- Kannada News Photo gallery PM Narendra Modi In Ukraine Will Meet President Volodymyr Zelensky World News in Kannada
Modi in Ukraine: ಪೋಲೆಂಡ್ನಿಂದ ಉಕ್ರೇನ್ ತಲುಪಿದ ಪ್ರಧಾನಿ ನರೇಂದ್ರ ಮೋದಿ; ಇಂದು ಸಂಜೆ ಅಧ್ಯಕ್ಷ ಝೆಲೆನ್ಸ್ಕಿ ಜೊತೆ ಮಾತುಕತೆ
2 ದಿನಗಳ ಕಾಲ ಪೋಲೆಂಡ್ ಪ್ರವಾಸದಲ್ಲಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಸಂಜೆ ಅಲ್ಲಿಂದ ವಿಶೇಷ ರೈಲಿನಲ್ಲಿ ಉಕ್ರೇನ್ಗೆ ಹೊರಟಿದ್ದರು. ಇಂದು ಅವರು ಉಕ್ರೇನ್ ತಲುಪಿದ್ದಾರೆ. ಇಂದು ಸಂಜೆ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
Updated on:Aug 23, 2024 | 2:50 PM

ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಪೋಲೆಂಡ್ನಿಂದ ಉಕ್ರೇನ್ ರಾಜಧಾನಿ ಕೈವ್ಗೆ ಬಂದಿಳಿದಿದ್ದಾರೆ.

ಎರಡು ದಿನಗಳ ಪೋಲೆಂಡ್ ಭೇಟಿಯನ್ನು ಮುಗಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬಹು ನಿರೀಕ್ಷಿತ ಪ್ರವಾಸಕ್ಕಾಗಿ ಉಕ್ರೇನ್ಗೆ ತೆರಳಿದ್ದಾರೆ. ಅವರು ಉಕ್ರೇನಿಯನ್ ಪಿಎಂ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಯುದ್ಧ ಪೀಡಿತದ ದೇಶವಾದ ಉಕ್ರೇನ್ಗೆ ತೆರಳಿದ್ದಾರೆ.

ರಷ್ಯಾಕ್ಕೆ ಭೇಟಿ ನೀಡಿದ ಸುಮಾರು 6 ವಾರಗಳ ನಂತರ ಪ್ರಧಾನಿ ಮೋದಿ ಅವರು ಉಕ್ರೇನ್ಗೆ ಭೇಟಿ ನೀಡಿದ್ದಾರೆ. ಇದು ಉಕ್ರೇನ್ಗೆ ಭಾರತೀಯ ಪ್ರಧಾನಿಯ ಮೊದಲ ಭೇಟಿಯೆಂಬುದು ವಿಶೇಷ.

ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವನ್ನು ಭಾರತ ಇನ್ನೂ ಖಂಡಿಸಿಲ್ಲವಾದರೂ, ಪಿಎಂ ಮೋದಿ ಯುದ್ಧಭೂಮಿಯಲ್ಲಿ ಯಾವ ಸಮಸ್ಯೆಗೂ ಪರಿಹಾರ ಸಿಗುವುದಿಲ್ಲ ಎಂದು ಹೇಳುವ ಮೂಲಕ ರಷ್ಯಾಗೆ ಶಾಂತಿ ಸಂಧಾನದ ಸಲಹೆ ನೀಡಿದ್ದಾರೆ.

"ಇಂದು ಬೆಳಿಗ್ಗೆ ಕೈವ್ ತಲುಪಿದೆ. ಅಲ್ಲಿನ ಭಾರತೀಯ ಸಮುದಾಯವು ತುಂಬಾ ಆತ್ಮೀಯ ಸ್ವಾಗತವನ್ನು ನೀಡಿದೆ" ಎಂದು ನರೇಂದ್ರ ಮೋದಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪೋಲೆಂಡ್ನಿಂದ ಟ್ರಯಲ್ ಫೋರ್ಸ್ ಒನ್ನಲ್ಲಿ 10 ಗಂಟೆಗಳ ಪ್ರಯಾಣದ ನಂತರ ಪ್ರಧಾನಿ ಮೋದಿ ಇಂದು ಯುದ್ಧ ಪೀಡಿತ ಉಕ್ರೇನ್ಗೆ ಆಗಮಿಸಿದರು.

ಅವರ ಆಗಮನದ ನಂತರ, ಅವರನ್ನು ಕೈವ್ ಸೆಂಟ್ರಲ್ ಸ್ಟೇಷನ್ನಲ್ಲಿ ಸ್ವಾಗತಿಸಲಾಯಿತು. ಅಲ್ಲಿಂದ ಅವರನ್ನು ಹಯಾತ್ ಹೋಟೆಲ್ಗೆ ಕರೆದೊಯ್ಯಲಾಯಿತು.
Published On - 2:49 pm, Fri, 23 August 24




