AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ದಸರಾ 2024: ಈ ಬಾರಿಯೂ ಅಂಬಾರಿ ಹೊರುವ ಜವಾಬ್ದಾರಿ ಅಭಿಮನ್ಯು ಹೆಗಲಿಗೆ

2024 ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಮೂರು ತಿಂಗಳು ಬಾಕಿ ಉಳಿದಿದೆ. ದಸರಾ ಮಹೋತ್ಸವಕ್ಕೆ ಸಿದ್ದತೆ ಆರಂಭವಾಗಿದ್ದು, ದಸರಾ ಮಹೋತ್ಸವದ ಕೇಂದ್ರ ಬಿಂದು ಗಜಪಡೆ ಆಯ್ಕೆ ಪ್ರಕ್ರಿಯೆಯಲ್ಲಿ ಅರಣ್ಯ ಇಲಾಖೆ ನಿರತವಾಗಿದೆ. ಈ ಬಾರಿ ಒಟ್ಟು 18 ಆನೆಗಳು ಮೈಸೂರಿಗೆ ಬರುವ ಸಾಧ್ಯತೆ ಇದೆ.

ರಾಮ್​, ಮೈಸೂರು
| Updated By: ವಿವೇಕ ಬಿರಾದಾರ|

Updated on:Aug 21, 2024 | 2:43 PM

Share
Mysore Dasara 2024: Captain Abhimanyu will carry ambari for 5th time

ಮೈಸೂರು ದಸರಾ ಜಗತ್ಪ್ರಸಿದ್ಧಿ. ಮೈಸೂರು ದಸರಾವನ್ನು ವೀಕ್ಷಿಸಲು ದೇಶ-ವಿದೇಶಗಳಿಂದ ಜನರು ಬರುತ್ತದೆ. ದಸಾರಾ ಮಹೋತ್ಸವಕ್ಕಾಗಿ ಮೈಸೂರು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮತ್ತು ಅರಣ್ಯ ಇಲಾಖೆ ಸಕಲ ಸಿದ್ದತೆ ಮಾಡಿಕೊಳ್ಳುತ್ತದೆ.

1 / 7
Mysore Dasara 2024: Captain Abhimanyu will carry ambari for 5th time

2024 ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಮೂರು ತಿಂಗಳು ಬಾಕಿ ಉಳಿದಿದೆ. ಈ ಬಾರಿಯೂ ಅಂಬಾರಿಯನ್ನು ಅಭಿಮನ್ಯು ಹೊರಲಿದ್ದಾನೆ.

2 / 7
Mysore Dasara 2024: Captain Abhimanyu will carry ambari for 5th time

ದಸರಾ ಮಹೋತ್ಸವಕ್ಕೆ ಸಿದ್ದತೆ ಆರಂಭವಾಗಿದ್ದು, ದಸರಾ ಮಹೋತ್ಸವದ ಕೇಂದ್ರ ಬಿಂದು ಗಜಪಡೆ ಆಯ್ಕೆ ಪ್ರಕ್ರಿಯೆಯಲ್ಲಿ ಅರಣ್ಯ ಇಲಾಖೆ ನಿರತವಾಗಿದೆ. ಡಿಸಿಎಫ್ ಶರಣಬಸಪ್ಪ ನೇತೃತ್ವದಲ್ಲಿ ಗಜಪಡೆ ಆಯ್ಕೆ ಪ್ರಕ್ರಿಯೆ ನಡೆದಿದೆ.

3 / 7
Mysore Dasara 2024: Captain Abhimanyu will carry ambari for 5th time

ಅರಣ್ಯ ಇಲಾಖೆ ಸದ್ಯ 18 ಆನೆಗಳನ್ನು ಗುರುತಿಸಿದೆ. ಅರಣ್ಯ ಇಲಾಖೆ ಈ ಬಾರಿ ಹೆಚ್ಚುವರಿಯಾಗಿ ನಾಲ್ಕು ಆನೆಗಳನ್ನು ಗುರುತಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

4 / 7
Mysore Dasara 2024: Captain Abhimanyu will carry ambari for 5th time

ದಸರಾ ಮಹೋತ್ಸವ ಎರಡು ತಿಂಗಳ ಮುಂಚಿತವಾಗಿ ಗಜಪಡೆ ಮೈಸೂರಿಗೆ ಆಗಮಿಸಲಿದೆ. ಆಗಸ್ಟ್ 9 ಅಥವಾ 11ಕ್ಕೆ ಗಜಪಯಣಕ್ಕೆ ಚಿಂತನೆ ನಡೆದಿದೆ. 14 ಆನೆಗಳ ಪೈಕಿ ಮೊದಲ ಹಂತದಲ್ಲಿ 9 ಆನೆಗಳ ಆಗಮಿಸಲಿವೆ. ಎರಡನೇ ಹಂತದಲ್ಲಿ 5 ಆನೆಗಳನ್ನ ಕರೆ ತರಲು ತಯಾರಿ ನಡೆಸಲಾಗುತ್ತಿದೆ.

5 / 7
Mysore Dasara 2024: Captain Abhimanyu will carry ambari for 5th time

ಮೊದಲ ಹಂತದಲ್ಲಿ ಕ್ಯಾಪ್ಟನ್ ಅಭಿಮನ್ಯು, ಭೀಮ, ಹೊಸ ಆನೆ ಏಕಲವ್ಯ, ವರಲಕ್ಷ್ಮಿ, ಧನಂಜಯ, ಗೋಪಿ, ರೋಹಿತ, ವರಲಕ್ಷ್ಮಿ, ಕಂಜನ್ ಆನೆಗಳು ಆಗಮಿಸಲಿವೆ.

6 / 7
Mysore Dasara 2024: Captain Abhimanyu will carry ambari for 5th time

ಎರಡನೇ ಹಂತದಲ್ಲಿ ಪ್ರಶಾಂತ, ಸುಗ್ರೀವ, ಮಹೇಂದ್ರ, ಲಕ್ಷ್ಮಿ, ಹಿರಣ್ಯ ಆನೆಗಳು ಬರಲಿವೆ.

7 / 7

Published On - 12:14 pm, Sat, 20 July 24