KSRTC: ತಿಂಗಳಾಂತ್ಯಕ್ಕೆ ರಸ್ತೆಗೆ ಇಳಿಯಲಿವೆ ಐರಾವತ ಕ್ಲಬ್ ಕ್ಲಾಸ್ 2.0 ಬಸ್​ಗಳು​​

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಐರಾವತ ಕ್ಲಬ್ ಕ್ಲಾಸ್ 2.0 ನೂತನ ವೋಲ್ವೋ (9600 ಮಾದರಿ)ಯ ಹೊಸ 20 ಬಸ್ಸುಗಳು ಈ ತಿಂಗಳ ಕೊನೆಯ ವಾರದಲ್ಲಿ ನಿಗಮಕ್ಕೆ ಸೇರ್ಪಡೆಗೊಳ್ಳಲಿವೆ. ಒಂದು ಬಸ್ಸಿನ ದರ ರೂ.1.78 ಕೋಟಿ ರೂಪಾಯಿ ಆಗಿದೆ.

Kiran Surya
| Updated By: ವಿವೇಕ ಬಿರಾದಾರ

Updated on:Oct 08, 2024 | 7:47 AM

KSRTC Set to launch Airavata Club Class 2.0 buses

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)ವು ವಿವಿಧ ಮಾದರಿಯ ಅತ್ಯಾಧುನಿಕ ಬಸ್ಸುಗಳನ್ನು ಪ್ರಯಾಣಿಕರ ಬೇಡಿಕೆಗನುಣವಾಗಿ ರಸ್ತೆಗೆ ಇಳಿಸುವುದರಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಕೆಎಸ್​ಆರ್​​ಟಿಸಿ ಬಸ್​ಗಳು ದೇಶದಲ್ಲೇ ಅತ್ಯಂತ ಆಕರ್ಷಣೀಯ ಬಸ್​​ಗಳಾಗಿವೆ.

1 / 5
KSRTC Set to launch Airavata Club Class 2.0 buses

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)ಕ್ಕೆ ಐರಾವತ ಕ್ಲಬ್ ಕ್ಲಾಸ್ 2.0 ನೂತನ ವೋಲ್ವೋ (9600 ಮಾದರಿ)ಯ ಹೊಸ 20 ಬಸ್ಸುಗಳು ಈ ತಿಂಗಳ ಕೊನೆಯ ವಾರದಲ್ಲಿ ಸೇರ್ಪಡೆಗೊಳ್ಳಲಿವೆ. ಒಂದು ಬಸ್ಸಿನ ದರ ರೂ.1.78 ಕೋಟಿ ರೂಪಾಯಿ ಆಗಿದೆ.

2 / 5
KSRTC Set to launch Airavata Club Class 2.0 buses

ಕೆಎಸ್​ಆರ್​ಟಿಸಿ ನಿಗಮದಲ್ಲಿ ಒಟ್ಟು 443 ಐಷಾರಾಮಿ ಬಸ್ಸುಗಳಿದ್ದು, ನೂತನವಾಗಿ ಸೇರ್ಪಡೆಗೊಳ್ಳುತ್ತಿರುವ ಬಸ್​ಗಳು ಹೆಚ್ಚು ವಿಶೇಷತೆ ಹೊಂದಿವೆ. ಈ ಬಸ್ಸಿನಲ್ಲಿ ಶಕ್ತಿಶಾಲಿ ಹ್ಯಾಲೊಜೆನ್ ಹೆಡ್‌ಲೈಟ್‌ಗಳು ಮತ್ತು ಡೇ ರನ್ನಿಂಗ್ ಲೈಟ್‌ಗಳೊಂದಿಗೆ (DRL) ಹೊಸ‌ ಪ್ಲಶ್ ಇಂಟೀರಿಯರ್ಸ್ ಮತ್ತು ಬಾಹ್ಯ ಸ್ಕ್ಯಾಂಡಿನೇವಿಯನ್ ವಿನ್ಯಾಸ ಹೊಂದಿದೆ.

3 / 5
KSRTC Set to launch Airavata Club Class 2.0 buses

ಏರೋಡೈನಾಮಿಕ್ ವಿನ್ಯಾಸದಿಂದ ಉತ್ತಮ ಇಂಧನ ದಕ್ಷತೆ ಹೊಂದಿದೆ. ಉಳಿದ ಬಸ್​​ಗಳಿಗಿಂತ ಈ ಹೊಸ ಬಸ್ಸಿನ ಉದ್ದ ಶೇ3.5 ರಷ್ಟು ಮತ್ತು ಎತ್ತರದಲ್ಲಿ ಶೇ5.6 ಹೆಚ್ಚಳ ಇರುವುದರಿಂದ ಸೀಟ್​ಗಳ ನಡುವಿನ ಅಂತರ ಮತ್ತು ಹೆಚ್ಚಿನ ಹೆಡ್‌ ರೂಂ ಇರುತ್ತದೆ. ಜೊತೆಗೆ USB+ C ಟೈಪ್ ನಂತಹ ಹೊಸ ಜನರೇಷನ್ ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಉತ್ತಮ ಎಸಿ, ಫೈರ್ ಅಲಾರ್ಮ್, ಮತ್ತು ಪ್ರೊಟೆಕ್ಷನ್ ಸಿಸ್ಟಮ್ ಅಳವಡಿಸಲಾಗಿದೆ.

4 / 5
KSRTC Set to launch Airavata Club Class 2.0 buses

ಈ ನೂತನ ಬಸ್​ಗಳನ್ನು ಸಾರಿಗೆ ಸಚಿವ ರಾಮಲಿಂಗರೆಡ್ಡಿ,KSRTC ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಮೊಹಮ್ಮದ್ ರಿಜ್ವಾನ್ ನವಾಬ್, ಕೆಎಸ್​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ ಅವರು ಹೊಸಕೋಟೆ ಬಳಿ ಇರುವ ವೋಲ್ವೋ ಬಸ್ ತಯಾರಿಕಾ ಫ್ಯಾಕ್ಟರಿಗೆ ಭೇಟಿ ನೀಡಿ ಪರಿವೀಕ್ಷಿಸಿದರು.

5 / 5

Published On - 7:47 am, Tue, 8 October 24

Follow us