ಬಾಲಿವುಡ್ ತಾರೆಯರೊಟ್ಟಿಗೆ ದಸರಾ ಆಚರಿಸಿದ ಕನ್ನಡದ ನಟಿ ಪ್ರಣಿತಾ ಸುಭಾಷ್
Pranitha Subhash: ನಟಿ ಪ್ರಣಿತಾ ಸುಭಾಷ್ ಬಾಲಿವುಡ್ ತಾರೆಯರೊಟ್ಟಿಗೆ ದಸರಾ ಹಬ್ಬ ಆಚರಿಸಿದ್ದಾರೆ. ಹಿಂದಿ ತಾರೆಯರೊಟ್ಟಿಗಿನ ಚಿತ್ರಗಳನ್ನು ಪ್ರಣಿತಾ ಹಂಚಿಕೊಂಡಿದ್ದಾರೆ.
Updated on: Oct 25, 2023 | 7:42 PM

ಕನ್ನಡದ ನಟಿ ಪ್ರಣಿತಾ ಸುಭಾಷ್, ಬಹುಭಾಷಾ ನಟಿ, ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿಯೂ ಪ್ರಣಿತಾ ನಟಿಸಿದ್ದಾರೆ.

'ಹಂಗಾಮಾ 2', 'ಭುಜ್' ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಪ್ರಣಿತಾ ಹಿಂದಿ ಚಿತ್ರರಂಗದಲ್ಲಿಯೂ ಪರಿಚಿತರು.

ಬಾಲಿವುಡ್ ನಟರಾದ ಅಜಯ್ ದೇವಗನ್, ಕತ್ರಿನಾ ಕೈಫ್, ಸೊನಾಕ್ಷಿ ಸಿನ್ಹ ಅವರೊಟ್ಟಿಗೆ ಪ್ರಣಿತಾ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

'ಕಲ್ಯಾಣ್ ನವರಾತ್ರಿ' ಇವೆಂಟ್ನಲ್ಲಿ ಪಾಲ್ಗೊಂಡಿದ್ದ ಪ್ರಣಿತಾ, ಬಾಲಿವುಡ್ ತಾರೆಯರೊಟ್ಟಿಗೆ ನವರಾತ್ರಿ, ದಸರಾ ಹಬ್ಬ ಆಚರಿಸಿದ್ದಾರೆ.

ಕೆಂಪು. ಹಳದಿ ಬಣ್ಣದ ಲಂಗಾ ದಾವಣಿ ಮಾದರಿಯ ಬಟ್ಟೆ ತೊಟ್ಟು ಸಖತ್ ಆಗಿ ಮಿಂಚಿದ್ದಾರೆ ಪ್ರಣಿತಾ ಸುಭಾಷ್.

ಪ್ರಣಿತಾ ಸುಭಾಷ್ ಪ್ರಸ್ತುತ ಕನ್ನಡದ 'ರಾಮನ ಅವತಾರ' ಹಾಗೂ ಮಲಯಾಳಂನ 'ತಂಕುಮಣಿ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಕಲ್ಯಾಣ್ ನವರಾತ್ರಿ ಕಾರ್ಯಕ್ರಮದಲ್ಲಿ ತಾವು ದೀಪ ಬೆಳಗಿಸುತ್ತಿರುವ ಸುಂದರ ಚಿತ್ರವನ್ನೂ ಪ್ರಣಿತಾ ಹಂಚಿಕೊಂಡಿದ್ದಾರೆ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.
Read More



