- Kannada News Photo gallery Pramila Joshai Celebrate birthday with Sandalwood veteran actress Photo goes viral
ಪ್ರಮಿಳಾ ಜೋಷಾಯ್ ಜನ್ಮದಿನ ಆಚರಣೆಗೆ ಹಿರಿಯ ನಟಿಯರ ದಂಡು
ನಟಿ ಪ್ರಮಿಳಾ ಜೋಷಾಯ್ ಅವರು ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಅವರಿಗೆ ಚಿತ್ರರಂಗದ ಜೊತೆ ಒಳ್ಳೆಯ ನಂಟಿದೆ. ಈ ಕಾರಣದಿಂದಲೇ ಹಲವು ಸೆಲೆಬ್ರಿಟಿಗಳು ಇವರ ಜನ್ಮದಿನಕ್ಕೆ ಆಗಮಿಸಿದ್ದರು. ಅದ್ದೂರಿಯಾಗಿ ಇವರ ಬರ್ತ್ಡೇ ಪಾರ್ಟಿ ನಡೆದಿದೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ .
Updated on: Mar 05, 2025 | 12:41 PM

ನಟಿ ಪ್ರಮಿಳಾ ಜೋಷಾಯ್ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟಿಯರು ಆಗಮಿಸಿ ಅವರಿಗೆ ಬರ್ತ್ಡೇ ವಿಷ್ ತಿಳಿಸಿದ್ದಾರೆ. ಈ ಫೋಟೋಗಳು ಗಮನ ಸೆಳೆದಿವೆ.

ಪ್ರಮಿಳಾ ಜೋಷಾಯ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡವರು. ಈ ಕಾರಣದಿಂದಲೇ ಚಿತ್ರರಂಗದಲ್ಲಿ ಅವರಿಗೆ ಹಲವರು ಗೆಳೆಯರಿದ್ದಾರೆ. ಪ್ರಮಿಳಾ ಬರ್ತ್ಡೇಗಾಗಿ ಅವರೆಲ್ಲರೂ ಆಗಮಿಸಿದ್ದಾರೆ.

ಪ್ರಮಿಳಾ ಜನ್ಮದಿನಕ್ಕೆ ವಿನಯಾ ಪ್ರಸಾದ್, ಮಾಳವಿಕಾ, ಭಾರತಿ ವಿಷ್ಣುವರ್ಧನ್, ಶ್ರುತಿ, ಮಾಲಾಶ್ರೀ ಮೊದಲಾದವರು ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ಸಾಕಷ್ಟು ಗಮನ ಸೆಳೆದಿವೆ. ಎಲ್ಲರೂ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.

ಪ್ರಮಿಳಾ ಮಗಳು, ನಟಿ ಮೇಘನಾ ರಾಜ್ ಕೂಡ ತಾಯಿಯ ಜನ್ಮದಿನದ ಸಂಭ್ರಮಾಚರಣೆಯಲ್ಲಿ ಭಾಗಿ ಆಗಿದ್ದಾರೆ. ಲೇಡಿ ಗ್ಯಾಂಗ್ನ ಫೋಟೋ ಗಮನ ಸೆಳೆದಿದೆ. ಮೇಘನಾಗೆ ತಾಯಿ ಬಗ್ಗೆ ವಿಶೇಷ ಪ್ರೀತಿ ಹಾಗೂ ಗೌರವ ಇದೆ.

ಪ್ರಮಿಳಾ ಜೋಷಾಯ್ ಪತಿ ಸುಂದರ್ ರಾಜ್. ಪ್ರಮಿಳಾ ಅವರು ಕನ್ನಡ ಮಾತ್ರವಲ್ಲದೆ, ತಮಿಳು ಸಿನಿಮಾಗಳಲ್ಲೂ ನಟಿಸಿ ಗಮನ ಸೆಳೆದಿದ್ದಾರೆ.



















