- Kannada News Photo gallery People who came to see the lalbagh flower show of holiday: more than one crore income in 8 days, taja suddi
ಸಾಲು ಸಾಲು ರಜೆ ಹಿನ್ನಲೆ ಫ್ಲವರ್ ಶೋ ನೋಡಲು ಮುಗಿಬಿದ್ದ ಜನ: 8 ದಿನದಲ್ಲಿ ಒಂದು ಕೋಟಿಗೂ ಹೆಚ್ಚು ಆದಾಯ
ನಿನ್ನೆ 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಹಿನ್ನಲೆ ಬೆಂಗಳೂರಿನ ಸಸ್ಯಕಾಶಿ ಲಾಲ್ಬಾಗ್ಗೆ ಸಿಲಿಕಾನ್ ಸಿಟಿಯ ಸಾಕಷ್ಟು ಜನರು ಭೇಟಿ ನೀಡಿದ್ದಾರೆ. ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನ ಚರಿತ್ರೆ ಆಧರಿಸಿ ಫ್ಲವರ್ ಶೋ 8ನೇ ದಿನಕ್ಕೆ ಕಾಲಿಟ್ಟಿದ್ದು, ನಿನ್ನೆವರೆಗೆ 1 ಕೋಟಿ 3 ಲಕ್ಷ 76 ಸಾವಿರ ರೂಪಾಯಿ ಆದಾಯ ಹರಿದು ಬಂದಿದೆ.
Updated on: Aug 16, 2024 | 8:16 AM

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಹಿನ್ನಲೆ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನ ಚರಿತ್ರೆ ಆಧರಿಸಿ ಫ್ಲವರ್ ಶೋ 8 ನೇ ದಿನಕ್ಕೆ ಕಾಲಿಟ್ಟಿದ್ದು, ಕುಟುಂಬ ಸಮೇತ ಲಕ್ಷಾಂತರ ಜನರು ಲಾಲ್ ಬಾಗ್‌ಗೆ ಭೇಟಿಕೊಟ್ಟು ಸಂಭಮಿಸಿದ್ದಾರೆ.

ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಲಾಲ್‌ಬಾಗ್‌ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರ ಜೀವನ ಚರಿತ್ರೆ ಅನಾವರಣಗೊಂಡು ಎಂಟನೇ ದಿನಕ್ಕೆ ಕಾಲಿಟ್ಟಿದೆ. ಅಲ್ಲದೇ ನಿನ್ನೆ 78ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಲಾಲ್‌ಬಾಗ್‌ನತ್ತ ಜನ ಸಾಗರವೆ ಹರಿದು ಬಂದಿತ್ತು. ಮಕ್ಕಳು, ಪೋಷಕರು, ಯುವ ಜನರು, ವೃದ್ಧರೂ ಸೇರಿದಂತೆ ಎಲ್ಲರೂ ಸೆಲ್ಫಿಗೆ ಫೋಸ್ಕೊಟ್ಟು ಸಖತ್ ಎಂಜಾಯ್ ಮಾಡಿದ್ದಾರೆ.

ಇದುವರೆಗೆ 1 ಕೋಟಿ 3 ಲಕ್ಷ 76 ಸಾವಿರ ರೂಪಾಯಿ ಆದಾಯ ಹರಿದು ಬಂದಿದೆ. ಕಳೆದ 8 ದಿನಗಳಲ್ಲಿ 3 ಲಕ್ಷ ಜನರು ಭೇಟಿ ನೀಡಿದ್ದಾರೆ. ನಿನ್ನೆ ಒಂದು ದಿನ ಸಾಯಂಕಾಲ 4 ಗಂಟೆ ಸಮಯಕ್ಕೆ 1 ಲಕ್ಷ 15 ಸಾವಿರದಷ್ಟು ಜನರು ಭೇಟಿ ನೀಡಿದ್ದರು.

ಈ ಬಗ್ಗೆ ಲಾಲ್‌ಬಾಗ್‌ನ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಮಾತನಾಡಿ, ನಿನ್ನೆ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಬೆಳಿಗ್ಗೆ 6 ಗಂಟೆಯಿಂದ ಜನರು ಭೇಟಿ ನೀಡಿದ್ದರು. ಸಂಜೆ 4 ಗಂಟೆ ಸಮಯಕ್ಕೆ 1.5 ಲಕ್ಷ ಜನರು ಭೇಟಿ ನೀಡಿದ್ದಾರೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆ ರಜೆ ಇದ್ದ ಕಾರಣ ಪ್ಲವರ್ ಶೋ ಗೆ ಲಗ್ಗೆ ಇಟ್ಟ ಸಿಲಿಕಾನ್ ಸಿಟಿ ಮಂದಿ ಸಖತ್ ಎಂಜಾಯ್ ಮಾಡಿದ್ದಾರೆ. ಇನ್ನು ಸಾಲು ಸಾಲು ರಜೆ ಹಿನ್ನಲೆ ಲಾಲ್ ಬಾಗ್‌ಗೆ ಭೇಟಿ ನೀಡುವ ನೀರಿಕ್ಷೆ ಕೂಡ ಇದ್ದು, ನಾಲ್ಕು ದಿನಗಳ ಕಾಲ ಅಂದರೆ ಆ.19 ರವರೆಗೆ ಫ್ಲವರ್ ಶೋ ನೋಡಿ ಕಣ್ತುಂಬಿಕೊಳ್ಳಬಹುದಾಗಿದೆ.



