Lok Sabha Elections 2024: ಮದುವೆ ಸಂಭ್ರಮದ ನಡುವೆ ತಮ್ಮ ಹಕ್ಕನ್ನು ಚಲಾಯಿಸಿದ ನವ ಮಧು-ವರರು

ಮದುವೆ ಸಂಭ್ರಮದ ನಡುವೆ ತಮ್ಮ ಮತದಾನವನ್ನು ಮಾಡಿದ ನೂತನ ಮಧು-ವರರ ಫೋಟೋ ವೈರಲ್​ ಆಗಿದೆ. ಈ ಮೂಲಕ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ನೀಡಿದ್ದಾರೆ. ದೇಶದ ಬೇರೆ ಬೇರೆ ಕಡೆ ಮೊದಲ ಹಂತದ ಲೋಕಸಭೆ ಚುನಾವಣೆ ನಡೆಯತ್ತಿದೆ.

ಅಕ್ಷಯ್​ ಪಲ್ಲಮಜಲು​​
|

Updated on:Apr 19, 2024 | 12:24 PM

ಇಂದು ಲೋಕಸಭೆ ಚುನಾವಣೆ ಮೊದಲ ಹಂತ ಚುನಾವಣೆ ಪ್ರಾರಂಭವಾಗಿದೆ. ಈಗಾಗಲೇ  ಜನ ಮತಗಟ್ಟೆಯತ್ತ ಬಂದು ಮತದಾನ ಮಾಡುತ್ತಿದ್ದಾರೆ. ಇದರ ನಡುವೆ ಒಂದು ಆಸಕ್ತಿ ಹಾಗೂ ಮಾದರಿಯ ಘಟನೆಗಳು ಕೆಲವೊಂದು ರಾಜ್ಯಗಳಲ್ಲಿ ನಡೆದಿದೆ. ತಮ್ಮ ಹಕ್ಕುಗಳನ್ನು ನೂತನ ಮಧು-ವರರು ಮತಗಟ್ಟೆಗೆ ಬಂದು ಚಲಾಯಿಸಿದ್ದಾರೆ. ಮದುವೆ ಸಂಭ್ರಮದ ನಡುವೆಯು ತಮ್ಮ ಹಕ್ಕನ್ನು ಚಲಾಯಿಸಿರುವುದು ಎಲ್ಲರ ಗಮನ ಸೆಳೆದಿದೆ. ಇದು ಮಾದರಿ ಕೆಲಸ ಎಂದು ಅನೇಕ ಶ್ಲಾಘಿಸಿದ್ದಾರೆ.

1 / 6
ಉತ್ತರಾಖಂಡದ ಪೌರಿ ಗರ್ವಾಲ್‌ನಲ್ಲಿರುವ ಮತಗಟ್ಟೆಯಲ್ಲಿ ನವವಿವಾಹಿತ ದಂಪತಿಗಳು ಇಂದು ಸಾರ್ವತ್ರಿಕ ಚುನಾವಣೆಗೆ ಮತ ಚಲಾಯಿಸಿದರು.

2 / 6
ಜಮ್ಮು -ಕಾಶ್ಮೀರದ ಕಪಿಲ್ ಗುಪ್ತಾ ಅವರು ನೆನ್ನೆ (ಏ.18)ಮದುವೆಯಾಗಿದ್ದಾರೆ. ಆದರೆ ಇಂದು ತಮ್ಮ ಪತ್ನಿಯೊಂದಿಗೆ ಬಂದು ಮತದಾನ ಮಾಡಿದ್ದಾರೆ, ಇನ್ನೊಂದು ವಿಶೇಷವೆಂದರೆ ಅವರು ನೆನ್ನೆ ಹಾಕಿಕೊಂಡಿದ್ದ ಉಡುಗೆಯಲ್ಲೇ ಮತಗಟ್ಟೆಗೆ ಬಂದಿದ್ದಾರೆ.

3 / 6
ಮತ್ತೊಂದು ನವ ವಿವಾಹಿತ ದಂಪತಿಗಳಾದ ಸಾಹಿಲ್ ಮತ್ತು ರಾಧಿಕಾ ಉಧಮ್‌ಪುರದ ಶಾಲೆಯೊಂದರಲ್ಲಿ ಬಂದು ಮತದಾನ ಮಾಡಿದ್ದಾರೆ.

4 / 6
ದೋಡಾ ಜಿಲ್ಲೆಯ ಭದೇರ್ವಾಹ್ ನಿವಾಸಿ ವಂಶಿಕಾ ಶರ್ಮಾ ಎಂಬುವವರು ಕೂಡ ಇಂದು ಬಂದು ಮತದಾನ ಮಾಡಿದ್ದಾರೆ. ತಮ್ಮ ಹಕ್ಕನ್ನು ಚಲಾಯಿಸುವುದು ನಮ್ಮ ಕರ್ತವ್ಯ ಹಾಗೂ ಸುಭದ್ರ ಆಡಳಿತವನ್ನು ತರುವ ನಿಟ್ಟಿನಲ್ಲಿ ಮತದಾನ ಮಾಡಬೇಕು ಎಂದು ಹೇಳಿದ್ದಾರೆ.

5 / 6
ಅರುಣಾಚಲ ಪ್ರದೇಶ (2 ಸ್ಥಾನಗಳು), ಅಸ್ಸಾಂ (5 ಸ್ಥಾನಗಳು), ಬಿಹಾರ (4 ಸ್ಥಾನಗಳು), ಛತ್ತೀಸ್ಗಢ (1 ಸ್ಥಾನ), ಮಧ್ಯಪ್ರದೇಶ (6 ಸ್ಥಾನಗಳು) ಸೇರಿವೆ. ಮಹಾರಾಷ್ಟ್ರ (5 ಸ್ಥಾನಗಳು), ಮಣಿಪುರ (2 ಸ್ಥಾನಗಳು), ಮೇಘಾಲಯ (2), ಮಿಜೋರಾಂ (1 ಸ್ಥಾನ), ನಾಗಾಲ್ಯಾಂಡ್ (1 ಸ್ಥಾನ), ರಾಜಸ್ಥಾನ (12 ಸ್ಥಾನಗಳು), ಸಿಕ್ಕಿಂ (1 ಸ್ಥಾನ), ತಮಿಳುನಾಡು (39 ಸ್ಥಾನಗಳು), ತ್ರಿಪುರ ( 1 ಸ್ಥಾನ), ಉತ್ತರ ಪ್ರದೇಶ (8 ಸ್ಥಾನಗಳು), ಉತ್ತರಾಖಂಡ (5 ಸ್ಥಾನಗಳು), ಅಂಡಮಾನ್ ಮತ್ತು ನಿಕೋಬಾರ್ (1 ಸ್ಥಾನ), ಜಮ್ಮು ಮತ್ತು ಕಾಶ್ಮೀರ (1 ಸ್ಥಾನ), ಲಕ್ಷದ್ವೀಪ (1 ಸ್ಥಾನ) ಮತ್ತು ಪುದುಚೇರಿ (1 ಸ್ಥಾನ) ಕಡೆ ಮೊದಲ ಹಂತದ ಮತದದಾನ ನಡೆಯುತ್ತಿದೆ.

6 / 6

Published On - 12:18 pm, Fri, 19 April 24

Follow us