- Kannada News Photo gallery Krishna Janmashtami 2022: Do you know how Janmashtami was celebrated across India? Here it is
Krishna Janmashtami 2022: ಭಾರತದಾದ್ಯಂತ ಜನ್ಮಾಷ್ಟಮಿ ಆಚರಣೆ ಹೇಗಿತ್ತು ಗೊತ್ತಾ? ಇಲ್ಲಿದೆ ನೋಡಿ
ಆಗಸ್ಟ್ 18 ಮತ್ತು 19ರಂದು ಭಾರತದಾದ್ಯಂತ ಕೃಷ್ಣ ಜನ್ಮಾಷ್ಟಮಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಸಿದ್ಧತೆಗಳು ಭರದಿಂದ ಸಾಗುತ್ತಿವೆ ಮತ್ತು ಭಗವಾನ್ ಕೃಷ್ಣನ ಜನ್ಮ ವಾರ್ಷಿಕೋತ್ಸವಕ್ಕಾಗಿ ದೇವಾಲಯಗಳನ್ನು ಅಲಂಕರಿಸಲಾಗಿದೆ.
Updated on:Aug 19, 2022 | 10:12 AM

krishna janmashtami 2022

krishna janmashtami 2022

ಜನ್ಮಾಷ್ಟಮಿ ಆಚರಣೆಯಲ್ಲಿ ವಿದ್ಯಾರ್ಥಿಗಳು: ಬುಧವಾರ ಮುಂಬೈನ ಶ್ರೀಮತಿ ನಾತಿಬಾಯಿ ದಾಮೋದರ್ ಠಾಕರ್ಸೆ (SNDT) ಮಹಿಳಾ ವಿಶ್ವವಿದ್ಯಾಲಯದಲ್ಲಿ ಜನ್ಮಾಷ್ಟಮಿ ಆಚರಣೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದರು.

ಪಟಿಯಾಲದಲ್ಲಿರುವ ರಾಧಾ ಕೃಷ್ಣ ದೇವಾಲಯ: ಬುಧವಾರ ಪಟಿಯಾಲಾದ ಮಾಡೆಲ್ ಟೌನ್‌ನಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಮುನ್ನ ರಾಧಾ ಕೃಷ್ಣ ದೇವಾಲಯದ ಪ್ರಕಾಶಮಾನ ನೋಟ.

ಮಕ್ಕಳು ಕೃಷ್ಣನ ವೇಷ: ಆಗಸ್ಟ್ 18 (ಗುರುವಾರ) ಭುವನೇಶ್ವರದಲ್ಲಿ ಜನ್ಮಾಷ್ಟಮಿಯ ಹಬ್ಬಕ್ಕೆ ಮುನ್ನ ನಡೆಯುವ ಕೃಷ್ಣ ವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು.

ಶ್ರೀಕೃಷ್ಣನ ವಿಗ್ರಹ: ಬುಧವಾರ ಬೆಂಗಳೂರಿನಲ್ಲಿ ಕೃಷ್ಣ ಜನ್ಮಾಷ್ಟಮಿ ಹಬ್ಬದ ಮೊದಲು ಮಾರಾಟ ಮಾಡಲು ಬೀದಿ ವ್ಯಾಪಾರಿಯೊಬ್ಬರು ಕೃಷ್ಣನ ವಿಗ್ರಹಕ್ಕೆ ಬಣ್ಣ ಬಳಿಯುತ್ತಿರುವ ದೃಶ್ಯ

ಪುಟ್ಟ ಮಕ್ಕಳಿಂದ ಶ್ರೀಕೃಷ್ಣನ ವೇಷ: ಬುಧವಾರ ಪಾಟ್ನಾದಲ್ಲಿ ಜನ್ಮಾಷ್ಟಮಿ ಹಬ್ಬದ ಮುನ್ನ ಶಾಲೆಯೊಂದರಲ್ಲಿ ಕೃಷ್ಣನ ವೇಷ ಧರಿಸಿದ ತರಗತಿಗೆ ಬಂದ ವಿದ್ಯಾರ್ಥಿಗಳು.

ದಹಿ ಹಂಡಿ: ಆಗಸ್ಟ್ 17ರಂದು ಮುಂಬೈನಲ್ಲಿರುವ ಶ್ರೀಮತಿ ನಾತಿಬಾಯಿ ದಾಮೋದರ್ ಠಾಕರ್ಸೆ (SNDT) ಕಾಲೇಜಿನಲ್ಲಿ ಜನ್ಮಾಷ್ಟಮಿ ಆಚರಣೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ದಹಿ ಹಂಡಿಯನ್ನು ಒಡೆಯಲು ಮಾನವ ಪಿರಮಿಡ್ ಅನ್ನು ರಚಿಸಿದ್ದಾರೆ.
Published On - 10:10 am, Fri, 19 August 22




