AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯಪುರದಲ್ಲಿ ಅಸ್ಮಿತಾ ಖೇಲೋ ಇಂಡಿಯಾ ಮಹಿಳಾ ಸೈಕ್ಲಿಂಗ್ ಲೀಗ್‌: ಇಲ್ಲಿವೆ ರೇಸ್‌ನ ರೋಚಕ ಕ್ಷಣಗಳು!

ಸೈಕ್ಲಿಸ್ಟ್‌ಗಳ ತವರೂರು ವಿಜಯಪುರದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ 'ಅಸ್ಮಿತಾ ಖೇಲೋ ಇಂಡಿಯಾ ವುಮೆನ್ಸ್ ಸೈಕ್ಲಿಂಗ್ ಸಿಟಿ ಲೀಗ್' ಪ್ರಥಮ ಬಾರಿಗೆ ಅತ್ಯಂತ ಯಶಸ್ವಿಯಾಗಿ ಜರುಗಿತು. ಪ್ರೊಫೆಷನಲ್ ಹಾಗೂ ಸಾಮಾನ್ಯ ವಿಭಾಗಗಳಲ್ಲಿ ನೂರಾರು ಮಹಿಳಾ ಕ್ರೀಡಾಪಟುಗಳು ಭಾಗವಹಿಸಿ ಪದಕ ಮುಡಿಗೇರಿಸಿಕೊಂಡರು. 2028ರ ಒಲಿಂಪಿಕ್ಸ್ ಸಿದ್ಧತೆಗೆ ಪೂರಕವಾದ ಈ ಕ್ರೀಡಾಕೂಟದ ಕೆಲ ಚಿತ್ರಗಳು ಇಲ್ಲಿವೆ.

ಅಶೋಕ ಯಡಳ್ಳಿ, ವಿಜಯಪುರ
| Edited By: |

Updated on: Jun 14, 2026 | 9:41 AM

Share
ಸೈಕ್ಲಿಸ್ಟ್‌ಗಳ ತವರೂರು ಎಂದೇ ಪ್ರಸಿದ್ಧಿ ಪಡೆದಿರುವ ಐತಿಹಾಸಿಕ ವಿಜಯಪುರ ನಗರದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ 'ಅಸ್ಮಿತಾ ಖೇಲೋ ಇಂಡಿಯಾ ವುಮೆನ್ಸ್ ಸೈಕ್ಲಿಂಗ್ ಸಿಟಿ ಲೀಗ್' ಅತ್ಯಂತ ಯಶಸ್ವಿಯಾಗಿ ನಡೆಯಿತು. ಮಹಿಳಾ ಸೈಕ್ಲಿಸ್ಟ್‌ಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಈ ವಿಶಿಷ್ಟ ಕ್ರೀಡಾಕೂಟಕ್ಕೆ ಇಡೀ ನಗರವೇ ಸಾಕ್ಷಿಯಾಯಿತು ಮತ್ತು ನೂರಾರು ಮಹಿಳಾ ಸೈಕ್ಲಿಸ್ಟ್‌ಗಳು ಸೈಕಲ್ ಸವಾರಿ ಮಾಡುವ ಮೂಲಕ ನಗರದಲ್ಲಿ ಹೊಸ ಕಳೆ ತಂದರು.

1 / 6
ಈ ಲೀಗ್ ಅನ್ನು ಕ್ರೀಡಾ ಪ್ರೋತ್ಸಾಹಕ್ಕಾಗಿ ದೇಶದ ಮತ್ತು ರಾಜ್ಯದ ಪ್ರಮುಖ ಸಂಸ್ಥೆಗಳು ಒಟ್ಟಾಗಿ ಆಯೋಜಿಸಿದ್ದವು. ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ, ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಶನ್, ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಶನ್, ಸ್ಥಳೀಯ ಜಿಲ್ಲಾಡಳಿತ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳು ಜಂಟಿಯಾಗಿ ಕೈಜೋಡಿಸಿ ಈ ಕ್ರೀಡಾಕೂಟವನ್ನು ವ್ಯವಸ್ಥಿತವಾಗಿ ಯಶಸ್ವಿಗೊಳಿಸಿದವು.

2 / 6
ವಿಜಯಪುರ ನಗರದಲ್ಲಿ ಇದೇ ಮೊದಲ ಬಾರಿಗೆ ಇಂತಹದೊಂದು ಬೃಹತ್ ಸಿಟಿ ಲೀಗ್ ಆಯೋಜನೆಗೊಂಡಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕ್ರೀಡಾಕೂಟದಲ್ಲಿ ಕೇವಲ ವೃತ್ತಿಪರರಿಗೆ ಮಾತ್ರವಲ್ಲದೆ ಎಲ್ಲರಿಗೂ ಅವಕಾಶ ನೀಡಲಾಗಿತ್ತು. ಹೀಗಾಗಿ, ಪ್ರೊಫೆಷನಲ್ ಸೈಕ್ಲಿಸ್ಟ್‌ಗಳು (Professional Cyclists) ಮತ್ತು ಸಾಮಾನ್ಯ ಸೈಕಲ್ ಸವಾರರು (Amateur Riders) ಎಂಬ ಎರಡು ಪ್ರತ್ಯೇಕ ವಿಭಾಗಗಳನ್ನು ಮಾಡಿ ಸ್ಪರ್ಧೆಗಳನ್ನು ಅತ್ಯಂತ ರೋಚಕವಾಗಿ ನಡೆಸಲಾಯಿತು.

3 / 6
ಸ್ಪರ್ಧೆಯಲ್ಲಿ ಭಾಗವಹಿಸಿದ ಬಾಲಕಿಯರು ಮತ್ತು ಮಹಿಳೆಯರ ವಯಸ್ಸಿಗೆ ಅನುಗುಣವಾಗಿ ಕಿಲೋಮೀಟರ್ ದೂರವನ್ನು ನಿಗದಿಪಡಿಸಲಾಗಿತ್ತು. ಪ್ರೊಫೆಷನಲ್ ವಿಭಾಗದಲ್ಲಿ 13-16 ವರ್ಷದವರಿಗೆ 5 ಕಿ.ಮೀ, 17-18 ವರ್ಷದವರಿಗೆ 10 ಕಿ.ಮೀ ಹಾಗೂ 19 ವರ್ಷ ಮೇಲ್ಪಟ್ಟವರಿಗೆ 20 ಕಿ.ಮೀ ಸ್ಪರ್ಧೆ ಇತ್ತು. ಸಾಮಾನ್ಯ ವಿಭಾಗದಲ್ಲಿ ವಯೋಮಾನಕ್ಕೆ ತಕ್ಕಂತೆ 3 ಕಿ.ಮೀ, 6 ಕಿ.ಮೀ ಮತ್ತು 10 ಕಿ.ಮೀ ದೂರದ ರೇಸ್ ಆಯೋಜಿಸಲಾಗಿತ್ತು.

4 / 6
ಸ್ಪರ್ಧೆಯುದ್ದಕ್ಕೂ ಮಹಿಳಾ ಕ್ರೀಡಾಪಟುಗಳು ಅತ್ಯಂತ ಉತ್ಸಾಹ ಮತ್ತು ಪೈಪೋಟಿಯಿಂದ ಭಾಗವಹಿಸಿದ್ದರು. ರೇಸ್ ಮುಕ್ತಾಯದ ನಂತರ ಪ್ರತಿ ವಿಭಾಗದಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಮುಡಿಗೇರಿಸಿಕೊಂಡ ವಿಜೇತ ಸ್ಪರ್ಧಿಗಳಿಗೆ ಪದಕಗಳು ಹಾಗೂ ಕ್ರೀಡಾ ಪ್ರಮಾಣಪತ್ರಗಳನ್ನು ವಿತರಿಸಿ ಗೌರವಿಸಲಾಯಿತು. ಇದು ಅವರ ಕ್ರೀಡಾ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿತು.

5 / 6
ಮುಂಬರುವ 2028 ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸೈಕ್ಲಿಂಗ್ ಸ್ಪರ್ಧೆಗಳು ನಡೆಯಲಿದ್ದು, ಅದಕ್ಕೆ ಭಾರತೀಯ ಮಹಿಳಾ ಕ್ರೀಡಾಪಟುಗಳನ್ನು ಸಜ್ಜುಗೊಳಿಸಲು ಈ ಲೀಗ್ ತಳಹದಿಯಾಗಿದೆ. ಮಹಿಳೆಯರಲ್ಲಿ ಕ್ರೀಡಾ ಆಸಕ್ತಿ ಬೆಳೆಸುವ ಜೊತೆಗೆ, ದೇಶವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಲು ಮತ್ತು ಸೈಕ್ಲಿಂಗ್ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಲು ಈ ಸ್ಪರ್ಧೆಯು ಕ್ರೀಡಾಪಟುಗಳಿಗೆ ಹೊಸ ಪ್ರೇರಣೆ ಹಾಗೂ ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ.

6 / 6
Follow Us
SIR ವಿವಾದ: ಸರ್ಕಾರದ ವಿರುದ್ಧ ಜಂಟಿ ಸಮರಕ್ಕೆ ಬಿಜೆಪಿ, ಜೆಡಿಎಸ್‌ ಸಿದ್ಧತೆ

ಟ್ರಾಫಿಕ್ ಸಿಗ್ನಲ್​ನಲ್ಲಿ ನಿಂತಿದ್ದ ಎಸಿ ಬಸ್​ಗೆ ಮತ್ತೊಂದು ಬಸ್ ಡಿಕ್ಕಿ!

ಸರ್ಕಾರಿ ಕೆಲಸ ಕೊಡಿಸುವ ನೆಪದಲ್ಲಿ ವಂಚನೆ: ಟಿವಿ9 ವರದಿ ಬಳಿಕ ಆರೋಪಿಗಳ ಬಂಧನ

ಮಂಡ್ಯ ಫೈರಿಂಗ್: ಪ್ರಭಾವಿ ಪುತ್ರನ ಬೆನ್ನಿಗೆ ನಿಂತ್ರಾ ಎಸ್‌ಪಿ ಶೋಭಾರಾಣಿ?

ರೌಡಿಶೀಟರ್​ಗಳಿಗೆ ಸಿಸಿಬಿ ಬಿಗ್ ಶಾಕ್, ರಾತ್ರೋರಾತ್ರಿ ಮಿಂಚಿನ ಕಾರ್ಯಾಚರಣೆ

ಕೊರತೆ ತಪ್ಪಿಸಲು ಸಿಎಂ ಡಿಕೆ ಶಿವಕುಮಾರ್ ತುರ್ತು ಸಭೆ, ಅಧಿಕಾರಿಗಳಿಗೆ ಸೂಚನೆ

Video: ಮಕ್ಕಳ ನಡುವೆಯೇ ಚಾಪೆಯಲ್ಲಿತ್ತು 5 ಅಡಿಯ ಬೃಹತ್ ನಾಗರಹಾವು!

ಇಂದು ಈ ರಾಶಿಯವರಿಗೆ ಸಾಲದಿಂದ ಮುಕ್ತಿ
ಇಂದು ಈ ರಾಶಿಯವರಿಗೆ ಸಾಲದಿಂದ ಮುಕ್ತಿ
ಗುಜರಾತ್​​ನಲ್ಲಿ ಮಳೆಯಿಂದ ಪ್ರವಾಹ, ಉಕ್ಕಿ ಹರಿಯುತ್ತಿದೆ ಡಾಂಗ್ ನದಿ

ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಲು 6 ಕಿಮೀ ಹೊತ್ತು ಸಾಗಿದ ಶಾಲಾ ವಾರ್ಡನ್!