Updated on: Jun 20, 2023 | 12:26 PM
ನಟಿ ಪ್ರಣಿತಾ ಸುಭಾಷ್ ಅವರು ಮಗಳ ಆರೈಕೆಯಲ್ಲಿ ಬ್ಯುಸಿ ಇದ್ದಾರೆ. ಮಗಳಿಗೆ ಅವರು ಅರ್ನಾ ಎಂದು ಹೆಸರು ಇಟ್ಟಿದ್ದಾರೆ. ಪ್ರಣಿತಾ ಈಗ ಹೊಸ ಫೋಟೋಶೂಟ್ ಮಾಡಿಸಿದ್ದಾರೆ.
ಪ್ರಣಿತಾ ಸುಭಾಷ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಅವರು ಟ್ರೆಡಿಷನಲ್ ಲುಕ್ನಲ್ಲಿ ಗಮನ ಸೆಳೆದಿದ್ದಾರೆ.
2022ರಲ್ಲಿ ಪ್ರಣಿತಾ ಅವರ ಯಾವುದೇ ಹೊಸ ಸಿನಿಮಾ ರಿಲೀಸ್ ಆಗಿಲ್ಲ. ಸದ್ಯ ಎರಡು ಚಿತ್ರದ ಕೆಲಸಗಳಲ್ಲಿ ಪ್ರಣಿತಾ ಬ್ಯುಸಿ ಇದ್ದಾರೆ.
2010ರ ‘ಪೊರ್ಕಿ’ ಚಿತ್ರದ ಮೂಲಕ ಪ್ರಣಿತಾ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಹಲವು ಸ್ಟಾರ್ಗಳ ಜೊತೆ ಅವರು ತೆರೆ ಹಂಚಿಕೊಂಡಿದ್ದಾರೆ. ವಿವಿಧ ಭಾಷೆಗಳಲ್ಲಿ ಅವರು ನಟಿಸಿದ್ದಾರೆ.
2021ರ ಮೇ ತಿಂಗಳಲ್ಲಿ ಪ್ರಣಿತಾ ಉದ್ಯಮಿ ನಿತೀನ್ ರಾಜು ಜೊತೆ ಮದುವೆ ಆದರು. 2022ರಲ್ಲಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದರು.