- Kannada News Photo gallery Priyank Kharge inspected the construction of a model toilet from waste materials in a private industry in Doddaballapur Industrial Area
ಬೆಂಗಳೂರು ಗ್ರಾಮಾಂತರ: ತ್ಯಾಜ್ಯ ವಸ್ತುಗಳಿಂದ ಮಾದರಿ ಶೌಚಾಲಯ ನಿರ್ಮಾಣ; ಪರಿಶೀಲಿಸಿದ ಖರ್ಗೆ, ಇಲ್ಲಿದೆ ಪೋಟೋಸ್
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದ ಖಾಸಗಿ ಕೈಗಾರಿಕೆಯಲ್ಲಿ ನೂತನವಾಗಿ ತ್ಯಾಜ್ಯ ವಸ್ತುಗಳನ್ನ ಬಳಕೆ ಮಾಡಿಕೊಂಡು ನಿರ್ಮಾಣ ಮಾಡಿರುವ ಕಡಿಮೆ ವೆಚ್ಚದ ಶೌಚಾಲಯಗಳ ಮಾದರಿಯನ್ನ ತಯಾರಿಸಿದ್ದಾರೆ. ಇಂದು(ನ.03) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
Updated on: Nov 03, 2023 | 10:29 PM

ತ್ಯಾಜ್ಯ ವಸ್ತುಗಳಿಂದ ಮಾದರಿ ಶೌಚಾಲಯ ನಿರ್ಮಾಣ ಮಾಡಲಾಗಿದ್ದು, ಕಲ್ಯಾಣ ಕರ್ನಾಟಕದಲ್ಲಿ 400 ಶೌಚಾಲಯ ನಿರ್ಮಾಣಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಚಿಂತನೆ ನಡೆಸಿದ್ದಾರೆ.

ಹೌದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಲಭವಾಗಿ ಕಡಿಮೆ ಖರ್ಚಿನಲ್ಲಿ, ಕಡಿಮೆ ಅವಧಿಯಲ್ಲಿ ಮಾದರಿ ಶೌಚಾಲಯಗಳನ್ನ ನಿರ್ಮಾಣ ಮಾಡಲು ಸಚಿವ ಪ್ರಿಯಾಂಕ್ ಖರ್ಗೆ ಚಿಂತನೆ ನಡೆಸಿದ್ದು, ಮಾದರಿ ಶೌಚಾಲಯಗಳ ಪರಿಶೀಲನೆಯನ್ನ ನಡೆಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದ ಖಾಸಗಿ ಕೈಗಾರಿಕೆಯಲ್ಲಿ ನೂತನವಾಗಿ ತ್ಯಾಜ್ಯ ವಸ್ತುಗಳನ್ನ ಬಳಕೆ ಮಾಡಿಕೊಂಡು ನಿರ್ಮಾಣ ಮಾಡಿರುವ ಕಡಿಮೆ ವೆಚ್ಚದ ಶೌಚಾಲಯಗಳ ಮಾದರಿಯನ್ನ ತಯಾರಿಸಿದ್ದಾರೆ.

ಇಂದು(ನ.03) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.

ಜೊತೆಗೆ ಸುಲಭವಾಗಿ ನಿರ್ಮಾಣ ಮಾಡಬಹುದಾದ ಇಂತಹ 400 ಶೌಚಾಲಯಗಳನ್ನ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಹಿಳೆಯರಿಗಾಗಿ ನಿರ್ಮಾಣ ಮಾಡಲು ಚಿಂತನೆ ನಡೆಸಿದ್ದು, ಆ ನಿಟ್ಟಿನಲ್ಲಿ ತಜ್ಞರ ಜೊತೆ ಆಗಮಿಸಿದ್ದರು.

ಇನ್ನು ಈ ವೇಳೆ ಸಚಿವರಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಆಯುಕ್ತ ಪವನ್ ಕುಮಾರ್, ಪಂಚಾಯತ್ ರಾಜ್ ಆಯುಕ್ತರಾದ ಪ್ರಿಯಾಂಕಾ ಮೇರಿ ಪ್ರಾನ್ಸಿಸ್ ಸ್ಥಳೀಯ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜು ಸೇರಿದಂತೆ ಹಲವು ಅಧಿಕಾರಿಗಳು ಸಾಥ್ ನೀಡಿದ್ರು.



