AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಪವನ್ ಕಲ್ಯಾಣ್, ಕೈಯಲ್ಲಿರುವ ಖಾತೆಗಳೆಷ್ಟು?

ಸಿನಿಮಾ ನಟ, ರಾಜಕಾರಣಿ ಪವನ್ ಕಲ್ಯಾಣ್ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಪವನ್​ರು ಅಧಿಕಾರ ವಹಿಸಿಕೊಳ್ಳುತ್ತಿರುವ ಹಾಗೂ ಪೊಲೀಸರು ಪವನ್​ಗೆ ಸೆಲ್ಯೂಟ್ ಮಾಡುತ್ತಿರುವ ವಿಡಿಯೋ, ಚಿತ್ರಗಳು ವೈರಲ್ ಆಗಿವೆ.

ಮಂಜುನಾಥ ಸಿ.
|

Updated on: Jun 19, 2024 | 3:15 PM

Share
ನಟ, ಟಾಲಿವುಡ್ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.

1 / 7
ವಿಜಯವಾಡದಲ್ಲಿ ಪವನ್ ಕಲ್ಯಾಣ್ ಅಧಿಕಾರ ವಹಿಸಿಕೊಂಡಿದ್ದು, ಅದಕ್ಕೂ ಮುನ್ನ ದೇವರಿಗೆ ಪೂಜೆ ಮಾಡಿ ಆಪ್ತರ ಸಮ್ಮುಖದಲ್ಲಿ ಅಧಿಕಾರವನ್ನು ವಹಿಸಿಕೊಂಡರು.

2 / 7
ಪವನ್ ಕಲ್ಯಾಣ್ ಕೈಯಲ್ಲಿ ಇದೀಗ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಜಲಸಂಪನ್ಮೂಲ ಖಾತೆ, ಅರಣ್ಯ ಮತ್ತು ಪರಿಸರ ಖಾತೆ ಹಾಗೂ ಮಾಹಿತಿ ತಂತ್ರಜ್ಞಾನ ಖಾತೆಗಳಿವೆ.

3 / 7
ಪ್ರಸ್ತುತ ನಾಲ್ಕು ಖಾತೆಗಳ ಜವಾಬ್ದಾರಿ ಪವನ್ ಕಲ್ಯಾಣ್ ಹೆಗಲಿಗಿದೆಯಾದರೂ ಮುಂದಿನ ದಿನಗಳಲ್ಲಿ ಕೆಲವು ಖಾತೆಗಳನ್ನು ಹೊಸ ಸಚಿವರಿಗೆ ಪವನ್ ಕಲ್ಯಾಣ್ ಬಿಟ್ಟುಕೊಡಲಿದ್ದಾರೆ ಎನ್ನಲಾಗಿದೆ.

4 / 7
ಪವನ್ ಕಲ್ಯಾಣ್ ಅಧಿಕಾರ ಸ್ವೀಕರಿಸುತ್ತಿರುವ, ಪವನ್ ಕಲ್ಯಾಣ್​ಗೆ ಪೊಲೀಸರು ಗೌರವ ವಂದನೆ ಸಲ್ಲಿಸಿರುವ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

5 / 7
ಜಗನ್​ರ ಸರ್ಕಾರದ ವಿರುದ್ಧ ಪವನ್ ಕಲ್ಯಾಣ್ ಸತತವಾಗಿ ಹೋರಾಟ ನಡೆಸಿ ಅವರನ್ನು ಅಧಿಕಾರದಿಂದ ಇಳಿಸಲು ಸಫಲರಾಗಿದ್ದಾರೆ. ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದಾಗಲೇ ಉಪ ಮುಖ್ಯಮಂತ್ರಿ ಆಗಿದ್ದಾರೆ.

6 / 7
ಪವನ್ ಕಲ್ಯಾಣ್ ಮೇಲೆ ದೊಡ್ಡ ಜವಾಬ್ದಾರಿಯನ್ನು ಸಿಎಂ ಚಂದ್ರಬಾಬು ನಾಯ್ಡು ಹೊರಿಸಿದ್ದು, ಇದನ್ನು ಅವರು ಹೇಗೆ ನಿಭಾಯಿಸುತ್ತಾರೆ ಕಾದು ನೋಡಬೇಕಿದೆ.

7 / 7