Krithi Shetty: ನೆರಳು-ಬೆಳಕಿನ ಆಟದಲ್ಲಿ ಹೊಳೆದ ಕೃತಿಯ ಕೆಂಪು ತುಟಿರಂಗು
Krithi Shetty: ನಟಿ ಕೃತಿ ಶೆಟ್ಟಿ ತಮ್ಮ ಹೊಸ ಚಿತ್ರಗಳನ್ನು ಹಂಚಿಕೊಂಡಿದ್ದಾರೆ, ತುಟಿಗೆ ಕೆಂಪು ಬಣ್ಣ ಹಚ್ಚಿ ಜೀವನವನ್ನು ತುಸು ಬದುಕಿಬಿಡು ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ.
Updated on: Aug 06, 2023 | 11:06 PM

ಕರ್ನಾಟಕ ಮೂಲದ ನಟಿ ಕೃತಿ ಶೆಟ್ಟಿ ತಮ್ಮ ಹೊಸ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಫೋಟೊಶೂಟ್ ಕ್ರೇಜ್ ತುಸು ಹೆಚ್ಚೇ ಉಳ್ಳ ಕೃತಿ, ತಮ್ಮ ಲುಕ್ ಜೊತೆಗೆ ಪ್ರಯೋಗಗಳನ್ನು ಮಾಡಿ ಅದರ ಚಿತ್ರಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

ಕೆಂಪು ಲಿಪ್ಸ್ಟಿಕ್ ತೊಟ್ಟು, ಕಪ್ಪು ಹೊಳೆಯ ಬಟ್ಟೆ ತೊಟ್ಟು ಹಾಲಿವುಡ್ ಬ್ಲಾಕ್ ಆಂಡ್ ವೈಟ್ ಹೀರೋಯಿನ್ಗಳ ಲುಕ್ ರಿಕ್ರಿಯೇಟ್ ಮಾಡಿದಂತೆ ಕಾಣುತ್ತಿದ್ದಾರೆ ಕೃತಿ.

'ತುಸು ಕೆಂಪು ಲಿಪ್ಸ್ಟಿಕ್ ಹಚ್ಚಿಕೊ, ಜೀವನವನ್ನು ಜೀವಿಸು' ಎಂಬ ಅಡಿಬರಹವನ್ನು ತಮ್ಮ ಫೋಟೊಗಳ ಗುಚ್ಛಕ್ಕೆ ನೀಡಿದ್ದಾರೆ ಕೃತಿ ಶೆಟ್ಟಿ.

ಕೃತಿ ಶೆಟ್ಟಿ ಮಂಗಳೂರು ಮೂಲದವರು, ಆದರೆ ಬೆಳೆದಿದ್ದು, ಕಲಿತಿದ್ದು ಎಲ್ಲವೂ ಮುಂಬೈನಲ್ಲಿಯೇ.

ಬಾಲನಟಿಯಾಗಿ ಕೆಲವು ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಕೃತಿ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದು 'ಉಪ್ಪೆನ' ಹೆಸರಿನ ತೆಲುಗು ಸಿನಿಮಾ ಮೂಲಕ.

ಕೃತಿ ಶೆಟ್ಟಿ ಈಗ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಬಹಳ ಬ್ಯುಸಿಯಾಗಿದ್ದಾರೆ.

ಕರ್ನಾಟಕ ಮೂಲದ ಕೃತಿ ಶೆಟ್ಟಿ ಆದಷ್ಟು ಬೇಗ ಕನ್ನಡ ಸಿನಿಮಾಗಳಲ್ಲಿಯೂ ನಟಿಸಲಿ ಎಂಬುದು ಅಭಿಮಾನಿಗಳ ಆಸೆ.




