- Kannada News Photo gallery Martin Movie actress Vaibhavi Shandilya Got married to Harshwardhan Patil Cinema News in Kannada
ಸದ್ದೂ ಇಲ್ಲ, ಗದ್ದಲವೂ ಇಲ್ಲ; ಹಸೆಮಣೆ ಏರಿದ ‘ಮಾರ್ಟಿನ್’ ಬೆಡಗಿ ವೈಭವಿ ಶಾಂಡಿಲ್ಯ
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಮದುವೆ ಆಗುತ್ತಿದ್ದಾರೆ ಎಂದರೆ ಸಾಕಷ್ಟು ಸುದ್ದಿ ಆಗುತ್ತದೆ. ಆದರೆ, ವೈಭವಿ ವಿವಾಹ ಆಗುವ ಯಾವುದೇ ಸೂಚನೆ ಇರಲಿಲ್ಲ. ಅವರು ಸೈಲೆಂಟ್ ಆಗಿ ಮದುವೆ ಆಗಿ ಎಲ್ಲರಿಗೂ ಶಾಕ್ ನೀಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿವೆ.
Updated on: Feb 24, 2025 | 8:50 AM

ನಟಿ ವೈಭವಿ ಶಾಂಡಿಲ್ಯ ಅವರು ‘ಮಾರ್ಟಿನ್’ ಸಿನಿಮಾದಲ್ಲಿ ನಟಿಸಿ ಗಮನ ಸೆಳೆದವರು. ಈ ಚಿತ್ರ ಅಂದುಕೊಂಡಂತೆ ಯಶಸ್ಸು ಕಂಡಿಲ್ಲ. ಈಗ ಚಿತ್ರದ ನಟಿ ವೈಭವಿ ಶಾಂಡಿಲ್ಯ ಅವರು ಸದ್ದಿಲ್ಲದೆ ಹಸೆಮಣೆ ಏರಿ ಸುದ್ದಿ ಆಗಿದ್ದಾರೆ. ಈ ಸಂದರ್ಭದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಮದುವೆ ಆಗುತ್ತಿದ್ದಾರೆ ಎಂದರೆ ಸಾಕಷ್ಟು ಸುದ್ದಿ ಆಗುತ್ತದೆ. ಆದರೆ, ವೈಭವಿ ವಿವಾಹ ಆಗುವ ಯಾವುದೇ ಸೂಚನೆ ಇರಲಿಲ್ಲ. ಅವರು ಸೈಲೆಂಟ್ ಆಗಿ ಮದುವೆ ಆಗಿ ಎಲ್ಲರಿಗೂ ಶಾಕ್ ನೀಡಿದ್ದಾರೆ.

ವೈಭವಿ ವಿವಾಹ ಆಗಿರೋದು ಹರ್ಷವರ್ಧನ್ ಪಾಟೀಲ್ ಹೆಸರಿನ ವ್ಯಕ್ತಿಯನ್ನು. ವೃತ್ತಿಯಲ್ಲಿ ಇವರು ಛಾಯಾಗ್ರಾಹಕರು. ಮುಂಬೈ ಮೂಲದ ಛಾಯಾಗ್ರಾಹಕರು ಇವರಾಗಿದ್ದಾರೆ. ಆಪ್ತರ ಸಮ್ಮುಖದಲ್ಲಿ ಮದುವೆ ನಡೆದಿದೆ.

ವೈಭವಿ ಅವರು ಮರಾಠಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ಕನ್ನಡದ ‘ರಾಜ್ ವಿಷ್ಣು’ ಹೆಸರಿನ ಸಿನಿಮಾದಲ್ಲಿ ವೈಭವಿ ನಟಿಸಿದ್ದರು. ‘ಗಾಳಿಪಟ 2’ ಚಿತ್ರದಲ್ಲೂ ವೈಭವಿ ಅವರು ಬಣ್ಣ ಹಚ್ಚಿದ್ದಾರೆ. ‘ಮಾರ್ಟಿನ್’ ಅವರ ನಟನೆಯ ಕೊನೆಯ ಕನ್ನಡ ಸಿನಿಮಾ.

ಸದ್ಯ ವೈಭವಿ ಅವರು ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಅವರು ವಿವಾಹದ ಬಳಿಕ ಸಣ್ಣ ಬ್ರೇಕ್ ಪಡೆಯುವ ಆಲೋಚನೆಯಲ್ಲಿ ಇದ್ದಾರೆ ಎನ್ನಲಾಗಿದೆ. ಅವರು ಸುತ್ತಾಟದಲ್ಲಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.



















