- Kannada News Photo gallery Rachana Rai Is Age Movies Biography Devil Movie Heroine Is Author And Dog Lover
ಎಲ್ಲ ಹೀರೋಯಿನ್ಗಳಂತಲ್ಲ ‘ಡೆವಿಲ್’ ನಾಯಕಿ; ರಚನಾ ರೈ ಬಗೆಗಿನ ಅಪರೂಪದ ಮಾಹಿತಿ
Rachana Rai: ರಚನಾ ರೈ ಅವರು ‘ಡೆವಿಲ್’ ಚಿತ್ರದ ಮೂಲಕ ಮಿಂಚಲು ರೆಡಿ ಆಗಿದ್ದಾರೆ. ಈ ಸಿನಿಮಾದಲ್ಲಿ ಅವರು ದರ್ಶನ್ ಜೊತೆ ನಟಿಸಿದ್ದಾರೆ. ಈ ಚಿತ್ರದಲ್ಲಿ ದರ್ಶನ್ ಜೊತೆಗಿನ ಕೆಮಿಸ್ಟ್ರಿ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಹಾಗಾದರೆ ರಚನಾ ರೈ ಯಾರು? ಅವರ ಹಿನ್ನೆಲೆ ಏನು? ಇಲ್ಲಿದೆ ವಿವರ.
Updated on: Dec 11, 2025 | 11:02 AM

ರಚನಾ ರೈ ಅವರು ‘ಡೆವಿಲ್’ ಚಿತ್ರದ ನಾಯಕಿ. ಅವರು ಮೂಲತಃ ಪುತ್ತೂರಿನವರು. ಅವರು ಪತ್ರಿಕೋದ್ಯದಲ್ಲಿ ಪದವಿ ಪಡೆದಿದ್ದಾರೆ. ನಟನೆ ಜೊತೆಗೆ ಅವರು ಬರವಣಿಗೆಯಲ್ಲೂ ಪಳಗಿದ್ದಾರೆ. ಅವರು ಮಾಡೆಲ್. ಭರತನಾಟ್ಯ ಕೂಡ ಕಲಿತಿದ್ದಾರೆ.

‘ನನಗೆ ಶ್ವಾನ ಎಂದರೆ ಪ್ರೀತಿ. ನಾನು ಪ್ರಾಣಿ ಪ್ರಿಯೆ. ಓಹ್ ಮೈ ಡಾಗ್ ನನ್ನ ಪುಸ್ತಕದ ಹೆಸರು. ನಾನು ಹೊಸ ದಿಗಂತಕ್ಕೆ ಆರ್ಟಿಕಲ್ ಬರೆಯುತ್ತಿದ್ದೆ. 50ಕ್ಕೂ ಹೆಚ್ಚು ಆರ್ಟಿಕಲ್ ಬರೆದೆ. ಶ್ವಾನಗಳ ಬಗ್ಗೆ ಇಷ್ಟೆಲ್ಲ ಗೊತ್ತಿದ್ರೆ ಪುಸ್ತಕ ಬರೆಯಿರಿ ಎಂದು ಲೆಕ್ಚರ್ ಹೇಳಿದರು. ಅವರು ಒತ್ತಾಯ ಮಾಡಿದ್ದಕ್ಕೆ ನಾನು ಈ ಪುಸ್ತಕ ಬರೆದೆ’ ಎಂದು ಸಂದರ್ಶನ ಒಂದರಲ್ಲಿ ಅವರು ಹೇಳಿಕೊಂಡಿದ್ದರು.

ಅವರು ಈ ಚಿತ್ರಕ್ಕೆ ನಾಯಕಿ ಆಗಿ ಆಯ್ಕೆ ಆಗಿದ್ದು ಹೇಗೆ? ಅದಕ್ಕೂ ಉತ್ತರ ನೀಡಿದ್ದರು ರಚನಾ ರೈ. ದರ್ಶನ್ ಅವರ ಕಾರಣಕ್ಕೆ ಅವಕಾಶ ಸಿಕ್ಕಿದೆ ಎಂಬುದು ರಚನಾ ಮಾತು. ‘ಹೊರಗಿನವರು ಬೇಡ ನಮ್ಮವರನ್ನೇ ಆಯ್ಕೆ ಮಾಡಿಕೊಳ್ಳೋಣ ಎಂದಿದ್ದಕ್ಕೆ ನನಗೆ ಅವಕಾಶ ಸಿಕ್ಕಿತು’ ಎಂದಿದ್ದಾರೆ ರಚನಾ.

‘ನಾನು ಆಡಿಷನ್ ಕೊಟ್ಟೆ. ಪ್ರಕಾಶ್ ಅವರಿಗೆ ಇಷ್ಟ ಆಯ್ತು. ಅಲ್ಲಿಂದ ನನ್ನ ಪ್ರಯಾಣ ಆರಂಭ ಆಯಿತು’ ಎಂದಿದ್ದಾರೆ ರಚನಾ. ದರ್ಶನ್ ಕೂಡ ಪ್ರಾಣಿ ಲವರ್. ‘ನಾನು ಪ್ರಾಣಿ, ಕಾರುಗಳ ಬಗ್ಗೆ ದರ್ಶನ್ ಜೊತೆ ಮಾತನಾಡುತ್ತಿದ್ದೆ’ ಎಂದಿದ್ದಾರೆ ರಚನಾ.

ರಚನಾ ಅವರು ‘ಡೆವಿಲ್’ ಸಿನಿಮಾ ಮೂಲಕ ಗೆದ್ದರೆ ಅವರಿಗೆ ದೊಡ್ಡ ಯಶಸ್ಸು ಸಿಗಲಿದೆ. ಹಲವು ಸಿನಿಮಾ ಅವಕಾಶಗಳನ್ನು ಅವರನ್ನು ಹುಡುಕಿ ಬರಲಿವೆ. ಅವರು ಚಿತ್ರರಂಗದಲ್ಲಿ ಯಶಸ್ವಿ ನಾಯಕಿ ಎನಿಸಿಕೊಳ್ಳಲಿದ್ದಾರೆ.




