ ಪುತ್ರ (ಸೈಫ್ ಅಲಿ ಖಾನ್) ಹಾಗೂ ಇಬ್ಬರು ಪುತ್ರಿಯರಿದ್ದಾರೆ.

ಮೊಹಮ್ಮದ್ ಅಜರುದ್ದೀನ್ ಹಾಗೂ ಸಂಗೀತಾ ಬಿಜಲಾನಿ 2010ರ ತನಕ ಜೊತೆಯಾಗಿದ್ದರು. ನಂತರ ಈ ಜೋಡಿ ಬೇರ್ಪಟ್ಟಿತು.

ಪಾಕಿಸ್ತಾನಿ ಕ್ರಿಕೆಟಿಗ ಮೊಹ್ಸಿನ್ ಖಾನ್ ರೀನಾ ರಾಯ್ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಓರ್ವ ಪುತ್ರಿಯಿದ್ದಾರೆ.

ಹಾರ್ದಿಕ್ ಪಾಂಡ್ಯ ತಮ್ಮ ಗೆಳತಿ ನತಾಶಾ ಸ್ಟಾನ್ಕೋವಿಕ್ ಅವರನ್ನು ವರಿಸಿದ್ದಾರೆ. ದಂಪತಿಗೆ ಓರ್ವ ಪುತ್ರನಿದ್ದಾನೆ.

ಬ್ರಿಟಿಷ್ ಮೂಲದ ನಟಿ ಹಜೆಲ್ ಕೀಚ್ ಅವರನ್ನು ಯುವರಾಜ್ ಸಿಂಗ್ 2016ರಲ್ಲಿ ವಿವಾಹವಾಗಿದ್ದಾರೆ.
Published On - 1:09 pm, Thu, 2 December 21




