ಫಿಲ್ಮ್ಫೇರ್ನಿಂದ ಸೈಮಾವರೆಗೆ ರಾಧಿಕಾ ಪಂಡಿತ್ ಪಡೆದ ಪ್ರಶಸ್ತಿಗಳೆಷ್ಟು? ಇಲ್ಲಿದೆ ಪೂರ್ತಿ ವಿವರ
ಕನ್ನಡ ಚಿತ್ರರಂಗದಲ್ಲಿ ರಾಧಿಕಾ ಪಂಡಿತ್ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ನಟನೆ ಮೂಲಕ ಗಮನ ಸೆಳೆದ ಅವರನ್ನು ಹಲವು ಪ್ರಶಸ್ತಿಗಳು ಅರಸಿ ಬಂದಿವೆ.
Updated on: Mar 07, 2022 | 3:53 PM

Radhika Pandit biography: List of awards received by Radhika Pandit

Radhika Pandit biography: List of awards received by Radhika Pandit

ನಟ ತರುಣ್ ಚಂದ್ರ ಜೊತೆ ರಾಧಿಕಾ ಪಂಡಿತ್ ಅಭಿನಯಿಸಿದ ಸಿನಿಮಾ ‘ಲವ್ ಗುರು’. ಈ ಚಿತ್ರ 2009ರಲ್ಲಿ ತೆರೆಕಂಡಿತು. ಈ ಸಿನಿಮಾದಲ್ಲಿನ ನಟನೆಗೆ ರಾಧಿಕಾ ಪಂಡಿತ್ ಅವರಿಗೆ ‘ಅತ್ಯುತ್ತಮ ನಟಿ’ ಫಿಲ್ಮ್ ಫೇರ್ ಪ್ರಶಸ್ತಿ ಸಿಕ್ಕಿತು.

ಧ್ರುವ ಸರ್ಜಾ ನಟನೆಯ ಮೊದಲ ಸಿನಿಮಾ ‘ಅದ್ದೂರಿ’. ಆ ಚಿತ್ರದಲ್ಲಿ ರಾಧಿಕಾ ಪಂಡಿತ್ ಮತ್ತು ಧ್ರುವ ಸರ್ಜಾ ನಡುವಿನ ಕೆಮಿಸ್ಟ್ರಿ ಜನರಿಗೆ ಇಷ್ಟ ಆಯ್ತು. ‘ಅದ್ದೂರಿ’ ಚಿತ್ರದಲ್ಲಿನ ನಟನೆಗೆ ರಾಧಿಕಾ ಅವರು ‘ಉದಯ ಫಿಲ್ಮ್ ಅವಾರ್ಡ್ಸ್’ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು.

‘ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ’ ಸಿನಿಮಾ ಕೂಡ ಬಾಕ್ಸ್ ಆಫೀಸ್ನಲ್ಲಿ ಸೂಪರ್ ಹಿಟ್ ಆಯಿತು. ಯಶ್ ಮತ್ತು ರಾಧಿಕಾ ಪಂಡಿತ್ ನಟನೆ ಕಂಡು ಫ್ಯಾನ್ಸ್ ವಾವ್ ಎಂದರು. ಆ ಚಿತ್ರದಲ್ಲಿನ ಅಭಿನಯಕ್ಕೆ ರಾಧಿಕಾ ಅವರಿಗೆ ‘ಸೈಮಾ ಅವಾರ್ಡ್ಸ್’ ಮತ್ತು ‘ಐಫಾ ಉತ್ಸವಂ’ನಲ್ಲಿ ‘ಅತ್ಯುತ್ತಮ ನಟಿ’ ಪ್ರಶಸ್ತಿ ಸಿಕ್ಕಿತು.



















