AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾಲಯ ಅಮಾವಾಸ್ಯೆ: ಮಾದಪ್ಪನ ದರ್ಶನಕ್ಕೆ ಹರಿದು ಬಂದ ಲಕ್ಷಾಂತರ ಭಕ್ತಗಣ!

ಇಂದು ಮಹಾಲಯ ಅಮಾವಾಸ್ಯೆ ಹಿನ್ನಲೆ ಮಾದಪ್ಪನ ಸನ್ನಿಧಾನಕ್ಕೆ ಲಕ್ಷಾಂತರ ಮಂದಿ ಭಕ್ತಗಣ ಆಗಮಿಸಿ ಮಾದಪ್ಪನ ಕೃಪೆಗೆ ಪಾತ್ರರಾದರು. ಜೊತೆಗೆ ಮಾದಪ್ಪನಿಗೆ ವಿಶೇಷ ಪೂಜಾ ಕೈಂಕರ್ಯ ಕೂಡ ನೆರವೇರಿಸಲಾಯ್ತು. ಅಮಾವಾಸ್ಯೆಯ ವಿಶೇಷ ಸಿದ್ದತೆ ಹೇಗಿತ್ತು ಅಂತೀರಾ? ಈ ಸ್ಟೋರಿ ಓದಿ.

ಕಿರಣ್ ಹನುಮಂತ್​ ಮಾದಾರ್
|

Updated on: Oct 02, 2024 | 9:46 PM

Share
ಕಣ್ಣಾಡಿಸಿದ ಕಡೆಯೆಲ್ಲಾ ಭಕ್ತರ ದಂಡು, ಎಲ್ಲಿ ನೋಡಿದರೂ ಉಘೇ ಮಾದಪ್ಫ ಎಂಬ ಝೇಂಕಾರ. ಸಾಲುಗಟ್ಟಿ ನಿಂತು ದರ್ಶನ ಪಡೆಯುತ್ತಿರುವ ಜನತೆ. ಈ ಎಲ್ಲಾ ದೃಶ್ಥ ಕಣ್ಣಿಗೆ ಬಿದ್ದಿದ್ದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ.

1 / 6
ಇಂದು ಮಹಾಲಯ ಅಮಾವಾಸ್ಯೆ ಹಿನ್ನಲೆ ಲಕ್ಷಾಂತರ ಮಂದಿ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ವಿಶೇಷ ಪೂಜಾ ಕೈಂಕರ್ಯದಲ್ಲಿ ಭಾಗಿಯಾದರು. ಇನ್ನು ಅಮಾವಾಸ್ಯೆ ದಿನದಂದು ಮಾದಪ್ಫನ ದರ್ಶನ ಪಡೆದು ಬೇಡಿಕೊಂಡರೆ ಅಂದುಕೊಂಡ ಕೆಲಸಗಳು ನೆರವೇರಲಿದೆ ಎಂಬ ಪ್ರತೀತಿಯಿದೆ. ಈ ಹಿನ್ನಲೆ ಇಂದು ವಿಶೇಷವಾಗಿ ಮಾದಪ್ಪನ ದರ್ಶನ ಪಡೆದು ಭಕ್ತರು ಪುನೀತರಾದರು.

2 / 6
ಇಂದು ಮಹಾಲಯ ಅಮಾವಾಸ್ಯೆ ಹಿನ್ನಲೆ ಮಲೆ ಮಹದೇಶ್ವರ ಪ್ರಾಧಿಕಾರ ವಿಶೇಷವಾಗಿ 2 ಲಕ್ಷ ಲಾಡುಗಳನ್ನ ತಯಾರಿಸಿಲಾಗಿತ್ತು. ಜೊತೆಗೆ ಎರೆಡುವರೆ ಲಕ್ಷದಷ್ಟು ಜನರಿಗೆ ಉಚಿತ ಅನ್ನದಾಸೋಹ ಮಾಡಲಾಯ್ತು.

3 / 6
ಇಂದು ಮುಂಜಾನೆ ನಾಲ್ಕು ಗಂಟೆಯಿಂದಲೇ ಮಾದಪ್ಪನಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಯ್ತು, ಇನ್ನು ಭಕ್ತರಿಗೆ ಅನುಕೂಲವಾಗಲು ಮೈಸೂರು, ಬೆಂಗಳೂರು ಹಾಗೂ ಚಾಮರಾಜನಗರದಿಂದ ಹೆಚ್ಚುವರಿ ಬಸ್​ಗಳ ವ್ಯವಸ್ಥೆಯನ್ನ ಸಾರಿಗೆ ಇಲಾಖೆ ಮಾಡಿತ್ತು.

4 / 6
ಮಹಾಲಯ ಅಮಾವಾಸ್ಯೆ ಹಿನ್ನಲೆ ಇಂದು ಮಾದಪ್ಪನ ಬಳಿ ತಮ್ಮ ಹರಕೆ ಕಟ್ಟಿಕೊಂಡರೆ, ಬೇಡಿಕೊಂಡ ಇಷ್ಟಾರ್ಥ ಸಿದ್ದಿಸುತ್ತೆ ಎಂಬ ವಾಡಿಕೆಯಿದೆ. ಇದರಿಂದಾಗಿ ಇಂದು ಭಕ್ತರ ದಂಡು ಬೆಟ್ಟಕ್ಕೆ ಆಗಮಿಸಿ ಪುನೀತರಾದರು.

5 / 6
ಇನ್ನು ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿ ಹಿನ್ನಲೆ ಈ ಬಾರಿ ಮಹಿಳಾ ಭಕ್ತಾಧಿಗಳ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದ್ದು, ಸಾರಿಗೆ ಬಸ್​ನಲ್ಲಿಯೂ ಮಹಿಳಾ ಮಣಿಗಳಿಂದ ತುಂಬಿ ತುಳುಕುತ್ತಿದ್ದರು.

6 / 6
ಕೋರ್ಟ್ ತೀರ್ಪಿನ ಬಳಿಕ ಖಡಕ್ ನಿರ್ಧಾರ ತೆಗೆದುಕೊಂಡ ಯಶ್ ತಾಯಿ ಪುಷ್ಪಾ

ರಾಜಸ್ಥಾನದ ಕೆಮಿಕಲ್ ಫ್ಯಾಕ್ಟರಿಯಲ್ಲಿ ನಡೆದ ಸ್ಫೋಟದ ಹೊಸ ವಿಡಿಯೋ ವೈರಲ್

ದಾರಿ ಬಿಡುವ ವಿಚಾರಕ್ಕೆ ಬಸ್- ಆಟೋ ಚಾಲಕ ಹೊಡೆದಾಟ, ವಿಡಿಯೋ ನೋಡಿ

ಬಾಲ್ಕನಿಯಲ್ಲಿ ಬಟ್ಟೆ ಒಣಗಿಸುವಾಗ ಕಾಲು ಜಾರಿ ಕೆಳಗೆ ಬಿದ್ದ ಮಹಿಳೆ

ನಾಳೆ ವರ್ಷದ ಮೊದಲ ಸೂರ್ಯಗ್ರಹಣ: ಯಾವ ರಾಶಿಗೆ ಶುಭ? ಯಾರಿಗೆ ಅಶುಭ?

‘ಬಿಲ್ಲ ರಂಗ ಬಾಷ’ ತಡ ಆಗ್ತಿರೋದಕ್ಕೆ ರಿಯಲ್ ಕಾರಣ ತಿಳಿಸಿದ ಕಿಚ್ಚ ಸುದೀಪ್

ಜೈಲಿನಲ್ಲಿ ದರ್ಶನ್ ನೋಡಿ ಖುಷಿಯಿಂದ ವಾಪಸ್ ಹೊರಟ ವಿಜಯಲಕ್ಷ್ಮಿ

ಮಗಳ ಮದುವೆ ಸಾಲ ತೀರಿಸೋಕೆ ದುಡಿಯುತ್ತಿದ್ದ ಅಪ್ಪ-ಮಗ ಒಟ್ಟಿಗೆ ಸಾವು

ಸಚಿವ ಸ್ಥಾನಕ್ಕೆ ರಾಜೀನಾಮೆ: ಸ್ಪಷ್ಟನೆ ಕೊಟ್ಟ SS ಮಲ್ಲಿಕಾರ್ಜುನ್

ಸಿದ್ದಾರೂಢರ ಮಹಾರಥೋತ್ಸವದಲ್ಲಿ ಭಕ್ತ ಸಾಗರ: ಎತ್ತ ನೋಡಿದ್ರೂ ಜನವೋ ಜನ