- Kannada News Photo gallery Puneeth Rajkumar and Kalatapasvi Rajesh last meet was at Old Monk movie trailer launch
ಪುನೀತ್-ರಾಜೇಶ್ ಕೊನೇ ಭೇಟಿಯ ಕ್ಷಣಗಳು; ಅಗಲಿದ ಸಾಧಕರಿಗೆ ಇದು ಚಿತ್ರನಮನ
‘ತಲಾತಪಸ್ವಿ’ ರಾಜೇಶ್ ಇಂದು (ಫೆ.19) ನಿಧನರಾಗಿದ್ದಾರೆ. ಪುನೀತ್ ರಾಜ್ಕುಮಾರ್ ಮತ್ತು ರಾಜೇಶ್ ಅವರು ‘ಓಲ್ಡ್ ಮಾಂಕ್’ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಕೊನೇ ಬಾರಿಗೆ ಭೇಟಿ ಆಗಿದ್ದರು.
Updated on: Feb 19, 2022 | 2:28 PM

Puneeth Rajkumar and Kalatapasvi Rajesh last meet was at Old Monk movie trailer launch

Puneeth Rajkumar and Kalatapasvi Rajesh last meet was at Old Monk movie trailer launch

ಕನ್ನಡ ಚಿತ್ರರಂಗಕ್ಕೆ ಈ ಸಾಧಕರ ಕೊಡುಗೆ ಅಪಾರ. ಪುನೀತ್ ರಾಜ್ಕುಮಾರ್ ಮತ್ತು ರಾಜೇಶ್ ಅವರು ಹಲವು ದಶಕಗಳ ಕಾಲ ಚಂದನವನಕ್ಕೆ ಕಲಾ ಸೇವೆಯನ್ನು ಸಲ್ಲಿಸಿದ್ದರು. ಇಂದು ಇಬ್ಬರೂ ನಮ್ಮೊಂದಿಗೆ ಇಲ್ಲ.

‘ಓಲ್ಡ್ ಮಾಂಕ್’ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ಪುನೀತ್ ರಾಜ್ಕುಮಾರ್ ಅವರು ರಾಜೇಶ್ ಜೊತೆ ಉಭಯಕುಶಲೋಪರಿ ವಿಚಾರಿಸಿದ್ದರು. ಅದೇ ಅವರಿಬ್ಬರ ಕೊನೇ ಭೇಟಿ ಆಗಲಿದೆ ಎಂದು ಯಾರೂ ಊಹಿಸಿರಲಿಲ್ಲ.

ಪುನೀತ್ ರಾಜ್ಕುಮಾರ್ ಅವರು ಚಿತ್ರರಂಗದ ಹಿರಿಯರಿಗೆ ಅಪಾರವಾಗಿ ಗೌರವ ನೀಡುತ್ತಿದ್ದರು. ಅದೇ ರೀತಿ ‘ಕಲಾತಪಸ್ವಿ’ ರಾಜೇಶ್ ಅವರು ಎಲ್ಲರ ಪ್ರೀತಿ ಸಂಪಾದಿಸಿದ್ದರು. ಇಬ್ಬರಿಗೂ ಅಭಿಮಾನಿಗಳು ಈಗ ಶ್ರದ್ಧಾಂಜಲಿ ಕೋರುತ್ತಿದ್ದಾರೆ.

‘ಓಲ್ಡ್ ಮಾಂಕ್’ ಟ್ರೇಲರ್ ರಿಲೀಸ್ ಕಾರ್ಯಕ್ರಮದ ಖುಷಿಯ ಕ್ಷಣಗಳಲ್ಲಿ ಇಡೀ ತಂಡ ಭಾಗಿ ಆಗಿತ್ತು. ಆದರೆ ಸಿನಿಮಾದ ರಿಲೀಸ್ ಸಮಯದಲ್ಲಿ ಪುನೀತ್ ಮತ್ತು ರಾಜೇಶ್ ಅವರು ಇಲ್ಲ ಎಂಬ ಕೊರಗು ತೀವ್ರವಾಗಿ ಕಾಡುತ್ತಿದೆ.














