AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dasara Doll Exhibition: 20ಕ್ಕೂ ಹೆಚ್ಚು ದೇಶಗಳ ಕಲಾಕೃತಿಗೆ ನೋಡುಗರು ಫಿದಾ!

Dasara: ದಾವಣಗೆರೆಯ ಎಸ್.ಎಸ್. ಬಡಾವಣೆ ನಿವಾಸಿಗಳಾದ ಮುರುಗೇಂದ್ರಪ್ಪ ಹಾಗೂ ಸುಮಂಗಲಾ ಅವರ ಮನೆಯಲ್ಲಿ ದಸರಾ ಪ್ರಯುಕ್ತ ಏರ್ಪಡಿಸಲಾದ ಬೊಂಬೆ ಪ್ರದರ್ಶನ ಕಂಡು ನೋಡುಗರು ಫಿದಾ ಆಗಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ಆಫ್ರಿಕಾ ಸೇರಿ 20ಕ್ಕೂ ಹೆಚ್ಚು ದೇಶಗಳ ಬೊಂಬೆಗಳು ಪ್ರದರ್ಶನದಲ್ಲಿ ಕಣ್ಮನ ಸೆಳೆಯುತ್ತಿವೆ.

ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಪ್ರಸನ್ನ ಹೆಗಡೆ|

Updated on: Sep 29, 2025 | 2:33 PM

Share
ಇಂಜಿನಿಯರ್ ಆಗಿದ್ದ ಮುರುಗೇಂದ್ರಪ್ಪ ನೈಜೀರಿಯಾ, ಕೀನ್ಯಾ, ಉಗಾಂಡಾ, ಕಿಂಬರ್ಲಿ, ಘಾನಾ, ಕ್ಯೂಬಾ ಹೀಗೆ ಹತ್ತಾರು ಆಫ್ರಿಕನ್​ ದೇಶಗಳನ್ನು ಸುತ್ತಿದ್ದಾರೆ. ಪ್ರತೀ ದೇಶಕ್ಕೆ ಭೇಟಿ ನೀಡಿದಾಗ ಅಲ್ಲಿನ ಸ್ಥಳೀಯತೆ ಪ್ರತಿನಿಧಿಸುವ ಕಲಾಕೃತಿಗಳನ್ನು ಸಂಗ್ರಹಿಸಿ ತಂದು ತಮ್ಮ ಮನೆಯನ್ನೇ ಮ್ಯೂಸಿಯಂ ಮಾಡಿದ್ದಾರೆ.

1 / 5
ಎರಡು ದಶಕಗಳ ಕಾಲ  ನೈಜೀರಿಯಾದಲ್ಲಿ ನೆಲೆಸಿದ್ದ ದಂಪತಿ ಹಲವು ದೇಶಗಳ ಪ್ರವಾಸ ಮಾಡಿದ್ದು, 20ಕ್ಕೂ ಹೆಚ್ಚು ವಿದೇಶಿ ಕಲಾಕೃತಿಗಳ ಸಂಗ್ರಹ ಇವರ ಬಳಿಯಿವೆ. ಆಫ್ರಿಕಾದ ಸಂಸ್ಕೃತಿ ಹೇಳುವ ಮರದ ಗೊಂಬೆಗಳು ಇವುಗಳಲ್ಲಿ ವಿಶೇಷ.

2 / 5
ಒಂದೊಂದು ಕಲಾಕೃತಿಯೂ ಆಫ್ರಿಕಾ ಜನರ ಸೃಜನಶೀಲತೆ, ಕರಕುಶಲ ಕಲೆ ಬಗ್ಗೆ ಸಾರಿ ಹೇಳುತ್ತಿವೆ. ಜೀವನೋಪಾಯಕ್ಕಾಗಿ ಅಲ್ಲಿನ ಜನ ಇವುಗಳನ್ನ ತಯಾರಿಸಿ ಕಡಿಮೆ ವೆಚ್ಚಕ್ಕೆ ಮಾರಾಟ ಮಾಡುತ್ತಾರೆ. ಅವುಗಳನ್ನ ದಸರಾ ಸಂದರ್ಭ ಇಲ್ಲಿ ಪ್ರದರ್ಶಿಸಿದರೆ ಸ್ಥಳೀಯರಿಗೆ ಅಲ್ಲಿನ ಸಂಸ್ಕೃತಿ ಪರಿಚಯವಾಗುತ್ತದೆ ಎಂಬುದು ಮುರುಗೇಂದ್ರಪ್ಪ ದಂಪತಿ ಅಭಿಪ್ರಾಯ.

3 / 5
ದಸರಾ ಬೊಂಬೆ ಪ್ರದರ್ಶನದಲ್ಲಿ ಆಫ್ರಿಕನ್​ ಕಲಾಕೃತಿಗಳು ಪ್ರದರ್ಶನವಾಗುತ್ತಿರುವುದು ತುಂಬಾ ಅಪರೂಪ. ಹೀಗಾಗಿ ಮುರುಗೇಂದ್ರಪ್ಪ ಹಾಗೂ ಸುಮಂಗಲಾ ಅವರ ಮನೆಯ ಈ ಎಕ್ಸಿಬಿಷನ್​ ದಾವಣಗೆರೆಯಲ್ಲಿ ಮನೆ ಮಾತಾಗಿದ್ದು,  ದಸರಾ ಹಬ್ಬದ ಸಂಭ್ರಮ ಇಮ್ಮಡಿಗೊಳಿಸಿದೆ.

4 / 5
ವಿದೇಶಿ ಬೊಂಬೆಗಳು ಮಾತ್ರವಲ್ಲದೆ ಕರ್ನಾಟಕದ ಸ್ಥಳೀಯ ಕಲಾಕೃತಿಗಳನ್ನೂ ಪ್ರದರ್ಶನದಲ್ಲಿ ಕಾಣಬಹುದಾಗಿದೆ. ನಮ್ಮ ಸಂಸ್ಕೃತಿ ಪ್ರತಿಬಿಂಬಿಸುವ ಚನ್ನಪಟ್ಟಣ, ‌ಮೈಸೂರಿನ ವಿವಿಧ ಬೊಂಬೆಗಳೂ ಇಲ್ಲಿವೆ.

5 / 5
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!

ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ