ಹೌದು... ಮಠದ ಜಾತ್ರೆಗೆ ಬರುವ ಭಕ್ತರಿಗೆ ಮಠದ ಕಡೆಯಿಂದ ಮಹಾದಾಸೋಹದ ವ್ಯವಸ್ಥೆಯನ್ನು ಮಾಡಲಾಗಿದೆ. ದಾಸೋಹ ಅಂದರೆ ಕೇವಲ ಅನ್ನ, ಸಾರು, ಸಿಹಿ ತಿನಿಸುಗಳು, ರೊಟ್ಟಿ, ಕಾಳು ಪಲ್ಲೆ, ಹಿಂಡಿ ಸೇರಿದಂತೆ ಭೂರಿ ಬೋಜನವನ್ನು ಗವಿಮಠದ ಜಾತ್ರೆಯಲ್ಲಿ ನೀಡಲಾಗುತ್ತದೆ. ಇಂದಿನ ಮಹಾದಾಸೋಹದಲ್ಲಿ ಮಿರ್ಚಿ ದಾಸೋಹ ನಡೆಸಲಾಯಿತು. ಊಟಕ್ಕೆ ಬರುವ ಭಕ್ತರಿಗೆ ಕೇಳಿದಷ್ಟು ಇಂದು ಮಿರ್ಚಿ ಬಜ್ಜಿಯನ್ನು ನೀಡಲಾಯಿತು. ಸ್ವತಃ ಗವಿಮಠದ ಸ್ವಾಮೀಜಿ, ಮಿರ್ಚಿ ಬಜ್ಜೆ ಹಾಕಿದ್ದು ವಿಶೇಷವಾಗಿತ್ತು.